ಸಿನಿಮಾ ಲೋಕದಲ್ಲಿ ಡಿವೋರ್ಸ್​​​ ಬಿರುಗಾಳಿ; 2026ರಲ್ಲಿ ದಾಂಪತ್ಯ ಜೀವನಕ್ಕೆ ಗುಡ್​ಬೈ ಹೇಳಿದ ಸ್ಟಾರ್ ಜೋಡಿಗಳು ಇವರೇ..Celebrity Breakups

Celebrity Breakups 2026
Celebrity Breakups 2026
Published on

ಪ್ರಮುಖ ಮುಖ್ಯಾಂಶಗಳು

  • 2026ರ ಮೊದಲ 5 ತಿಂಗಳಲ್ಲೇ ಸ್ಟಾರ್ ಜೋಡಿಗಳಿಂದ ಡಿವೋರ್ಸ್​​ ಅನೌನ್ಸ್.
  • ಸೆಲಬ್ರೆಟಿಗಳ ದಾಂಪತ್ಯ ಜೀವನಕ್ಕೆ ಗುಡ್​ಬೈ,ಅಭಿಮಾನಿಗಳಿಗೆ ತೀವ್ರ ಆಘಾತ.
  • ದಕ್ಷಿಣ ಭಾರತ, ಬಾಲಿವುಡ್ ಹಾಗೂ ಟಿವಿ ಲೋಕದ ಸ್ಟಾರ್‌ಗಳ ಸಂಸಾರದಲ್ಲಿ ಬಿರುಕು.
Celebrity Breakups 2026: ಈ ಬಾರಿ ಭಾರತೀಯ ಸಿನಿಮಾ ರಂಗದಲ್ಲಿ ಮದುವೆ ಗಾಸಿಪ್​​​, ಸೆಲಬ್ರೆಟಿಗಳ ಸುತ್ತಾಟ, ಡೇಟಿಂಗ್​ಗಿಂತ ಹೆಚ್ಚು ಸದ್ದು ಮಾಡಿದ್ದು ಡಿವೋರ್ಸ್​ ಪ್ರಕರಣಗಳು, ಪತಿ ಅಥವಾ ಪತ್ನಿತಯಿದ್ದು ಮತ್ತೊಬ್ಬರ ಜೊತೆಗೆ ಡೇಟಿಂಗ್​ ಬೆಳೆಸಿದ ವಿಚಾರಗಳು ಹರಿದಾಡಿದ್ದೇ ಹೆಚ್ಚು. ತಮಿಳು ನಾಡು ಸಿಎಂ ವಿಜಯ್​, ರವಿ ಮೋಹನ್​, ಮೌನಿ ರಾಯ್​, ಹನ್ಸಿಕಾ ಸೇರಿದಂತೆ ಹಲವರು..ಇದು ಸೆಲಬ್ರೆಟಿಗಳಿಗೆ ಕಾಮನ್​. ಆದರೆ, ಅಘಾತಕ್ಕೊಳಗಾಗಿದ್ದು, ನೋವನುಭವಿಸಿದ್ದು ಮಾತ್ರ ಅಭಿಮಾನಿಗಳು.
2026ರ ಮೊದಲ ಐದು ತಿಂಗಳಲ್ಲೇ ಭಾರತೀಯ ಚಿತ್ರರಂಗದ ಪ್ರಮುಖ ಸ್ಟಾರ್ ಜೋಡಿಗಳು ತಮ್ಮ ದಾಂಪತ್ಯ ಜೀವನಕ್ಕೆ ಮುಕ್ತಾಯ ಕೊಟ್ಟುಕೊಳ್ಳುತ್ತಿದ್ದಾರೆ. ದಕ್ಷಿಣ ಭಾರತದ ಸೂಪರ್‌ಸ್ಟಾರ್‌ನಿಂದ ಹಿಡಿದು ಬಾಲಿವುಡ್ ಹಾಗೂ ಟಿವಿ ಲೋಕದ ಸ್ಟಾರ್‌ಗಳ ಸಂಸಾರದಲ್ಲಿ ಬಿರುಕು ಮೂಡಿದ್ದು, ವಿಚ್ಛೇದನದ ಸರಣಿ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.

ವಿಜಯ್​​, ಸಂಗೀತ

ವಿಜಯ್​ ಫ್ಯಾನ್​​ ಆಗಿ ಚೆನ್ನೈಗೆ ಭೇಟಿ ಕೊಟ್ಟಿದ್ದ ಸಂಗೀತಾ ಅವರು 1999ರಲ್ಲಿ ಸಂಗಾತಿಯಾಗಿ ಸ್ಟಾರ್​ ನಟನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ, ಇತ್ತೀಚೆಗೆ ತ್ರಿಷಾ ಜೊತೆಗೆ ವಿಜಯ್​ ಓಡಾಟ ಹೆಚ್ಚಾದ ನಂತರ 25 ವರ್ಷಗಳ ದಾಂಪತ್ಯ ಜೀವನಕ್ಕೆ ವಿರಾಮ ಬೇಕೆಂದು ಕೋರ್ಟ್​ ಮೊರೆ ಹೋದರು. ವಿಚ್ಛೇದನ ಕೋರಿ ಚೆಂಗಲ್ಪಟ್ಟು ಕುಟುಂಬ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. 2021 ರಲ್ಲಿ ನಟಿಯೊಂದಿಗೆ ಅನೈತಿಕ ಸಂಬಂಧದಲ್ಲಿ ತೊಡಗಿದ್ದಾರೆಂದು ಹೇಳಿಕೊಂಡಿದ್ದಾರೆ. 2026ರ ಫೆಬ್ರವರಿಯಲ್ಲಿ ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ್ರು.

ಮೌನಿ ರಾಯ್- ಸೂರಜ್​ ನಂಬಿಯಾರ್​

ಸೂರಜ್​ ನಂಬಿಯಾರ್ ಮತ್ತು ನಾಗಿನ್​ ಸೀರಿಯಲ್​ನ ಖ್ಯಾತ ನಟಿ ಮೌನಿರಾಯ್​​ ಅಧಿಕೃತವಾಗಿ ಡಿವೋರ್ಸ್​ ಬಗ್ಗೆ ಘೋಷಿಸಿದ್ದಾರೆ. ಗಂಭೀರವಾಗಿ ಚಿಂತಿಸಿ, ಕೊನೆಗೆ ಡಿವೋರ್ಸ್​ ಪಡೆಯಲು, ಆ ಮೂಲಕ ಇಬ್ಬರು " ಪರಸ್ಪರ ಬೇರ್ಪಡಲು ನಿರ್ಧರಿಸಿದ್ದೇವೆ ಎಂದು ಇಬ್ಬರು ಪೋಸ್ಟ್ ಮಾಡಿದ್ದರು. 2022ರ ಜನವರಿಯಲ್ಲಿ ಗೋವಾದಲ್ಲಿ ಅದ್ದೂರಿಯಾಗಿ ಹಸೆಮಣೆ ಏರಿದ್ದರು.

ಎವೆಲಿನ್ ಶರ್ಮಾ ಮತ್ತು ತುಷಾನ್ ಭಿಂಡಿ

' ಯೇ ಜವಾನಿ ಹೈ ದಿವಾನಿ ' ಚಿತ್ರದ ನಟಿ ಎವೆಲಿನ್ ಶರ್ಮಾ ಉದ್ಯಮಿ ಹಾಗೂ ದಂತವೈದ್ಯ ತುಷಾನ್ ಭಿಂಡಿ 2021ರ ಮೇ 15ರಂದು ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ವಿವಾಹವಾದರು. ಅವರಿಗೆ ಅವಾ ಮತ್ತು ಆರ್ಡೆನ್ ಎಂಬ ಹೆಸರಿನ ಮಕ್ಕಳಿದ್ದಾರೆ. ಐದು ವರ್ಷಗಳ ವಿವಾಹ ಜೀವನದ ನಂತರ ಪ್ರತ್ಯೇಕವಾಗಲು ನಿರ್ಧರಿಸಿದ್ದಾರೆ. ಮಕ್ಕಳ ಪಾಲನೆಯನ್ನು ಒಟ್ಟಾಗಿ ಮುಂದುವರಿಸಲು ತೀರ್ಮಾನಿಸಿದ್ದಾರೆ.

ಹನ್ಸಿಕಾ ಮೋಟ್ವಾನಿ-ಸೊಹೈಲ್ ಖತುರಿಯಾ

ದೇಶಮುದ್ರುಡು, ಅರೈನ್​ ಮನೆ, ಓ ಮೈ ಫ್ರೆಂಡ್, ರೋಮಿಯೋ ಜೂಲಿಯಟ್​ನಂತಹ ಸಿನಿಮಾಗಳಿಂದ ಹಿಟ್​ ಕಮಡ ಹನ್ಸಿಕಾ ಮೋಟ್ವಾನಿಯವರು 2022ರಲ್ಲಿ ನಟಿ ಹನ್ಸಿಕಾ ಮೋಟ್ವಾನಿ ಅವರ ಪತಿ ಮುಂಬೈ ಮೂಲದ ಉದ್ಯಮಿ ಸೊಹೈಲ್ ಖತುರಿಯಾ ಜೊತೆಗೆ ಹಸೆಮಣೆ ಏರಿದ್ದರು. ನಂತರ ಉಂಟಾದ ಭಿನ್ನಾಭಿಪ್ರಾಯಗಳಿಂದಾಗಿ ಈ ದಂಪತಿಗಳು 2026 ರ ಮಾರ್ಚ್ 11 ರಂದು ಮುಂಬೈನ ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದುಕೊಂಡರು.

ರವಿ ಮೋಹನ್ -ಆರತಿ

ಸಂತೋಷ್ ಸುಬ್ರಮಣ್ಯಂ, ಟಿಕ್ ಟಿಕ್, ಪೊನ್ನಿಯನ್​ ಸೆಲ್ವನ್, ರೋಮಿಯೋ ಜೂಲಿಯಟ್, ಕೋಮಾಲಿ ಸಿನಿಮಾ ಸೇರಿದಂತೆ ಸಾಕಷ್ಟು ಸಿನಿಮಾಗಳನ್ನು ಹಿಟ್​​ ಕೊಟ್ಟ ರವಿ ಮೋಹನ್​ ತಮ್ಮ ಸುದೀರ್ಘ ದಾಂಪತ್ಯ ಜೀವನಕ್ಕೆ ಗುಡ್​ಬೈ ಹೇಳಲು ಮುಂದಾಗಿದ್ದಾರೆ. ಸುಜಾತಾ ವಿಜಯಕುಮಾರ್ ಅವರ ಪುತ್ರಿ ಆರತಿ ಮತ್ತು ನಟ ನಟ ರವಿ ಮೋಹನ್‌ಗೂ 2009 ರಲ್ಲಿ ವಿವಾಹವಾಗಿತ್ತು. ಆದರೆ, ತಮ್ಮ ವೈವಾಹಿಕ ಜೀವನದಲ್ಲಿ ಉಂಟಾದ ಭಿನ್ನಾಭಿಪ್ರಾಯಗಳಿಂದಾಗಿ ಇಬ್ಬರೂ ಬೇರ್ಪಡುತ್ತಿದ್ದಾರೆ. ಇತ್ತೀಚೆಗೆ ಮೀಡಿಯಾಗಳ ಮುಂದೆ ಸುದ್ದಿಗೋಷ್ಠಿ ನಡೆಸಿ ಸಂಸಾರದ ಗುಟ್ಟನ್ನು ರಟ್ಟು ಮಾಡಿದ್ದರು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net