ಟಾಲಿವುಡ್​ ನಿರ್ದೇಶಕರ ವೆಬ್​ಸಿರೀಸ್​ನಲ್ಲಿ ಶಾಹಿದ್​ ಕಪೂರ್!

SCOOP
Published on

ಓಟಿಟಿ ವೇದಿಕೆ ಎಲ್ಲರ ಗಮನ ಸೆಳೆಯುತ್ತಿದೆ. ಸ್ಟಾರ್ ಸಿನಿಮಾ ನಟರು ಸಿನಿಮಾದ ಜತೆಗೆ ವೆಬ್​ಸಿರೀಸ್​ಗಳ ಭಾಗವಾಗುತ್ತಿದೆ. ಇತ್ತೀಚೆಗಷ್ಟೇ ಅಭಿಷೇಕ್​ ಬಚ್ಚನ್​ ಬ್ರೀಥ್​ ವೆಬ್​ಸರಣಿಯಲ್ಲಿ ಕಾಣಿಸಿಕೊಂಡಿದ್ದರು. ಅದೇ ರೀತಿ ಇನ್ನೂ ಹಲವು ನಟರು ವೆಬ್​ಸಿರೀಸ್​ ಮಾಡುವ ಬಗ್ಗೆ ಘೋಷಣೆ ಮಾಡಿದ್ದಾರೆ. ಅದೇ ರೀತಿ ಇದೀಗ ಬಾಲಿವುಡ್ ನಟ ಶಾಹಿದ್​ ಕಪೂರ್ ಸಹ ವೆಬ್​ ಸರಣಿಯತ್ತ ದೃಷ್ಟಿ ನೆಟ್ಟಿದ್ದಾರೆ.

ಅಚ್ಚರಿ ವಿಚಾರ ಏನೆಂದರೆ, ಈ ವೆಬ್​ ಸರಣಿಯನ್ನು ದಕ್ಷಿಣ ಭಾರತದ ಟಾಲಿವುಡ್​ನ ಇಬ್ಬರು ನಿರ್ದೇಶಕರು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ರಾಜ್ ನಿಡಿಮೊರು​ ಮತ್ತು ಕೃಷ್ಣ ಡಿಕೆ ಈಗಾಗಲೇ ಫ್ಯಾಮಿಲಿ ಮ್ಯಾನ್​ ಮೂಲಕ ಸದ್ದು ಮಾಡಿದ್ದಾರೆ. ಸಮಂತಾ ಅವರನ್ನೂ ಎರಡನೇ ಸೀಸನ್​ನಲ್ಲಿ ಪರಿಚಯಿಸುತ್ತಿದ್ದಾರೆ. ಇದೀಗ ಶಅಹಿದ್ ಕಪೂರ್​ಗೂ ವೆಬ್​ಸಿರೀಸ್​ ಬಗ್ಗೆ ಅಪ್ರೊಚ್ ಮಾಡಿದ್ದಾರೆ. ಈ ನಿರ್ದೇಶಕ ಜೋಡಿ ಹಿಂದಿಯಲ್ಲಿಯೂ ಹಲವು ಸಿನಿಮಾ ನಿರ್ದೇಶನ ಮಾಡಿದ್ದಾರೆ.

ಅಷ್ಟೇ ಅಲ್ಲ ಆ ವೆಬ್​ ಸಿರೀಸ್​ನ ಕಥೆಯನ್ನೂ ಹೇಳಿದ್ದು, ಶಾಹಿದ್ ಸಹ ಕಥೆ ಕೇಳಿ ಮಾಡುವ ಬಗ್ಗೆ ಗ್ರೀನ್ ಸಿಗ್ನಲ್​ ನೀಡಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್​ ಶೈಲಿಯ ಸರಣಿಯಲ್ಲಿ ಖ್ಯಾತ ನಾಮ ನಟರೂ ಇರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಯಾವಾಗ ಶುರುವಾಗಲಿದೆ ಎಂಬ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಅಮೆಜಾನ್​ ಪ್ರೈಂನಲ್ಲಿ ಈ ಸಿರೀಸ್ ಪ್ರಸಾರವಾಗಲಿದೆ. (ಏಜೆನ್ಸಿಸ್)​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net