ರಮ್ಯಾ ಪಾತ್ರಕ್ಕೆ ರಶ್ಮಿ ಗೌತಮ್; ತೆಲುಗಿಗೆ ರಿಮೇಕ್ ಆಗುತ್ತಿರುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ

rashmi
Published on

ಬೆಂಗಳೂರು: ಕಳೆದ ತಿಂಗಳು ರಾಜ್ಯಾದ್ಯಂತ ಬಿಡುಗಡೆಯಾದ ‘ಹಾಸ್ಟೆಲ್ ಹುಡುಗರು’ ಬೇಕಾಗಿದ್ದಾರೆ ಸಿನಿಮಾ ತೆಲುಗಿಗೆ ಡಬ್ ಆಗುತ್ತಿದೆ. ಇದೇ ತಿಂಗಳ 26ಕ್ಕೆ ‘ಬಾಯ್ಸ ಹಾಸ್ಟೆಲ್’ ಶೀರ್ಷಿಕೆಯಲ್ಲಿ ಟಾಲಿವುಡ್‌ನಲ್ಲಿ ರಿಲೀಸ್ ಆಗುತ್ತಿದೆ.

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ನಿತಿನ್ ಕೃಷ್ಣಮೂರ್ತಿ ನಿರ್ದೇಶನದ ಚೊಚ್ಚಲ ಸಿನಿಮಾ. ಬಹುತೇಕ ಹೊಸಬರೇ ನಟಿಸಿರುವ ಚಿತ್ರವಿದು. ಕಳೆದ ಜು. 21ರಂದು ರಾಜ್ಯಾದ್ಯಂತ ಬಿಡುಗಡೆಯಾದ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ವಿದೇಶಗಳಲ್ಲಿಯೂ ರಿಲೀಸ್ ಆಗಿ ಭರ್ಜರಿ ಪ್ರತಿಕ್ರಿಯೆ ಪಡೆದಿದೆ. ಅದರ ಬೆನ್ನಲ್ಲೇ ಇದೀಗ ಚಿತ್ರತಂಡ ತೆಲುಗು ರಾಜ್ಯಗಳತ್ತ ಮುಖ ಮಾಡಿದೆ. ಈಗಾಗಲೇ ಚಿತ್ರದ ಶೀರ್ಷಿಕೆ ಗೀತೆ ಯೂಟ್ಯೂಬ್‌ನಲ್ಲಿ ವೈರಲ್ ಆಗಿದೆ.

ಕನ್ನಡದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದರೆ’ ಚಿತ್ರದಲ್ಲಿ ಕಿರಿಯರ ತಂಡದ ಜತೆಗೆ ದಿಗಂತ್, ರಿಷಬ್ ಶೆಟ್ಟಿ, ಪವನ್ ಕುಮಾರ್ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲ, ಕಾಲೇಜಿನ ಲೆಕ್ಚರರ್ ಪಾತ್ರದಲ್ಲಿ ರಮ್ಯಾ ಬಣ್ಣ ಹಚ್ಚಿದ್ದರು. ಈಗ ರಮ್ಯಾ ಪಾತ್ರವನ್ನು ತೆಲುಗಿನಲ್ಲಿ ನಟಿ, ನಿರೂಪಕಿ ರಶ್ಮಿ ಗೌತಮ್ ಮಾಡಲಿದ್ದಾರೆ. ಈಗಾಗಲೇ ಅವರ ಭಾಗದ ಚಿತ್ರೀಕರಣ ನೆಲಮಂಗಲದಲ್ಲಿ ನಡೆಯುತ್ತಿದೆ. ಉಳಿದಂತೆ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಕಶ್ಯಪ್ ಛಾಯಾಗ್ರಹಣವಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net