ನಾನಾ ಪಾಟೇಕರ್ ಸಾವನ್ನು 'Evil Dead' ಎಂದ ತನುಶ್ರೀ ದತ್ತಾ: ಮತ್ತೆ ಮುನ್ನೆಲೆಗೆ ಬಂದ #MeToo ನಟಿ! Nana Patekar MeToo

ನಾನಾ ಪಾಟೇಕರ್ ಸಾವಿಗೆ ದೇಶವೇ ಕಂಬನಿ ಮಿಡಿಯುತ್ತಿದ್ದರೆ, ನಟಿ ತನುಶ್ರೀ ದತ್ತಾ 'Evil Dead' ಎಂದು ಆಕ್ರೋಶ ಹೊರಹಾಕಿದ್ದಾರೆ! ಮತ್ತೆ ಭುಗಿಲೆದ್ದ #MeToo ವಿವಾದದ ವಿವರ ಇಲ್ಲಿದೆ.
#MeToo-famed actress Tanushree Dutta makes a shocking statement following the news of Nana Patekar's demise.
ನಾನಾ ಪಾಟೇಕರ್ ನಿಧನದ ಬೆನ್ನಲ್ಲೇ ಶಾಕಿಂಗ್ ಹೇಳಿಕೆ ನೀಡಿದ #MeToo ಖ್ಯಾತಿಯ ನಟಿ ತನುಶ್ರೀ ದತ್ತಾ
Published on: 

ಮುಂಬೈ: ತಮ್ಮ ವಿಶಿಷ್ಟ ಅಭಿನಯ, ವಿನೂತನ ಡೈಲಾಗ್​ ಡೆಲಿವರಿ, ನೇರ, ನಿಷ್ಟುರ ವ್ಯಕ್ತಿತ್ವದ ಮೂಲಕ ಖ್ಯಾತರಾಗಿದ್ದ ಬಾಲಿವುಡ್​ ಹಿರಿಟ ನಟ ನಾನಾ ಪಾಟೇಕರ್​ ಗುರುವಾರ (ಅ.8) ಹೃದಯಾಘಾತದಿಂದ ನಿಧನ ಹೊಂದಿದ್ದಾರೆಂದು ವರದಿಯಾಗಿದೆ.

ಮಾಹಿತಿ ಪ್ರಕಾರ, ನಾನಾ ಪಾಟೇಕರ್​ ತಮ್ಮ ಸ್ವಗೃಹದಲ್ಲಿ ಬೆಳಿಗ್ಗೆ 5.20 ರ ಸುಮಾರಿಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣ ಕುಟುಂಬದವರು ಪಣಜಿಯ ಮಣಿಪಾಲ್​ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಾನಾ ಇಹಲೋಕ ತ್ಯಜಿಸಿದ್ದಾರೆಂದು ತಿಳಿದು ಬಂದಿದೆ.

ನಾನಾ ನಿಧನಕ್ಕೆ ದೇಶದ ಪ್ರಧಾನಿ, ರಾಷ್ಟ್ರಪತಿಯಿಂದ ಹಿಡಿದು, ಚಿತ್ರರಂಗ, ಕ್ರಿಕೆಟ್ ಸೇರಿದಂತೆ ಸರ್ವ ಕ್ಷೇತ್ರದದವರು ಕಂಬನಿ ಮಿಡಿಯುತ್ತಿದ್ದಾರೆ. ಆದರೆ, ನಾನಾ ಪಾಟೇಕರ್​ ವಿರುದ್ಧ ಮಿಟೂ ಆರೋಪ ಹೊರೆಸಿದ್ದ ನಟಿ ತನುಶ್ರೀ ದತ್ತಾ ನೀಡಿರುವ ಹೇಳಿಕೆ ಈಗ ಎಲ್ಲಡೆ ಚರ್ಚೆ ವಿಷಯವಾಗಿ ಮಾರ್ಪಟ್ಟಿದೆ.

ತನುಶ್ರೀ ಹೇಳಿದ್ದೇನು?

ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ನಟಿ ತನುಶ್ರೀ, ನಾನು ಇವತ್ತು ಲಖನೌಗೆ ಪ್ರಯಾಣ ಬೆಳೆಸಿದ್ದೆ. ಅಲ್ಲಿ ಇವತ್ತು ನನ್ನ ದೊಡ್ಡ ಶೋ ಇತ್ತು. ಘಟನೆ ಬಗ್ಗೆ ನನಗೆ ಬೆಳಿಗ್ಗೆ ತಿಳಿಯಿತು. ಇವತ್ತು ಎಲ್ಲಾ ಮಾಧ್ಯಮಗಳು ಈ ದುಷ್ಟನೊಬ್ಬನ ಸಾವಿ (Evil Dead) ಸುದ್ದಿಯನ್ನೇ ಚರ್ಚಿಸುತ್ತವೆ. ಖಂಡಿತ ಮನೆಯವರಿಗೆ ದುಃಖ ಭರಿಸುವ ಶಕ್ತಿ ದೊರೆಯಲಿ. ನಾನೇನು ರಿಯಾಕ್ಷನ್​ ಕೊಡಬೇಕು? ನಾನು ಏನು ರಿಯಾಕ್ಷನ್​ ಕೊಡಬೇಕು ಎಂದು ನಿರ್ಧರಿಸಿದ ನಂತರ ಸಂಪೂರ್ಣ ಹೇಳಿಕೆ ನೀಡುವುದಾಗಿ ತನುಶ್ರೀ ತಿಳಿಸಿದ್ದಾರೆ.

ಏನಿದು ಮಿಟೂ ವಿವಾದ?

ನಾನಾ ಪಾಟೇಕರ್​ ಹಾಗೂ ನಟಿ ತನುಶ್ರೀ ದತ್ತಾ ನಡುವಿನ ಈ ಮಿಟೂ ವಿವಾದ 2008 ರಲ್ಲಿ ತೆರೆಕಂಡ ‘ಹಾರ್ನ್ ಓಕೆ ಪ್ಲೀಸ್’ ಎಂಬ ಸಿನಿಮಾದ ಚಿತ್ರೀಕರಣದ ವೇಳೆ ನಡೆಯಿತೆಂದು ಹೇಳಲಾಗುತ್ತದೆ. ಈ ಸಿನಿಮಾದಲ್ಲಿ ತನುಶ್ರೀ ದತ್ತಾ ಅವರ ಐಟಂ ಡಾನ್ಸ್​ವೊಂದಿತ್ತು. ಅದರ ಶೂಟಿಂಗ್​ ಸಂದರ್ಭದಲ್ಲಿ ನಾನಾ ಪಾಟೇಕರ್​, ನಟಿ ಜೊತೆ ಅಸಭ್ಯವಾಗಿ ವರ್ತಿಸಿದರು ಹಾಗೂ ಕೆಟ್ಟದಾಗಿ ಸ್ಪರ್ಶಿಸಿದರು ಎನ್ನುವುದು ತನುಶ್ರೀ ಅವರ ಆರೋಪವಾಗಿತ್ತು.

ಈ ಘಟನೆಯಿಂದ ನನ್ನ ಮನಸ್ಸಿಗೆ ನೋವಾಗಿ ನಾನು, ಈ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದೆ. ಇದರಿಂದ ಕೋಪಗೊಂಡ ನಾನಾ ಪಾಟೇಕರ್, ತಮ್ಮ ಬೆಂಬಲಿಗರನ್ನು ಬಿಟ್ಟು ನನ್ನ ಕುಟುಂಬದವರ ಮೇಲೆ ದಾಳಿ ಮಾಡಿಸಿದ್ದರೆಂದು ತನುಶ್ರೀ ಗಂಭೀರ ಆರೋಪ ಹೊರಿಸಿದ್ದರು.

ನಂತರ, ಈ ಹಾಡಿಗೆ ತನುಶ್ರೀ ಬದಲು ರಾಖಿ ಸಾವಂತ್​ರನ್ನು ಆಯ್ಕೆ ಮಾಡಲಾಯಿತು. ನಾನು ನಾನಾ ವಿರುದ್ಧ ಚಲನಚಿತ್ರ ಮಂಡಲಿಗೆ ದೂರು ನೀಡಿದರೂ ಏನು ಪ್ರಯೋಜನವಾಗಲಿಲ್ಲ ಎಂದು ತನುಶ್ರೀ ಕಿಡಿಕಾರಿದ್ದರು.

2018 ರಲ್ಲಿ ಭುಗಿಲೆದ್ದ ಆಕ್ರೋಶ!

2018 ರ ಸಮಯದಲ್ಲಿ ಭಾರತ ಚಿತ್ರರಂಗದಲ್ಲಿ ಮಿಟೂ ಚಳುವಳಿ ಪ್ರಾರಂಭವಾದ ಸಂದರ್ಭದಲ್ಲಿ, ನಟಿ ತನುಶ್ರೀ, ಈ ನಾನಾ ಪಾಟೇಕರ್​, ಜನರ ಮುಂದೆ ತಾನೊಬ್ಬ ಸಜ್ಜನ ಎಂಬಂತೆ ಪೋಸ್ ಕೊಡುತ್ತಾನೆ, ಆದರೆ ಅವನಿಗೆ ಮಹಿಳೆಯರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎನ್ನುವ ಕನಿಷ್ಟ ಬುದ್ಧಿ ಎಂದು ನಟಿ, ನಾನಾ ವಿರುದ್ಧ ಮಿಟೂ ಆರೋಪ ಹೊರೆಸಿದ್ದರು.

ತನುಶ್ರೀ ಈ ಸಂದರ್ಭದಲ್ಲಿ ನಾನಾ ವಿರುದ್ಧ ಕಾನೂನು ಸಮರ ಸಾರಿ, ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದರು. ನಂತರ ಮುಂಬೈ ಪೊಲೀಸರು ನಾನಾ ಪಾಟೇಕರ್​ ಹಾಗೂ ನಿರ್ದೇಶಕ ಗಣೇಶ್ ಆಚಾರ್ಯ ವಿರುದ್ಧ ಎಫ್​ಐಆರ್​ ದಾಖಲಿಸಿದ್ದರು. ನಂತರ, ಈ ಬಗ್ಗೆ ವಿಚಾರಣೆ ನಡೆದು, ಸಾಕ್ಷಿಗಳ ಹೇಳಿಕೆ ಮತ್ತು ತನಿಖೆ ನಡೆಸಿದ ಪೊಲೀಸರಿಗೆ ನಾನಾ ಪಾಟೇಕರ್, ನಟಿ ಜತೆಗೆ ಅಸಭ್ಯ ವರ್ತನೆ ತೋರಿದ್ದಕ್ಕೆ ಯಾವುದೇ ಪುರಾವೆ ದೊರೆಯಲಿಲ್ಲ. ಹೀಗಾಗಿ ಈ ಪ್ರಕರಣದಿಂದ ನಾನಾ ನಿರಪರಾಧಿಯಾಗಿ ಹೊರಬಂದರು.

Also Read
ದೈತ್ಯ ಪ್ರತಿಭೆ ನಾನಾ ಪಾಟೇಕರ್​ ಇನ್ನಿಲ್ಲ: 'ನೀವು ನಿಜವಾದ ಲೆಜೆಂಡ್​' ಎಂದ ಕೊಹ್ಲಿ; 'ಮುಚ್ಚುಮರೆ ಇಲ್ಲದ ವ್ಯಕ್ತಿ' ಗೆ ಸಚಿನ್​ ಕಂಬನಿ! Nana Patekar Died
#MeToo-famed actress Tanushree Dutta makes a shocking statement following the news of Nana Patekar's demise.

ಆದರೆ, ಈ ಬಗ್ಗೆ ನಟಿ ತನುಶ್ರೀ ದತ್ತಾ, ಅಸಮಾಧಾನ ಹೊರಹಾಕುತ್ತಾ, ನಾನಾ ಪಾಟೇಕರ್ ಒಬ್ಬ ಪ್ರಭಾವಶಾಲಿ ವ್ಯಕ್ತಿ. ಅವರಿಗೆ ರಾಜಕಾರಣಿಗಳಿಂದ ಪೊಲೀಸರವರೆಗೆ ಸಂಪರ್ಕವಿದೆ. ಹೀಗಾಗಿ ಸಾಕ್ಷಿಗಳನ್ನು ಬೆದರಿಸಿ, ಕೇಸ್​ಅನ್ನು ಗೆದ್ದಿದ್ದಾರೆಂದು ನಟಿ ಹೇಳಿದ್ದರು. ಅಂತೆಯೇ, ನಾನಾ ಪಾಟೇಕರ್ ಈ ಎಲ್ಲಾ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸುತ್ತಾ. "ಆ ದಿನ ನೂರಾರು ಜನರಿದ್ದ ಸೆಟ್‌ನಲ್ಲಿ ನಾನು ಯಾರೊಂದಿಗೂ ಅಸಭ್ಯವಾಗಿ ವರ್ತಿಸಿಲ್ಲ. ಲೈಂಗಿಕ ಕಿರುಕುಳ ಎಂದರೇನು ಎಂಬುದೇ ನನಗೆ ಅರ್ಥವಾಗುತ್ತಿಲ್ಲ" ಎಂದು ಸ್ಪಷ್ಟನೆ ನೀಡಿದ್ದರು, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net