ದೈತ್ಯ ಪ್ರತಿಭೆ ನಾನಾ ಪಾಟೇಕರ್​ ಇನ್ನಿಲ್ಲ: 'ನೀವು ನಿಜವಾದ ಲೆಜೆಂಡ್​' ಎಂದ ಕೊಹ್ಲಿ; 'ಮುಚ್ಚುಮರೆ ಇಲ್ಲದ ವ್ಯಕ್ತಿ' ಗೆ ಸಚಿನ್​ ಕಂಬನಿ! Nana Patekar Died

ಹಿರಿಯ ನಟ ನಾನಾ ಪಾಟೇಕರ್ ನಿಧನಕ್ಕೆ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ಕಂಬನಿ ಮಿಡಿದಿದ್ದಾರೆ. ನಾನಾ ಪಾಟೇಕರ್ ಅವರ ಕ್ರಿಕೆಟ್ ಪ್ರೇಮದ ಅಪರೂಪದ ನೆನಪು ಇಲ್ಲಿದೆ.
Virat Kohli and Sachin Tendulkar pay tribute on the passing of Nana Patekar.
ನಾನಾ ಪಾಟೇಕರ್ ನಿಧನಕ್ಕೆ ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ಶ್ರದ್ಧಾಂಜಲಿ
Published on: 

ಮುಂಬೈ: ಬೆಳ್ಳಿಪರದೆಯ ಮೇಲೆ ತಮ್ಮದೇ ಆದ ಗತ್ತು, ಖಡಕ್ ಡೈಲಾಗ್ ಹಾಗೂ ಅದ್ಭುತ ನಟನೆಯಿಂದ ಕೋಟ್ಯಂತರ ಜನರ ಮನಸ್ಸು ಗೆದ್ದಿದ್ದ ಹಿರಿಯ ನಟ ನಾನಾ ಪಾಟೇಕರ್ ಇಂದು ಇಹಲೋಕ ತ್ಯಜಿಸಿದ್ದಾರೆ.

ಗುರುವಾರ (ಅ.8) ನಾನಾ ಪಾಟೇಕರ್​, ತಮ್ಮ ಸ್ವಗೃಹದಲ್ಲಿ ಬೆಳಿಗ್ಗೆ 5.20 ರ ಸುಮಾರಿಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣ ಕುಟುಂಬದವರು ಪಣಜಿಯ ಮಣಿಪಾಲ್​ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಾನಾ ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ.

ಅವರ ಅಗಲಿಕೆಯ ಸುದ್ದಿ ಇಡೀ ಸಿನಿಮಾರಂಗ ಮಾತ್ರವಲ್ಲದೆ ಪ್ರತಿಯೊಬ್ಬ ಭಾರತೀಯನಿಗೂ ತೀವ್ರ ಆಘಾತ ನೀಡಿದ್ದು, ಬರೀ ಸಿನಿಮಾ ಮಾತ್ರವಲ್ಲ, ಸಮಾಜ ಸೇವೆ ಮತ್ತು ಕ್ರಿಕೆಟ್ ಜಗತ್ತಿನಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದ ನಾನಾ ಅವರ ನಿಧನಕ್ಕೆ ಜಗತ್ತಿನಾದ್ಯಂತ ಅಭಿಮಾನಿಗಳು ಕಣ್ಣೀರಿಡುತ್ತಿದ್ದಾರೆ. ಟೀಮ್ ಇಂಡಿಯಾದ ದಿಗ್ಗಜ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಚ್ಚುಮೆಚ್ಚಿನ ನಟನಿಗೆ ಅತ್ಯಂತ ಭಾವುಕವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

Also Read
ದಿನಕ್ಕೆ 60 ಸಿಗರೇಟ್ ಸೇದುತ್ತಿದ್ದ ನಾನಾ ಪಾಟೇಕರ್… ಆ ಮಹಾ ಚಟದಿಂದ ಹೊರಬಂದಿದ್ದು ಹೇಗೆ ಗೊತ್ತಾ? Nana Patekar Smoking
Virat Kohli and Sachin Tendulkar pay tribute on the passing of Nana Patekar.

"ನಿಮ್ಮ ಪರಂಪರೆ ಎಂದಿಗೂ ಶಾಶ್ವತ": ವಿರಾಟ್ ಕೊಹ್ಲಿ ಭಾವುಕ

ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ರನ್‌ಮಷಿನ್ ವಿರಾಟ್ ಕೊಹ್ಲಿ, "ಭಾರತೀಯ ಚಿತ್ರರಂಗದ ಒಬ್ಬ ನಿಜವಾದ ಲೆಜೆಂಡ್ ನಮ್ಮನ್ನು ಅಗಲಿದ್ದಾರೆ. ಅವರ ಸಿನಿಮಾಗಳು, ಅವರು ಬಿಟ್ಟುಹೋದ ಪರಂಪರೆ ಮುಂದಿನ ಎಷ್ಟೋ ತಲೆಮಾರುಗಳವರೆಗೆ ಸದಾ ಜೀವಂತವಾಗಿರುತ್ತದೆ. ನಾನಾ ಪಾಟೇಕರ್ ಜೀ, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿ" ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

ನಾನಾ ಸರಳತೆ ನೆನಪಿಸಿಕೊಂಡ 'ಕ್ರಿಕೆಟ್​ ದೇವರು'

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೂಡ ನಾನಾ ಪಾಟೇಕರ್ ಅವರೊಂದಿಗಿನ ಒಡನಾಟ ಹಾಗೂ ಅವರ ನೇರ ನುಡಿಯನ್ನು ನೆನಪಿಸಿಕೊಂಡಿದ್ದಾರೆ. "ನಾನಾ ಪಾಟೇಕರ್ ಅವರನ್ನು ನಾನು ಎಂದಿಗೂ ಮುಚ್ಚುಮರೆಯಿಲ್ಲದ, ಅತ್ಯಂತ ನೇರ ವ್ಯಕ್ತಿಯಾಗಿ ನೆನಪಿಸಿಕೊಳ್ಳುತ್ತೇನೆ.

ಅವರ ನಟನೆಯಲ್ಲೂ ಅಷ್ಟೇ, ಯಾವುದೇ ಕೃತಕತೆ ಇರುತ್ತಿರಲಿಲ್ಲ, ಸಂಪೂರ್ಣ ಪ್ರಾಮಾಣಿಕತೆ ಕಾಣುತ್ತಿತ್ತು. ಹಿಂದಿ ಮತ್ತು ಮರಾಠಿ ಸಿನಿಮಾಗಳಲ್ಲಿ, ಅವರು ಮಾಡಿದ ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬುತ್ತಿದ್ದರು. ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ತುಂಬಾ ನೋವಾಯಿತು. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ" ಎಂದು ಸಚಿನ್ ಕಂಬನಿ ಮಿಡಿದಿದ್ದಾರೆ.

ನಾನಾ ಪಾಟೇಕರ್ ಅವರಿಗೆ ಕ್ರಿಕೆಟ್ ಎಂದರೆ ಎಲ್ಲಿಲ್ಲದ ಹುಚ್ಚು!

ನಾನಾ ಪಾಟೇಕರ್ ಸಿನಿಮಾಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಕ್ರಿಕೆಟ್ ಮೇಲಿನ ಅವರ ಪ್ರೀತಿ ಕಿಂಚಿತ್ತೂ ಕಡಿಮೆಯಾಗುತ್ತಿರಲಿಲ್ಲ. ಟೀಮ್ ಇಂಡಿಯಾ​ ಮ್ಯಾಚ್ ಇದ್ದರಂತೂ ಟಿವಿ ಮುಂದೆ ಕುಳಿತು ಸಂಪೂರ್ಣ ಪಂದ್ಯವನ್ನು ವೀಕ್ಷಿಸುತ್ತಿದ್ದಾಗಿ ನಟ ಹಲವು ಸಂದರ್ಶನಗಳಲ್ಲಿ ಹೇಳಿದ್ದರು.

Also Read
ಕೈಯಲ್ಲಿ ಮದ್ಯದ ಗ್ಲಾಸು, ಮನಸ್ಸಿನಲ್ಲಿ ₹1.5 ಕೋಟಿ ಕಾರಿನ ಕನಸು…ರೈತನ ಸಾವಿನ ಸುದ್ದಿ ಕಂಡ ಬಳಿಕ "ನಾನಾ" ಮಾಡಿದ್ದೇನು ಗೊತ್ತಾ? Nana Patekar
Virat Kohli and Sachin Tendulkar pay tribute on the passing of Nana Patekar.

ವಿರಾಟ್ ಕೊಹ್ಲಿ ಔಟಾದರೆ ಊಟವೇ ಸೇರುತ್ತಿರಲಿಲ್ಲ!

ಕ್ರಿಕೆಟ್ ಜಗತ್ತಿನಲ್ಲಿ ನಾನಾ ಪಾಟೇಕರ್ ಅವರಿಗೆ ವಿರಾಟ್ ಕೊಹ್ಲಿ ಎಂದರೆ ಪ್ರಾಣ. ಕೊಹ್ಲಿ ಬ್ಯಾಟಿಂಗ್ ಶೈಲಿ, ಮೈದಾನದಲ್ಲಿ ಅವರು ತೋರುವ ಆಕ್ರಮಣಶೀಲತೆ ಮತ್ತು ಉತ್ಸಾಹಕ್ಕೆ ನಾನಾ ಅಕ್ಷರಶಃ ಫಿದಾ ಆಗಿದ್ದರು. ಹಲವು ಸಂದರ್ಶನಗಳಲ್ಲಿ ಈ ಬಗ್ಗೆ ಖುದ್ದು ನಾನಾ ಪಾಟೇಕರ್ ಅಭಿಪ್ರಾಯ ಹಂಚಿಕೊಂಡಿದ್ದರು.

"ಮೈದಾನದಲ್ಲಿ ವಿರಾಟ್ ಕೊಹ್ಲಿ ಆಡುತ್ತಿದ್ದರೆ ನಾನು ಕಣ್ಣು ಮಿಟುಕಿಸದೆ ನೋಡುತ್ತಿದ್ದೆ. ಮುಖ್ಯವಾದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಏನಾದರೂ ಬೇಗ ಔಟಾಗಿ ಪೆವಿಲಿಯನ್‌ಗೆ ಮರಳಿದರೆ, ನನಗೆ ಊಟ ಕೂಡ ಸೇರುತ್ತಿರಲಿಲ್ಲ, ಅಷ್ಟರಮಟ್ಟಿಗೆ ಮೂಡ್ ಹಾಳಾಗಿಬಿಡುತ್ತಿತ್ತು" ಎಂದು ನಾನಾ ತಮ್ಮ ಕ್ರಿಕೆಟ್ ಹುಚ್ಚನ್ನು ಮುಕ್ತವಾಗಿ ಹೇಳಿಕೊಂಡಿದ್ದರು, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net