ಕೈಯಲ್ಲಿ ಮದ್ಯದ ಗ್ಲಾಸು, ಮನಸ್ಸಿನಲ್ಲಿ ₹1.5 ಕೋಟಿ ಕಾರಿನ ಕನಸು…ರೈತನ ಸಾವಿನ ಸುದ್ದಿ ಕಂಡ ಬಳಿಕ "ನಾನಾ" ಮಾಡಿದ್ದೇನು ಗೊತ್ತಾ? Nana Patekar

ಕೈಯಲ್ಲಿ ಮದ್ಯದ ಗ್ಲಾಸ್, ₹1.5 ಕೋಟಿ ಕಾರಿನ ಕನಸು ಕಾಣುತ್ತಿದ್ದ ನಾನಾ ಪಾಟೇಕರ್, ರೈತನ ಸಾವಿನ ಸುದ್ದಿ ನೋಡಿ ತಮ್ಮ ಬದುಕಿನ ದಿಕ್ಕನ್ನೇ ಬದಲಿಸಿಕೊಂಡ ಪ್ರೇರಣಾದಾಯಿ ಕಥೆ ಇಲ್ಲಿದೆ.
The initiative by Nana Patekar and the Naam Foundation to come to the aid of farmers in distress.
ಸಂಕಷ್ಟದಲ್ಲಿರುವ ರೈತರ ನೆರವಿಗೆ ನಿಂತ ನಾನಾ ಪಾಟೇಕರ್ ಮತ್ತು ನಾಮ್ ಫೌಂಡೇಶನ್ ಕಾರ್ಯಕ್ರಮ.
Published on: 

ಮುಂಬೈ: ಬಾಲಿವುಡ್​ನ ಹಿರಿಯ ನಟ ಹಾಗೂ ನಿರ್ಮಾಪಕ ನಾನಾ ಪಾಟೇಕರ್​ (75) ಗುರುವಾರ (ಅ.8) ತೀವ್ರ ಹೃದಯಾಘಾತದಿಂದ ಗೋವಾದಲ್ಲಿ ನಿಧನರಾಗಿದ್ದಾರೆಂದು ವರದಿಯಾಗಿದೆ.

ನಾನಾ ಪಾಟೇಕರ್​, ತಮ್ಮ ಸ್ವಗೃಹದಲ್ಲಿ ಬೆಳಿಗ್ಗೆ 5.20 ರ ಸುಮಾರಿಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣ ಕುಟುಂಬದವರು ಪಣಜಿಯ ಮಣಿಪಾಲ್​ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಾನಾ ಇಹಲೋಕ ತ್ಯಜಿಸಿದ್ದಾರೆಂದು ತಿಳಿದು ಬಂದಿದೆ.

ರೈತರಿಗಾಗಿ 1.5 ಕೋಟಿ ರೂ. ಕಾರನ್ನು ತ್ಯಜಿಸಿದ್ದ ನಟ!

ಅದು 2015 ರ ಸಂದರ್ಭ, ಒಂದು ದಿನ ಸಂಜೆ ನಾನಾ ಎಂದಿನಂತೆ ಕೈಯಲ್ಲಿ ಮದ್ಯ ತುಂಬಿದ್ದ ಗ್ಲಾಸ್​ ಹಿಡಿದುಕೊಂಡು, ಟಿವಿ ನೋಡುತ್ತಾ ಕುಳಿತ್ತಿದ್ದರಂತೆ. ಕೆಲ ದಿನಗಳ ಹಿಂದೆ ಅವರು ನಟಿಸಿದ್ದ ಸಿನಿಮಾವೊಂದು ಯಶಸ್ಸು ಕಂಡ ಹಿನ್ನಲೆ 1.5 ಕೋಟಿ ಮೊತ್ತದ ಕಾರೊಂದನ್ನು ಖರೀದಿಸುವ ಬಗ್ಗೆ ಯೋಚಿಸುತ್ತಾ, ಡ್ರಿಂಕ್​ ಹೀರುತ್ತಾ, ಟಿವಿ ಆನ್​ ಮಾಡಿದರಂತೆ.

2015 ರಲ್ಲಿ ಮಹಾರಾಷ್ಟ್ರದ ಸುತ್ತ-ಮುತ್ತಲೂ ಭಾರೀ ಕ್ಷಾಮ ಉಂಟಾದ ಹಿನ್ನಲೆ ಇದರ ಬಗ್ಗೆ ಟಿವಿಯಲ್ಲಿ ಸುದ್ದಿ ಪ್ರಸಾರವಾಗುತ್ತಿತ್ತು. ನಾನಾ ಹೇಳುವಂತೆ, ನಾನು ಡ್ರಿಂಕ್ಸ್​ ತೆಗೆದುಕೊಳ್ಳುತ್ತಾ, ಟಿವಿ ನೋಡುತ್ತಿದ್ದೆ, ಆಗ, ಅಲ್ಲಿ ಒಬ್ಬ ರೈತ, ಭೀಕರ ಬರದ ಕಾರಣ, ಮಾಡಿದ ಸಾಲ ತೀರಿಸಲಾಗದೆ, ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತೋರಿಸಲಾಗುತ್ತಿತ್ತು. ಆ ದೃಶ್ಯವನ್ನು ನೋಡಿ, ನನ್ನ ಮನಸ್ಸು ನುಚ್ಚು ನೂರಾಯಿತು. ಈ ಕಾರನ್ನು ಖರೀದಿಸಿ ನಾನೇನು ಸಾಧಿಸುವುದಿದೆ? ಇಂತಹ ನೂರು ಕಾರುಗಳನ್ನು ಖರೀದಿಸಲು ನನಗೆ ಸಾಧ್ಯವಿದೆ ಎಂದು ಕೊಂಡೆ.

ತಕ್ಷಣ ನನ್ನ ಗೆಳೆಯ ಮಕರಂದ್ ಅನಸ್ಪೂರೆ ಗೆ ಕರೆಮಾಡಿ, ನಾನು ಈ ಬರ ಪೀಡಿತ ಜನರ ಸಹಾಯ ಮಾಡಬೇಕೆಂದು ಕೊಂಡಿದ್ದೆನೆ. ನನ್ನ ಹತ್ತಿರ 1.5 ಕೋಟಿ ಇದೆ. ನಾನು ಎಲ್ಲರ ಬ್ಯಾಂಕ್​ ಖಾತೆಗೆ 10-15 ಸಾವಿರ ಕಳುಹಿಸುತ್ತೇನೆಂದು ಹೇಳಿದರಂತೆ. ಆಗ, ನಾನಾ ಅವರ ಗೆಳೆಯ ಮಕರಂದ್ ನಿನ್ನ ಯೋಚನೆ ಏನೋ ಸರಿಯಿದೆ ಆದರೆ ಹೀಗೆ ದುಡ್ಡನ್ನ ಅವರ ಖಾತೆಗೆ ಹಾಕುವ ಬದಲು ನೀನೇ ಬರ ಪೀಡಿತ ಸ್ಥಳಕ್ಕೆ ಭೇಟಿ ಕೊಡು, ಅಲ್ಲಿಯ ಜನರನ್ನು ಮಾತನಾಡಿಸು, ಅವರ ಕಷ್ಟಕ್ಕೆ ಸ್ಪಂದಿಸು ಎಂಬ ಸಲಹೆ ನೀಡಿದರಂತೆ.

ನಂತರ ನಾನಾ ಅಲ್ಲಿಗೆ ಭೇಟಿ ಕೊಟ್ಟು, ಅಲ್ಲಿದ್ದ ವಿಧವೆಯರು, ಮಕ್ಕಳು ಎಲ್ಲರೊಂದಿಗೆ ಮಾತನಾಡಿದಾಗ, ಕೇವಲ ಒಂದು ಸಲ ಹತ್ತೋ, ಹದಿನೈದೋ ಸಾವಿರ ನೀಡಿದರೆ ಏನು ಪ್ರಯೋಜನವಿಲ್ಲ, ಇದಕ್ಕೆ ಒಂದು ವ್ಯವಸ್ಥೆ ಮಾಡಬೇಕೆಂದು ನಿರ್ಧರಿಸಿ, ನಾನಾ 'ನಾಮ್​' (NAAM) ಪೌಂಡೇಶನ್​ ಸ್ಥಾಪಿಸಿದರಂತೆ. ಇದರ ಮೂಲಕ ನಾನಾ, ಹಲವಾರು ಸಮಾಜ ಮುಖಿ ಕೆಲಸವನ್ನು ನಡೆಸಿಕೊಂಡು ಬಂದಿದ್ದರು.

2024 ರಲ್ಲಿ ಖಾಸಗಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದ ಸಂದರ್ಭದಲ್ಲಿ ಆ ಒಂದು ದೃಶ್ಯ ನಾನು, ಸಮಾಜವನ್ನು ನೋಡುವ ಹಾಗೂ ನನ್ನ ಸುತ್ತಲಿನಲ್ಲಿರುವ ಜನರ ಕಷ್ಟಗಳಿಗೆ ಆರ್ಥಿಕವಾಗಿ ಸ್ಪಂದಿಸುವಂತೆ ಮಾಡಿತು ಎಂದು ನಾನಾ ಪಾಟೇಕರ್​ ಹೇಳಿದ್ದರು, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net