

ಜನಪ್ರಿಯ ಹೀರೋಯಿನ್‌ಗಳನ್ನು ಕರೆಸಿ ಚಿತ್ರಗಳಲ್ಲಿ ಐಟಂ ಡ್ಯಾನ್ಸ್ ಮಾಡಿಸುವ ಟ್ರೆಂಡ್ ಹೊಸದೇನಲ್ಲ. ಈಗಾಗಲೇ ಹಲವು ಹೀರೋಯಿನ್‌ಗಳು ಐಟಂ ಡ್ಯಾನ್ಸ್ ಮಾಡಿದ್ದು, ಅದರಲ್ಲಿ ಅತೀ ಹೆಚ್ಚು ಜನಪ್ರಿಯರಾದವರೆಂದರೆ, ಅದು ತಮನ್ನಾ ಭಾಟಿಯಾ.
ತಮನ್ನಾ ಐದಕ್ಕೂ ಹೆಚ್ಚು ಚಿತ್ರಗಳಲ್ಲಿ ಐಟಂ ಡ್ಯಾನ್ಸ್ ಮಾಡಿದ್ದಾರೆ. ಅದರಲ್ಲಿ ಕನ್ನಡದ್ದೇ ಎರಡು ಚಿತ್ರಗಳಿವೆ. ನಿಖಿಲ್ ಕುಮಾರ್ ಅಭಿನಯದ ಮೊದಲ ಚಿತ್ರ ‘ಜಾಗ್ವಾರ್’ ಮತ್ತು ‘ಕೆಜಿಎ್’ ಚಿತ್ರದ ಐಟಂ ಡ್ಯಾನ್ಸ್‌ಗಳಲ್ಲಿ ತಮನ್ನಾ ಕಾಣಿಸಿಕೊಂಡಿದ್ದರು. ಹಾಗೆ ಕಾಣಿಸಿಕೊಳ್ಳುವುದಕ್ಕೆ ದೊಡ್ಡ ಮೊತ್ತದ ಸಂಭಾವನೆಯನ್ನು ಪಡೆದಿದ್ದರು ಎಂಬ ಸುದ್ದಿ ಇತ್ತು. ಅಷ್ಟೇ ಅಲ್ಲ, ದುಡ್ಡಿಗಾಗಿಯೇ ತಮನ್ನಾ ಹೆಚ್ಚು ಹೆಚ್ಚು ಐಟಂ ಡ್ಯಾನ್ಸ್ ಮಾಡುತ್ತಾರೆ ಎಂಬ ಸುದ್ದಿ ಇತ್ತು.
ಈ ಕುರಿತಾಗಿ ತಮನ್ನಾ ಎಲ್ಲೂ ಮಾತಾಡಿರಲಿಲ್ಲ. ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿರಲಿಲ್ಲ. ಈಗ ಮೊದಲ ಬಾರಿಗೆ ತಾನು ಐಟಂ ಡ್ಯಾನ್ಸ್‌ನಲ್ಲಿ ಕಾಣಿಸಿಕೊಳ್ಳುವುದೇಕೆ ಎಂದು ಹೇಳಿದ್ದಾರೆ. ‘ನನಗೆ ಗೊತ್ತು, ನಾನು ದುಡ್ಡಿಗಾಗಿ ಐಟಂ ಸಾಂಗ್‌ಗಳಲ್ಲಿ ಕಾಣಿಸಿಕೊಳ್ಳುತ್ತೇನೆ ಎಂಬ ಅಭಿಪ್ರಾಯ ಎಲ್ಲರಲ್ಲೂ ಇದೆ. ಅದು ಸುಳ್ಳು. ನನಗೆ ಡ್ಯಾನ್ಸ್ ಮಾಡೋದು ಅಂದರೆ ಬಹಳ ಇಷ್ಟ. ಅದರಲ್ಲೂ ಸಿನಿಮಾಗಳಲ್ಲಿ ಡ್ಯಾನ್ಸ್ ಮಾಡೋದು ಇನ್ನೂ ಇಷ್ಟ. ಅದು ಡ್ಯುಯೆಟ್ ಇರಲಿ, ರೊಮ್ಯಾಮಟಿಕ್ ಹಾಡಿರಲಿ ಅಥವಾ ಐಟಂ ಸಾಂಗ್ ಆಗಿರಲಿ, ನನಗೆ ನೃತ್ಯ ಮಾಡೋಕೆ ಇಷ್ಟ. ಹಾಗಾಗಿ ಡ್ಯಾನ್ಸ್ ಅಂದರೆ ಒಪ್ಪಿಕೊಳ್ಳುತ್ತೇನೆ’ ಎಂದಿದ್ದಾರೆ.
ಬರೀ ನೃತ್ಯ ಮಾಡುವುದಷ್ಟೇ ಅಲ್ಲ, ನಟನೆ ಸಹ ಬಹಳ ಇಷ್ಟ ಎನ್ನುವುದರ ಜತೆಗೆ, ಕೊನೆಯ ಉಸಿರಿರುವವರೆಗೂ ಅಭಿನಯ ಮುಂದುವರೆಸುವುದಾಗಿ ಅವರು ಹೇಳಿದ್ದಾರೆ.