ಮಹಾನಗರದ ಕಥೆ ರೆಡಿ; ಇದೇ 15ಕ್ಕೆ ಅಥರ್ವ್ ಅಭಿನಯದ ಚಿತ್ರ ತೆರೆಗೆ

tales of mahanagar
Published on

ಬೆಂಗಳೂರು: ‘ಗೆಜ್ಜೆನಾದ’ ಖ್ಯಾತಿಯ ನಿರ್ದೇಶಕ ವಿಜಯ್ ಕುಮಾರ್ ಪುತ್ರ ಅಥರ್ವ್ ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿರುವ ಚಿತ್ರ ‘ಟೇಲ್ಸ್ ಆ್ ಮಹಾನಗರ’. ಇತ್ತೀಚೆಗಷ್ಟೆ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಕಿಚ್ಚ ಸುದೀಪ್ ಧ್ವನಿ ನೀಡಿ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ.

ಇದೀಗ ಸಿನಿಮಾ ಇದೇ ತಿಂಗಳ 15ಕ್ಕೆ ತೆರೆಗೆ ಬರಲು ರೆಡಿಯಾಗಿದೆ. ಕಿರಣ್ ವೆನಿಯಲ್ ಮೊದಲ ಬಾರಿಗೆ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಹಿಂದೆ ‘ಪುನರ್ ವಿವಾಹ’, ‘ಪತ್ತೆದಾರಿ ಪ್ರತಿಭಾ’ ಧಾರಾವಾಹಿಗಳಲ್ಲಿ ನಟಿಸಿ ಅನುಭವ ಪಡೆದಿರುವ ಅಥರ್ವ್, ‘ಇದು ನನ್ನ ಮೊದಲ ಸಿನಿಮಾ. ಚಿತ್ರದ ಮೊದರ್ಧ ಮೂರು ವಿಭಿನ್ನ ಕಥೆಗಳ ಸುತ್ತ ಸಾಗುತ್ತದೆ. ದ್ವಿತೀಯಾರ್ಧದಲ್ಲಿ ಮೂರು ಕಥೆಗಳು ಒಟ್ಟಿಗೆ ಸೇರಿಕೊಳ್ಳುತ್ತವೆ. ಹೀಗಾಗಿ ಇದೊಂದು ವಿಭಿನ್ನ ಕಥಾಹಂದರವನ್ನು ಹೊಂದಿರುವ ಸಿನಿಮಾ. ಆರಂಭದಲ್ಲಿ ನಿರ್ಮಾಪಕರ ಹುಡುಕಾಟದಲ್ಲಿದ್ದೆ. ಆದರೆ, ಆಗ ಅಪ್ಪನೇ ನಿರ್ಮಾಣ ಮಾಡುತ್ತೇನೆ ಎಂದು ನಿರ್ಮಾಪಕರಾದರು’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ. ಇನ್ನು ಇಂಜಿನಿಯರಿಂಗ್ ವಿದ್ಯಾರ್ಥಿ ಕಿರಣ್ ನಿರ್ದೇಶಕರಾಗುವ ಕನಸು ಈಡೇರಿದೆ ಎಂದು ಸಂತಸ ಹಂಚಿಕೊಂಡರು.

ಕಿರುತೆರೆ ನಟಿ ರಮೋಲ ಚಿತ್ರದಲ್ಲಿ ಅಥರ್ವ್‌ಗೆ ನಾಯಕಿಯಾಗಿದ್ದಾರೆ. ಇವರ ಜತೆಗೆ ಆರ್.ಜೆ. ಅನೂಪ್ ಹಾಗೂ ನಾಗರಾಜ್ ತಾರಾಬಳಗದಲ್ಲಿ ಇದ್ದಾರೆ. ಉಳಿದಂತೆ ಚಿತ್ರಕ್ಕೆ ಪ್ರದೀಪ್ ಗೋಪಾಲ್ ಸಂಕಲನ, ಸಿದ್ಧಾರ್ಥ ಪರಾಶರ್ ಸಂಗೀತವಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net