More

    ‘ಜವಾನ್’ನಲ್ಲಿ ಶಾರುಖ್ ಧರಿಸಿರುವ ರೆಡ್ ಜಾಕೆಟ್, ಸಿಂಹದ ತಲೆಯ ಉಂಗುರದ ಬೆಲೆಯೆಷ್ಟು ಗೊತ್ತಾ ?

    ಮುಂಬೈ: ಜವಾನ್ ಚಿತ್ರಮಂದಿರಕ್ಕೆ ಲಗ್ಗೆಯಿಟ್ಟಿದೆ. ಬ್ಲಾಕ್‌ಬಸ್ಟರ್ ಪಠಾಣ್ ನಂತರ, ಶಾರುಖ್ ಖಾನ್ ‘ಜವಾನ್’ ಚಿತ್ರದೊಂದಿಗೆ ಮತ್ತೆ ಬೆಳ್ಳಿತೆರೆಗೆ ಮರಳಿದ್ದಾರೆ. ಬಿಡುಗಡೆಗೂ ಮುನ್ನವೇ ಕುತೂಹಲ ಹುಟ್ಟುಹಾಕಿದ್ದ ಈ ಚಿತ್ರವನ್ನು ಅಟ್ಲೀ ನಿರ್ದೇಶನ ಮಾಡಿದ್ದಾರೆ. ಅಟ್ಲೀ ಅವರೊಂದಿಗೆ ಶಾರುಖ್ ಅವರ ಮೊದಲ ಚಿತ್ರ ಇದಾಗಿದೆ. ಶಾರುಖ್ ಅವರರಂತಹ ಜನಪ್ರಿಯ ತಾರೆ ಚಿತ್ರದಲ್ಲಿದ್ದರೆ ಚಿತ್ರದ ಕಥೆ ಅವರ ಪಾತ್ರದ ಸುತ್ತ ಸುತ್ತುತ್ತದೆ. ಹಾಗಾಗಿ ಅಟ್ಲೀ ಅವರು ನಾಯಕ ಸೇರಿದಂತೆ ಎಲ್ಲ ಪಾತ್ರಗಳನ್ನು ರೋಮಾಂಚನಕಾರಿ ರೀತಿಯಲ್ಲಿ ರಚಿಸಿದ್ದಾರೆ. ಅಟ್ಲೀ ತಮ್ಮ ಚಿತ್ರದಲ್ಲಿ ಅನೇಕ ಸಮಕಾಲೀನ ವಿಷಯಗಳನ್ನೂ ಪ್ರಸ್ತಾಪಿಸಿದ್ದಾರೆ.

    ಇವುಗಳಲ್ಲಿ, ರೈತರ ಆತ್ಮಹತ್ಯೆ, ಕಳಪೆ ಆರೋಗ್ಯ ಸೇವೆ, ಅನ್ಯಾಯ ಮತ್ತು ಬಡವರ ಶೋಷಣೆಯ ಜೊತೆಗೆ ದೇಶಪ್ರೇಮದ ವಿಷಯವನ್ನೂ ಸೇರಿಸಲಾಗಿದೆ. ಇದರೊಂದಿಗೆ ಮತದಾನದ ಮಹತ್ವವನ್ನೂ ಸಾರಲಾಗಿದೆ.

    ಶಾರುಖ್ ‘ಜವಾನ್’ ಭಾರೀ ಹೈಪ್ ಸೃಷ್ಟಿಸಿದ್ದು, ಏತನ್ಮಧ್ಯೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ವಿಟರ್‌ನಲ್ಲಿ ‘ಜವಾನ್’ ವಿಮರ್ಶೆಯ ಮಹಾಪೂರವೇ ಹರಿದುಬರುತ್ತಿದೆ.

    ಬಿಡುಗಡೆಯಾದ ಮೊದಲ ದಿನದ ಆರಂಭಿಕ ಶೋಗಳ ಪ್ರಕಾರ, ಈ ಚಿತ್ರವು ಅಭಿಮಾನಿಗಳಿಂದ ಅದ್ಭುತ ಪ್ರತಿಕ್ರಿಯೆಯನ್ನು ಪಡೆದಿದೆ ಎಂದು ಈ ವಿಮರ್ಶೆಗಳಿಂದ ಸುಲಭವಾಗಿ ಊಹಿಸಬಹುದು. ಟ್ವಿಟರ್ ಬಳಕೆದಾರರೊಬ್ಬರು “ಶಾರುಖ್ ಅವರ ಬ್ಯಾಂಗಿಂಗ್ ಎಂಟ್ರಿ, ಅಟ್ಲೀ ಅವರು ಎಂತಹ ಅದ್ಭುತವಾದ ರೀತಿಯಲ್ಲಿ ಚಿತ್ರವನ್ನು ಪರಿಚಯಿಸಿದ್ದಾರೆ, ಚಲನಚಿತ್ರವನ್ನು ನೋಡಬೇಕು.” ಎಂದು ತಿಳಿಸಿದ್ದಾರೆ. ಈ ಮೂಲಕ ಅನೇಕ ಟ್ವಿಟರ್ ಬಳಕೆದಾರರು ಶಾರುಖ್ ‘ಜವಾನ್’ ಬಗ್ಗೆ ಸಕಾರಾತ್ಮಕ ವಿಮರ್ಶೆಗಳನ್ನು ನೀಡುತ್ತಿದ್ದಾರೆ. ಚಿತ್ರದ ಬಗ್ಗೆ ಅಭಿಮಾನಿಗಳ ಈ ಪ್ರತಿಕ್ರಿಯೆಗಳಿಂದ ಕಿಂಗ್ ಖಾನ್ ಮತ್ತೊಮ್ಮೆ ತಮ್ಮ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ ಎಂದು ಸುಲಭವಾಗಿ ಊಹಿಸಬಹುದು.

    ಅಂದಹಾಗೆ ಚಿತ್ರದಲ್ಲಿ ಶಾರುಖ್ ಅವರ ಲುಕ್ ಸಹ ಸದ್ಯ ಚರ್ಚೆಗೆ ಕಾರಣವಾಗಿದೆ. ಅಷ್ಟೇ ಅಲ್ಲ, ಶಾರುಖ್ ಜವಾನ್​​​ನಲ್ಲಿ ರೆಡ್ ಜಾಕೆಟ್ ಧರಿಸಿದ್ದಾರೆ. ಸಿಂಪಲ್ ಆಗಿ ಕಾಣುವ ಈ ಜಾಕೆಟ್ ಬೆಲೆ ಕೇಳಿದರೆ ಮಾತ್ರ ನೀವು ದಂಗಾಗುತ್ತೀರಿ. ಹೌದು, ಈ ಜಾಕೆಟ್ ಬೆಲೆ 1423 ಡಾಲರ್. ಅಂದರೆ 1,18,372. ಹಾಗೆಯೇ ಸಿಂಹದ ತಲೆಯ ಉಂಗುರವನ್ನು ಶಾರುಖ್ ಧರಿಸಿದ್ದು, ಇದರ ಬೆಲೆ ಸುಮಾರು 50 ಸಾವಿರ ರೂ. ಎಂದು ವರದಿಯಾಗಿದೆ.

    ಉದಯನಿಧಿ ಸ್ಟಾಲಿನ್​ಗೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತರಾಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts