

ಮುಂಬೈ: ಒಂದು ಚಿತ್ರ ಯಶಸ್ವಿಯಾದರೆ ಅದಕ್ಕೆ ನಿರ್ದೇಶಕರೇ ಕಾರಣರಾಗಿರುತ್ತಾರೆ. ಉತ್ತಮ ನಿರ್ದೇಶಕರಿಲ್ಲದೇ ಚಿತ್ರ ಯಶಸ್ವಿಯಾಗಲು ಸಾಧ್ಯವೇ ಇಲ್ಲ, ಹಾಗಾಗಿ ನಾನು ನಿರ್ದೇಶಕರನ್ನು ಮಾತ್ರ ನಂಬುತ್ತೇನೆ ಎಂದು ನಟಿ ಟಬೂ ಹೇಳಿದ್ದಾರೆ.
ಭೂಲ್ ಭುಲಯ್ಯ 2 ಚಿತ್ರದಲ್ಲಿ ನಟಿಸಿರುವ ನಟಿ ಟಬೂ, ಹೌದು... ನನ್ನ ಎಲ್ಲಾ ಸಿನಿಮಾಗಳಲ್ಲೂ ನಾನು ನಿರ್ದೇಶಕರನ್ನೇ ನಂಬುತ್ತೇನೆ, ಅವರ ಕೆಲಸವನ್ನು ಗೌರವಿಸುತ್ತೇನೆ. ಏಕೆಂದರೆ ಯಾರನ್ನು ಯಾವ ರೀತಿ ಚಿತ್ರದಲ್ಲಿ ತೊರಿಸಬೇಕೆಂಬ ಚಿಂತನೆ ನಿರ್ದೇಶಕರಿಗೆ ಮಾತ್ರ ಇರುತ್ತದೆ. ಅದರ ಮೇಲೆಯೇ ನಾವು ಸ್ಟಾರ್ ಆಗುತ್ತೇವೆ ಎಂದಿದ್ದಾರೆ.
ಸದ್ಯ ಟಬೂ ನಟಿಸಿರುವ ಭೂಲ್ ಭುಲಯ್ಯ ಚಿತ್ರ ಯಶಸ್ವಿ ಪ್ರದರ್ಶನ ಕಂಡಿದ್ದು, ಇದನ್ನು ಇನ್ಸ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ನನ್ನ ಪಾತ್ರಕ್ಕೆ ನಿರ್ದೇಶಕರ ಕೊಡುಗೆ ಅಪಾರ, ಮತ್ತು ನಮಗೆ ನೀಡಿದ ಪಾತ್ರಕ್ಕೆ ಮನ್ನಣೆ ಕೊಡಬೇಕಿದೆ. ನನ್ನನ್ನು ಸರಿಯಾದ ಮಾರ್ಗದರ್ಶನ ನೀಡಿರುವ ನಿರ್ದೇಶಕರಿಗೆ ಧನ್ಯವಾದಗಳು, ನಟರಲ್ಲಿ ಮೌಲ್ಯಯುತ ಅಭಿನಯವನ್ನು ಹೊರತರುವ ನಿರ್ದೇಶಕರ ಕೆಲಸ ಮಹತ್ವವಾದದ್ದು ಎಂದು ಹೇಳಿದ್ದಾರೆ. (ಏಜೆನ್ಸೀಸ್)