

ಮುಂಬೈ: ಸದ್ಯ ಭಾರತೀಯ ಚಿತ್ರರಂಗದಲ್ಲಿ ದಕ್ಷಿಣ ಭಾರತದ ಸಿನಿಮಾಗಳ ಹವಾ ಜೋರಾಗಿಯೇ ಇದೆ. ಇದನ್ನು ಸ್ವತಃ ಬಾಲಿವುಡ್ ಕೂಡ ಒಪ್ಪಿಕೊಂಡಿದೆ.
ಒಂದು ಕಾಲದಲ್ಲಿ ಬಾಲಿವುಡ್ ಮಾತ್ರವೇ ಭಾರತದ ಸಿನಿಮಾಗಳು ಎಂಬಂತೆ ಬಿಂಬಿಸಲಾಗಿತ್ತು, ಇದೀಗ ಕಾಲ ಹಾಗೂ ಜನರ ಅಭಿರುಚಿಯೂ ಬದಲಾಗಿದ್ದು, ಸದ್ಯ ಭಾರತೀಯ ಚಿತ್ರರಂಗದಲ್ಲಿ ದಕ್ಷಿಣ ಸಿನಿಮಾಗಳ ಪಾರುಪತ್ಯ ಆರಂಭವಾಗಿದೆ.
ಸುದೀಪ್ ನಟನೆಯ ವಿಕ್ರಾಂತ್ ರೋಣ ಕನ್ನಡ ಸಿನಿಮಾ ಇದೀಗ ಭಾರೀ ಸದ್ದು ಮಾಡುತ್ತಿದೆ. ಕೆಜಿಎಫ್ ಬಳಿಕ ನಿರೀಕ್ಷೆ ಮೂಡಿಸಿರುವ ಈ ಚಿತ್ರ ಸದ್ಯದಲ್ಲೇ ಬಹುಭಾಷೆಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.
ಇನ್ನು ಪ್ರಚಾರ ಕೈಗೊಂಡಿರುವ ನಟ ಸುದೀಪ್ ಮುಂಬೈಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಸಲ್ಮಾನ್ ಖಾನ್, ದಕ್ಷಿಣ ಭಾರತದ ಸಿನಿಮಾವನ್ನು ಮತ್ತೆ ಹಾಡಿಹೊಗಳಿದ್ದಾರೆ. ನನಗೆ ಸಿನಿಮಾಗಳು ನಷ್ಟ ಅನುಭವಿಸುವುದು ಹಿಡಿಸುವುದಿಲ್ಲ, ಹಾಗೆ ದಕ್ಷಿಣ ಭಾರತದ ಸಿನಿಮಾಗಳು ಕೂಡ ಉತ್ತಮ ಪ್ರದರ್ಶನವನ್ನು ನೀಡುತ್ತಿವೆ ಎಂದಿದ್ದಾರೆ. (ಏಜೆನ್ಸೀಸ್)