

ಸಿನಿಮಾ ಇಂಡಸ್ಟ್ರಿಯಲ್ಲಿ ವದಂತಿಗಳು ಸಹಜ. ಅದರಲ್ಲೂ ಪ್ರೀತಿ ಪ್ರೇಮದ ವಿಚಾರವಂತೂ ಕಾಳ್ಗಿಚ್ಚಿನಂತೆ ಸದ್ದು ಮಾಡುತ್ತದೆ. ಅದೇ ರೀತಿ ನಟಿ ತಾಪ್ಸೀ ಪನ್ನು ವಿಚಾರದಲ್ಲೂ ಇದೀಗ ಮುಂದುವರಿದಿದೆ. ಮಾಲ್ಡಿವ್ಸ್ನಲ್ಲಿ ಹಾಲಿಡೇ ಟ್ರಿಪ್ನಲ್ಲಿರುವ ತಾಪ್ಸೀ ಪನ್ನು, ಬಾಯ್ಫ್ರೆಂಡ್ ಜತೆ ಸಿಕ್ಕಿಬಿದ್ದಿದ್ದಾರೆ!
ಈ ಹಿಂದೆ ಬಾಯ್ಫ್ರೆಂಡ್ ಇರುವ ಬಗ್ಗೆಯಾಗಲಿ, ಆ ವಿಚಾರದ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಆಗೊಂದು ಈಗೊಂದು ವದಂತಿ ಕೇಳಿಬಂದಿತ್ತಾದರೂ, ನಂಬಲಾರ್ಹ ಸಾಕ್ಷಿ ಸಿಕ್ಕಿರಲಿಲ್ಲ. ಇದೀಗ ಪ್ರಿಯಕರನೊಟ್ಟಿಗೆ ಸ್ಟೇಪ್ ಹಾಕುತ್ತಿರುವ ಭಂಗಿಯಲ್ಲಿ ಇಬ್ಬರೂ ಒಂದೇ ಫೋಟೋದಲ್ಲಿ ಸಿಕ್ಕಿದ್ದಾರೆ. ಆ ಫೋಟೋ ಸದ್ಯ ವೈರಲ್ ಆಗಿದ್ದು, ನೆಟ್ಟಿಗರು ಬಗೆಬಗೆ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಹಾಗಾದರೆ ತಾಪ್ಸೀ ಪನ್ನು ಬಾಯ್ಫ್ರೆಂಡ್ ಯಾರು? ಡೆನ್ಮಾರ್ಕ್ ಮೂಲದ ಬ್ಯಾಡ್ಮಿಂಟನ್ ಆಟಗಾರ ಮಾಥಿಯಾಸ್ ಬೊಯ್ ಜತೆಗೆ ಮಾಲ್ಡಿವ್ಸ್ ಟ್ರಿಪ್ನಲ್ಲಿ ತಾಪ್ಸೀ ಕಾಲ ಕಳೆಯುತ್ತಿದ್ದಾರೆ. ಕಳೆದೊಂದು ವಾರದಿಂದ ಸ್ನೇಹಿತರೊಟ್ಟಿಗೆ ರಜೆ ದಿನಗಳನ್ನು ಕಳೆಯುತ್ತಿರುವ ಅವರು, ಮಾಥಿಯಾಸ್ ಜತೆಗಿನ ಒಂದೇ ಒಂದು ಫೋಟೋ ಸಹ ಶೇರ್ ಮಾಡಿಲ್ಲ. ಬದಲಿಗೆ ಮಾಥಿಯಾಸ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ತಾಪ್ಸೀ ಜತೆಗಿರುವ ಫೋಟೋ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್)