Photos: ಮಾಲ್ಡೀವ್ಸ್​ನಲ್ಲಿ ತಾಪ್ಸಿ ಏನ್ಮಾಡ್ತಿದ್ದಾರೆ? ನೀವೇ ನೋಡಿ ...

Taapsee Pannu - Final
Published on

ಕಳೆದ ಆರೇಳು ತಿಂಗಳುಗಳಿಂದ ಲಾಕ್​ಡೌನ್​ನಿಂದಾಗಿ ಅತ್ತ ಶೂಟಿಂಗ್​ನಲ್ಲಿ ಭಾಗವಹಿಸಲಾಗದೆ, ಇತ್ತ ಮನೆಯಲ್ಲಿ ಇರಲಾರದೆ ಕಂಗೆಟ್ಟಿದ್ದ ಸೆಲೆಬ್ರಿಟಿಗಳೆಲ್ಲಾ ಈಗ ಒಬ್ಬೊಬ್ಬರೇ ಮನೆ ಆಚೆ ಬರುತ್ತಿದ್ದಾರೆ. ಕೆಲವರು ಸೀದಾ ಶೂಟಿಂಗ್​ ಸ್ಪಾಟ್​ಗೆ ಹೋದರೆ, ಇನ್ನೂ ಕೆಲವರು ಹಾಲಿಡೇ ಅಂತ ಬೇರೆ ಊರುಗಳತ್ತ ಪ್ರಯಾಣ ಬೆಳೆಸಿದ್ದಾರೆ.

ಬಾಲಿವುಡ್​ ನಟಿ ತಾಪ್ಸಿ ಪನ್ನು ಸಹ ಇದೀಗ ಹಾಲಿಡೇ ಮೂಡ್​ನಲ್ಲಿದ್ದಾರೆ. ಅವರು ತಮ್ಮ ಸಹೋದರಿಯರ ಜತೆಗೆ ಮಾಲ್ಡೀವ್ಸ್​​ಗೆ ಹೋಗಿದ್ದು, ಅಲ್ಲಿ ಎಂಜಾಯ್​ ಮಾಡುತ್ತಿದ್ದಾರೆ.

ಹೌದು, ಲಾಕ್​ಡೌನ್​ ತೆರವಾದ ನಂತರ ವಿಜಯ್​ ಸೇತುಪತಿ ಅಭಿನಯದ ಹೊಸ ಚಿತ್ರವೊಂದರ ಚಿತ್ರೀಕರಣವನ್ನು ಮುಗಿಸಿರುವ ತಾಪ್ಸಿ, ಸೀದಾ ಮಾಲ್ಡೀವ್ಸ್​ಗೆ ಪ್ರಯಾಣ ಬೆಳೆಸಿದ್ದಾರೆ. ತಮ್ಮ ಸಹೋದರಿ ಶಗುನ್​ ಪನ್ನು ಮತ್ತು ಇವಾನಿಯಾ ಪನ್ನು ಜತೆಗೆ ಮಾಲ್ಡೀವ್ಸ್​​ನಲ್ಲಿ ಬೀಡುಬಿಟ್ಟಿರುವ ಅವರು, ಅಲ್ಲಿ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ.

ಇಂದು ಬೆಳಿಗ್ಗೆ ತಾಪ್ಸಿ ತಮ್ಮ ಬ್ರೇಕ್​ಫಾಸ್ಟ್​ ಫೋಟೋವೊಂದನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಪೂಲ್​ವೊಳಗೆ ಕುಳಿತು ತಿಂಡಿ ಮತ್ತು ಎದುರಿಗಿರುವ ಸೌಂದರ್ಯವನ್ನು ತಾಪ್ಸಿ ಸವಿಯುತ್ತಿರುವುದನ್ನು ಈ ಫೋಟೋದಲ್ಲಿ ನೋಡಬಹುದಾಗಿದೆ. ಮೊಟ್ಟೆ, ಅವಕಡೋಸ್​, ಮಶ್ರೂಮ್ಸ್​ಗಳನ್ನು ತಿನ್ನುತ್ತಾ, ಸಮುದ್ರದ ಸೌಂದರ್ಯವನ್ನು ತಾಪ್ಸಿ ಸವಿಯುತ್ತಿರುವ ಈ ಫೋಟೋ, ಇದೀಗ ಇಂಟರ್​ನೆಟ್​ನಲ್ಲಿ ವೈರಲ್​ ಆಗಿದೆ.

ಈ ವಾರಾಂತ್ಯವನ್ನು ತಾಪ್ಸಿ ಮಾಲ್ಡೀವ್ಸ್​​ನಲ್ಲೇ ಕಳೆಯುತ್ತಿದ್ದು, ಮುಂದಿನ ವಾರ ಭಾರತಕ್ಕೆ ವಾಪಸ್ಸಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net