ಹಾಡುಗಳಲ್ಲಿ ಸ್ವಚ್ಛ ಕರ್ನಾಟಕದ ಜಪ

Swachcha Karnataka 1
Published on

ಬೆಂಗಳೂರು: ಸಾಮಾಜಿಕ ಸಂದೇಶ ಸಾರುವ ‘ಸ್ವಚ್ಛ ಕರ್ನಾಟಕ’ ಸಿನಿಮಾತಂಡ ಇತ್ತೀಚೆಗಷ್ಟೇ ಹಾಡುಗಳನ್ನು ಬಿಡುಗಡೆ ಮಾಡಿದೆ. ಶೀರ್ಷಿಕೆಗೆ ತಕ್ಕಂತೆ ಇಡೀ ಚಿತ್ರದಲ್ಲಿ ಸ್ವಚ್ಛತೆಯ ಬಗ್ಗೆಯೇ ಬೋಧನೆ ಮಾಡಲಾಗಿದೆ. ಸ್ವಚ್ಛತೆಯ ವಿಚಾರದಲ್ಲಿ ಪ್ರತಿ ನಾಗರಿಕನ ಕರ್ತವ್ಯ ಏನು? ಅದಕ್ಕಾಗಿ ಆತ ಮಾಡಬೇಕಿರುವ ಕೆಲಸ ಮತ್ತು ಆತನ ಜವಾಬ್ದಾರಿಗಳನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ.

ವಿಶೇಷ ಎಂಬಂತೆ ಎಲ್. ರವಿಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಹಿರಿಯ ಗೀತ ಸಾಹಿತಿ ದೊಡ್ಡರಂಗೇಗೌಡರು ಚಿತ್ರದ ಗೀತೆಗಳಿಗೆ ಸಾಹಿತ್ಯವನ್ನೂ ಬರೆದು ತಂದೆಯ ಪಾತ್ರದಲ್ಲಿಯೂ ನಟಿಸಿದ್ದಾರೆ. ಇನ್ನು ಹಾಡುಗಳ ಬಿಡುಗಡೆ ಕಾರ್ಯಕ್ರಮ ಆಗಿದ್ದರಿಂದ ಬಿಬಿಎಂಪಿ ವಿಶೇಷ ಆಯುಕ್ತ ರಣದೀಪ್, ಮಾಜಿ ಶಾಸಕ ಹೇಮಚಂದ್ರ ಸಾಗರ್, ಮೋಹನ್ ಕೊಂಡಜ್ಜಿ, ಜ್ಯೋತಿಷಿ ರಾಘವೇಂದ್ರ ಮೋಕ್ಷಗುಂಡಂ ಗುರೂಜಿ, ರಮೇಶ್ ಕಾಮತ್ ಆಗಮಿಸಿ ಶುಭ ಹಾರೈಸಿದ್ದಾರೆ.

ಚಿತ್ರದಲ್ಲಿ ಅರ್ಜುನ್ ಮತ್ತು ಅಂಜಲಿ ನಾಯಕ-ನಾಯಕಿಯರಾಗಿದ್ದಾರೆ. ರಾಜ್ ಭಾಸ್ಕರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ನಿರ್ದೇಶನದ ಜತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ರವಿಕುಮಾರ್ ನಿರ್ವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net