ಮಾಜಿ ವಿಶ್ವಸುಂದರಿ ಈಗ ಚೆಸ್​ ಚಾಂಪಿಯನ್​ ಆಗಿದ್ದಾರಂತೆ...! ಹಾಗೆಂದು ಹೇಳಿದ್ದಾರೆ ರೋಹ್​ಮನ್​ ಶಾಲ್​...

sushmita sen
Published on

ನವದೆಹಲಿ: ಭಾರತದ ಮಾಜಿ ವಿಶ್ವಸುಂದರಿ ಸುಷ್ಮಿತಾ ಸೇನ್​ ಹೆಸರು ಎಲ್ಲರಿಗೂ ಗೊತ್ತಿರುವಂಥದ್ದೇ. ಬಾಲಿವುಡ್​ನಲ್ಲಿ ಸಾಕಷ್ಟು ಕಾಲ ಮಿಂಚಿ ಮಕ್ಕಳನ್ನು ದತ್ತು ಪಡೆದ ಸುಷ್ಮಿತಾ ಅವರು ರೋಹ್​ಮನ್​ ಶಾಲ್​ ಅವರನ್ನು ಮದುವೆಯಾಗಿದ್ದಾರೆ ಎಂಬ ಸಂಗತಿ ಗುಟ್ಟಾಗಿ ಉಳಿದಿಲ್ಲ.

ಆದರೆ, ಅದೇ ಸುಷ್ಮಿತಾ ಸೇನ್​ ಈಗ ಚೆಸ್​ ಚಾಂಪಿಯನ್​ ಆಗಿದ್ದಾರಂತೆ! ಇದು ಹೊಸ ಸಂಗತಿ. ಈ ವಿಷಯವನ್ನು ತಿಳಿಸಿರುವ ಸುಷ್ಮಿತಾ ಅವರ ಪತಿ ರೋಹಮನ್​ ಶಾಲ್​, ಸುಷ್ಮಿತಾ ಸೇನ್​ ನನಗೆ ಸಿಕ್ಕ ಅತ್ಯುತ್ತಮ ಗರ್ಲ್​ಫ್ರೆಂಡ್​ ಎಂದು ಬಣ್ಣಿಸಿದ್ದಾರೆ.

ಹಾಗೆಂದ ಮಾತ್ರಕ್ಕೆ ಸುಷ್ಮಿತಾಗೆ ಮೊದಲಿನಿಂದಲೂ ಚೆಸ್​ ಬಗ್ಗೆ ಒಲವಿತ್ತು ಎಂದು ಅನ್ಯಥಾ ಭಾವಿಸಬೇಡಿ. ಆಕೆಗೆ ಅದರ ಓಂನಾಮ ಕೂಡ ಗೊತ್ತಿರಲಿಲ್ಲ. ಆದರೆ ತಮ್ಮ ಪತಿ​ ರೋಹ್​ಮನ್​ ಶಾಲ್​ ಅತ್ಯಂತ ಪ್ರೀತಿಯಿಂದ ಕಲಿಸಿದ ಆಟವನ್ನು ಚೆನ್ನಾಗಿ ಕಲಿತುಕೊಂಡಿದ್ದಾರಂತೆ.

ಲಾಕ್​ಡೌನ್​ ಅವಧಿಯನ್ನು ಒಟ್ಟಾಗಿ ಕಳೆಯುತ್ತಿರುವ ದಂಪತಿ, ಬೆಳಗ್ಗೆ ಯೋಗಾಭ್ಯಾಸ ಮಾಡುತ್ತಾರಂತೆ. ನಂತರ ಚೆಸ್​ ಆಡುತ್ತಾರಂತೆ. ಮೊದಮೊದಲು ಅಷ್ಟೇನೂ ಗಂಭೀರವಾಗಿ ಆಡದ ಸುಷ್ಮಿತಾ ಸೇನ್​, ಇದೀಗ ಗುರುವನ್ನೇ ಮೀರಿಸುವ ಶಿಷ್ಯೆಯಂತೆ ಚೆಸ್​ನಲ್ಲಿ ರೋಹ್​ಮನ್​ ಅವರನ್ನು ಸೋಲಿಸುತ್ತಿದ್ದಾರಂತೆ.

ಈಗ ಪ್ರತಿ ಬಾರಿ ಆಡಿದಾಗಲೆಲ್ಲಾ ತಮ್ಮ ಜಾಣ ನಡೆಗಳ ಮೂಲಕ ಚೆಸ್​ನಲ್ಲಿ ನನ್ನನ್ನು ಸುಷ್ಮಿತಾ ಸೋಲಿಸುತ್ತಿದ್ದಾರೆ ಎಂದು ಸ್ವತಃ ರೋಹ್​ಮನ್​ ಹೇಳಿಕೊಂಡಿದ್ದಾರೆ.

ಅಷ್ಟೇ ಅಲ್ಲ, ಸುಷ್ಮಿತಾ ಒಬ್ಬ ಒಳ್ಳೆಯ ಮನಸ್ಸುಳ್ಳ ವ್ಯಕ್ತಿ, ಹಾಗಾಗಿ ಇವರು ನನಗೆ ದೊರೆತಿರುವ ಅತ್ಯುತ್ತಮ ಗರ್ಲ್​ಫ್ರೆಂಡ್​ ಎಂದು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಕೂಡ ಮಾಡಿದ್ದಾರೆ.

ಇದಕ್ಕೆ ಪ್ರತಿಯಾಗಿ ಸುಷ್ಮಿತಾ, ಮೊದಲಿನಿಂದಲೂ ನಾನು ಅಡುಗೆಯಲ್ಲಿ ಅಷ್ಟಕಷ್ಟೇ. ಆದರೆ, ರೋಹ್​ಮನ್​ ಅತ್ಯುತ್ತಮ ಬಾಣಸಿಗ. ಒಳ್ಳೊಳ್ಳೆ ಖಾದ್ಯಗಳನ್ನು ತಯಾರಿಸಿ, ಉಣಬಡಿಸುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net