

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜನಪೂತ್ ನಿಧನರಾಗಿ 11 ದಿನಗಳಾಗಿವೆ. ಈ ಸಂದರ್ಭದಲ್ಲಿ ಅವರ ನೆನಪಿನಲ್ಲಿ ಇತ್ತೀಚೆಗೆ ಶ್ರದ್ಧಾಂಜಲಿ ಸಭೆಯೊಂದನ್ನು ಪಟ್ನಾದಲ್ಲಿ ಆಯೋಜಿಸಲಾಗಿತ್ತು. ಕುಟುಂಬ ಸದಸ್ಯರು ಮತ್ತು ಹಿತೈಷಿಗಳೆಲ್ಲಾ ಭಾಗವಹಿಸಿದ್ದ ಈ ಸಭೆಯಲ್ಲಿ ಸುಶಾಂತ್ ಅವರ ತಂದೆ, ಮಗನ ಜತೆಗೆ ಆಡಿದ ಕೊನೆಯ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಇಷ್ಟವಾದ ಹುಡುಗಿಯನ್ನು ಮದುವೆ ಮಾಡಿಕೊಳ್ಳಲು ಅವನಿಗೆ ಹೇಳುತ್ತಲೇ ಇದ್ದೆ. ಕೊನೆಯ ಬಾರಿಗೆ ಅವನು ಫೋನ್ ಮಾಡಿದಾಗಲೂ ಹೇಳಿದ್ದೆ. ಕರೊನಾ ಗಲಾಟೆಗಳೆಲ್ಲಾ ಮುಗಿದ ಮೇಲೆ ಮದುವೆಯಾಗುವುದಾಗಿ ಹೇಳಿದ್ದ. ಇದೆಲ್ಲ ಮುಗಿದ ಮೇಲೆ ಒಂದು ಚಿತ್ರ ಬಿಡುಗಡೆಯಾಗುವುದಕ್ಕಿದೆ, ಅದರ ನಂತರ ಮುಂದಿನ ಫೆಬ್ರವರಿಯಲ್ಲಿ ಮದುವೆಯಾಗುವುದಾಗಿ ಸುಶಾಂತ್ ಹೇಳಿದ್ದ ಎಂದು ಅವರ ತಂದೆ ಕೆ.ಕೆ. ಸಿಂಗ್ ನೆನಪಿಸಿಕೊಂಡಿದ್ದಾರೆ.
ಮೊದಲೆಲ್ಲಾ ಸುಶಾಂತ್ ಬಹಳ ಚೆನ್ನಾಗಿ ಮಾತನಾಡುತ್ತಿದ್ದರಂತೆ. ಆದರೆ, ಇತ್ತೀಚಿನ ದಿನಗಳಲ್ಲಿ ಮಾತು ಕಡಿಮೆ ಮಾಡಿದ್ದ ಎಂದು ಅವರ ತಂದೆ ಒಪ್ಪಿಕೊಂಡಿದ್ದಾರೆ. ಮುಂಚೆ ತುಂಬಾ ಮಾತಾಡುತ್ತಿದ್ದ. ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳುತ್ತಿದ್ದ. ಆದರೆ, ಈಗೀಗ ಮಾತು ಕಡಿಮೆ ಮಾಡಿದ್ದ. ಅವನಿಗೆ ಡಿಪ್ರೆಶನ್ ಇರುವ ವಿಷಯವೂ ನನಗೆ ಗೊತ್ತಿರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಲಾ ಬಿಡುಗಡೆ ಪೋಸ್ಟ್ಪೋನ್ … ರಿಲೀಸ್ ಯಾವಾಗ ಗೊತ್ತಾ?
ಇನ್ನು ಸುಶಾಂತ್ನ ಗರ್ಲ್ಫ್ರೆಂಡ್ ರಿಯಾ ಚಕ್ರವರ್ತಿ ಬಗ್ಗೆ ತಮಗೆ ಯಾವುದೇ ವಿಷಯ ಗೊತ್ತಿಲ್ಲ ಎಂದು ಹೇಳಿಕೊಂಡಿರುವ ಅವರು, ನನಗೆ ರಿಯಾ ಬಗ್ಗೆ ಗೊತ್ತಿಲ್ಲ. ಆದರೆ, ಅಂಕಿತಾ ಲೋಖಂಡೆ ಬಗ್ಗೆ ಗೊತ್ತು. ಒಮ್ಮೆ ಮುಂಬೈಗೆ ಬಂದಾಗಲೂ ಸುಶಾಂತ್ ಆಕೆಯನ್ನು ಭೇಟಿ ಮಾಡಿಸಿದ್ದ. ಸುಶಾಂತ್ ಮತ್ತು ಅಂಕಿತಾ ಬಹಳ ವರ್ಷಗಳಿಂದ ಪರಿಚಿತರು. ಒಟ್ಟಿಗೆ ಸೀರಿಯಲ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ನನಗೆ ಗೊತ್ತಿರುವಂತೆ ಸುಶಾಂತ್ಗೆ ಹತ್ತಿರವಿದ್ದ ಒಬ್ಬಳೆಂದರೆ ಅದು ಅಂಕಿತಾ ಮಾತ್ರ. ರಿಯಾ ಚಕ್ರವರ್ತಿ ಬಗ್ಗೆ ನನಗೆ ಯಾವುದೇ ವಿಷಯ ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ.