ಮೇಘನಾ ರಾಜ್ ಮನೆಗೆ ಭೇಟಿ ನೀಡಿದ ಮಾಜಿ ಸಿಎಂ ಸೊಸೆಗೆ ಪ್ರಥಮ್​ ಸಾಥ್​

Smitha
Published on

ಬೆಂಗಳೂರು: ನಟ ಚಿರಂಜೀವಿ ಸರ್ಜಾ ಅಕಾಲಿಕವಾಗಿ ವಿಧಿವಶರಾದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಸೊಸೆ ಸ್ಮಿತಾ, ಮೇಘನಾ ರಾಜ್ ಸರ್ಜಾ‌ರವರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದರು.

ದಿವಂಗತ ರಾಕೇಶ್ ಸಿದ್ದರಾಮಯ್ಯರವರ ಪತ್ನಿ ಸ್ಮಿತಾ ಗುರುವಾರ ಮೇಘನಾ ಅವರ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದರು. ಕೆಲಕಾಲ ಕುಟುಂಬದವರೊಟ್ಟಿಗೆ ಉಭಯಕುಶಲೋಪರಿ ನಡೆಸಿದರು.

ಭೇಟಿ ವೇಳೆ ಸ್ಮಿತಾ ಅವರಿಗೆ ಬಿಗ್​ಬಾಸ್​ ರಿಯಾಲಿಟಿ ಶೋ ವಿಜೇತ ಪ್ರಥಮ್​ ಸಾಥ್​ ನೀಡಿದರು. ಭೇಟಿ ನೀಡಿದ ಫೋಟೋಗಳನ್ನು ಪ್ರಥಮ್​ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net