

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಇನ್ನು ಕೆಲ ತಿಂಗಳಲ್ಲಿ ಬಾಲಿವುಡ್ನ ಸುಂದರಾಂಗ ಸುಶಾಂತ್ ಸಿಂಗ್ ರಜಪೂತ್ ಭಾಳ ಬಂಧನಕ್ಕೆ ಅಡಿ ಇಡುತ್ತಿದ್ದರು. ಆದರೆ, ವಿಧಿ ಮಾತ್ರ ಅದ್ಯಾವುದಕ್ಕೆ ಅವಕಾಶ ನೀಡದೆ, ದುರಂತಕ್ಕೆ ನಾಂದಿ ಹಾಡಿತು.
ಹೌದು, ಮದುವೆಯಾಗುವ ಬಗ್ಗೆ ಸ್ವತಃ ತಂದೆ ಕೆಕೆ ಸಿಂಗ್ ಜತೆಗೆ ಸುಶಾಂತ್ ಮಾತನಾಡಿದ್ದರಂತೆ. ಅಷ್ಟೇ ಅಲ್ಲ ಅಪ್ಪನ ಕಡೆಯಿಂದಲೂ ಮದುವೆಗೆ ಗ್ರೀನ್ ಸಿಗ್ನಲ್ ಸಹ ಸಿಕ್ಕಿತ್ತಂತೆ. ಈ ವಿಚಾರ ಕೆಕೆ ಸಿಂಗ್ ಅವರ ಆಪ್ತ ವಲಯಕ್ಕೆ ಗೊತ್ತಿತ್ತು. ಇದೀಗ ಈ ಸುದ್ದಿ ಪೊಲೀಸ್ ಇಲಾಖೆ ಗಮನಕ್ಕೂ ಬಂದಿದೆ. ಆದರೆ, ಆ ಹುಡುಗಿ ಯಾರು ಎಂಬದನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ. ಕೆಲ ಮೂಲಗಳ ಪ್ರಕಾರ ಸುಶಾಂತ್ ಮದುವೆಯಾಗಬೇಕಿದ್ದ ಹುಡುಗಿ ಬೆಂಗಾಲಿ ಮೂಲದವರು ಎನ್ನಲಾಗುತ್ತಿದೆ.
ಇದನ್ನೂ ಓದಿ: ಸುಶಾಂತ್ ಕೊನೆಯ ಚಿತ್ರಕ್ಕೆ ನೂರೆಂಟು ವಿಘ್ನಗಳು!
ಅಂದಹಾಗೆ, ಸುಶಾಂತ್ ತಾನಿಷ್ಟಪಟ್ಟ ಹುಡುಗಿಯನ್ನು ಮದುವೆಯಾಗುವುದಾಗಿ ಮನೆಯವರೊಂದಿಗೆ ಚರ್ಚೆ ಮಾಡಿ ಅವರಿಂದ ಒಪ್ಪಿಗೆ ಪಡೆದುಕೊಂಡಿದ್ದರು. ಖುಷಿಯಲ್ಲಿಯೇ ಮದುವೆ ತಯಾರಿ ಮಾಡಿಕೊಳ್ಳಲು ಪ್ಲ್ಯಾನ್ ಮಾಡಿತ್ತು ಕುಟುಂಬ. ನವೆಂಬರ್ಗೆ ಮದುವೆ ಫಿಕ್ಸ್ ಎಂದೂ ದಿನಾಂಕ ನಿಗದಿ ಮಾಡಿಕೊಂಡಿತ್ತು. ಆದರೆ, ಅಷ್ಟರಲ್ಲಾಗಲೇ ವಿಧಿಯ ಆಟವೇ ಬೇರೆಯದಾಗಿತ್ತು. ಖಿನ್ನತೆಗೆ ಜೋತು ಬಿದ್ದು, ಕೋಣೆಯಲ್ಲಿನ ಬೆಡ್ಶೀಟ್ಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡರು. (ಏಜೆನ್ಸೀಸ್)