

ಬೆಂಗಳೂರು: ‘ಸೀತಾ ವಲ್ಲಭ’ ಖ್ಯಾತಿಯ ಸುಪ್ರೀತಾ ಸತ್ಯನಾರಾಯಣ್, ‘ಲಾಂಗ್ ಡ್ರೖೆವ್’ ಎಂಬ ಚಿತ್ರದ ಮೂಲಕ ಹಿರಿತೆರೆಗೆ ಎಂಟ್ರಿ ಕೊಡುತ್ತಾರೆ ಎಂಬುದು ಹಳೆಯ ಸುದ್ದಿ. ಈಗ ಆ ಚಿತ್ರ ಮುಗಿದಿರುವುದಷ್ಟೇ ಅಲ್ಲ, ಜುಲೈನಲ್ಲಿ ಬಿಡುಗಡೆಯಾಗಲಿದೆ.
ತಮ್ಮ ಪಾತ್ರದ ಕುರಿತು ಮಾತನಾಡುವ ಸುಪ್ರೀತಾ, ‘ನಾನಿಲ್ಲಿ ಟ್ರೖೆನಿ ಡಾಕ್ಟರ್ ಪಾತ್ರ ಮಾಡಿದ್ದೇನೆ. ಜೀವನದಲ್ಲಿ ನಾವು ಅಂದುಕೊಂಡಿದ್ದೆಲ್ಲವೂ ಆಗುವುದಿಲ್ಲ. ನಾವೇನೋ ಪ್ಲಾನ್ ಮಾಡಿಕೊಂಡಿರುತ್ತೇವೆ. ಆಗ ಅನಿರೀಕ್ಷಿತ ಘಟನೆಯೊಂದರಿಂದ ಬದುಕು ಹೇಗೆ ತಿರುವು ಪಡೆಯುತ್ತದೆ, ಆ ಸಂದರ್ಭದಲ್ಲಿ ನಾವು ಏನೆಲ್ಲ ಎದುರಿಸಬೇಕಾಗುತ್ತದೆ, ಅದರಿಂದ ಹೇಗೆ ಹೊರಬಂದು ಜೀವನದಲ್ಲಿ ಪಾಠ ಕಲಿಯುತ್ತೇವೆ ಎಂಬುದನ್ನು ಹೇಳುವ ಪ್ರಯತ್ನ ಮಾಡಿದ್ದೇವೆ’ ಎನ್ನುತ್ತಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ಶ್ರೀರಾಜ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಕುರಿತು ಮಾತನಾಡುವ ಅವರು, ‘ಸಾಮಾನ್ಯ
ವಾಗಿ ಹಲವರು ಆಗಾಗ ಲಾಂಗ್ ಡ್ರೖೆವ್ ಹೋಗುವುದನ್ನು ನೋಡಿರುತ್ತೇವೆ. ಹಾಗೆ ಹೋದ ಸಂದರ್ಭದಲ್ಲಿ ಎದುರಾಗಬಹುದಾದ ಕೆಲವು ಅನಿರೀಕ್ಷಿತ ಘಟನೆಗಳ ಸುತ್ತ ಈ ಸಿನಿಮಾ ಮಾಡಿದ್ದೇವೆ. ಇದೊಂದು ನೈಜ ಘಟನೆಗಳನ್ನಾಧರಿಸಿದ ಚಿತ್ರ.’ ಎನ್ನುತ್ತಾರೆ. ‘ಲಾಂಗ್ ಡ್ರೖೆವ್’ನಲ್ಲಿ ನಾಯಕನಾಗಿ ಅರ್ಜುನ್ ಯೋಗಿ ನಟಿಸಿದ್ದು, ಇನ್ನೊಬ್ಬ ನಾಯಕಿಯಾಗಿ ತೇಜಸ್ವಿನಿ ಶೇಖರ್ ಕಾಣಿಸಿಕೊಂಡಿದ್ದಾರೆ. ಮಂಜುನಾಥ ಗೌಡ ನಿರ್ವಿುಸಿರುವ ಈ ಚಿತ್ರಕ್ಕೆ ವಿಕಾಸ್ ವಸಿಷ್ಠ ಸಂಗೀತ ಸಂಯೋಜಿಸಿದ್ದು, ಕಿಟ್ಟಿ ಕೌಶಿಕ್ ಛಾಯಾಗ್ರಹಣ ಮಾಡಿದ್ದಾರೆ. ಬೆಂಗಳೂರು, ಮೈಸೂರು ಸುತ್ತಮುತ್ತ ‘ಲಾಂಗ್ ಡ್ರೖೆವ್’ ಶೂಟಿಂಗ್ ನಡೆದಿದೆ.