ಮನೆಯ ಬಾವಿಯಲ್ಲಿ ಶವ; ಕೊಳೆತು ನಾರಿದ ಮೇಲೇ ಗೊತ್ತಾಗಿದ್ದು!

Well
ಬಾವಿಯಿಂದ ಶವ ಮೇಲಕ್ಕೆತ್ತುತ್ತಿರುವುದು..
Published on

ಮಂಗಳೂರು: ಮನೆಯೊಂದರ ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಕಂಡುಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಈ ಪ್ರಕರಣ ನಡೆದಿದೆ. ಇಲ್ಲಿನ ಉಜಿರೆಯ ನಾಗರಾಜ ಕಾಂಪೌಂಡ್​ನಲ್ಲಿದ್ದ ಬಾವಿಯಲ್ಲಿ ಈ ಶವ ಪತ್ತೆಯಾಗಿದೆ.

ಈ ಜಾಗದ ಮಾಲೀಕರು ಮೈಸೂರಿನಲ್ಲಿ ನೆಲೆಸಿದ್ದಾರೆ. ವಾರದ ಹಿಂದೆ ಇಲ್ಲಿಗೆ ಬಂದಿದ್ದ ಇವರು ಆಗ ಬಾವಿಯಲ್ಲಿ ಈ ಶವದ ತಲೆ ಕಾಣಿಸಿದ್ದರೂ ಅದು ಮರದಿಂದ ಬಿದ್ದ ತೆಂಗಿನಕಾಯಿ ಇದ್ದಿರಬಹುದು ಎಂದುಕೊಂಡು ಭಾವಿಸಿ ಸುಮ್ಮನಾಗಿದ್ದರು.

ಆದರೆ ಇಂದು ಮತ್ತೆ ಬಂದಾಗ ಮನೆಯ ಪರಿಸರದಲ್ಲಿ ವಾಸನೆ ಬಂದು ಬಾವಿಯನ್ನು ಪರಿಶೀಲಿಸಿದಾಗ ಅಲ್ಲಿ ಶವ ಇರುವುದು ಕಂಡುಬಂದಿದೆ. ಸ್ಥಳೀಯರ ಸಹಕಾರದಿಂದ ಶವವನ್ನು ಮೇಲಕ್ಕೆತ್ತಲಾಗಿದ್ದು, ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿಯಾಗಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net