ಪತಿಗೆ 'ಬ್ಯಾಡ್​ ನ್ಯೂಸ್​' ಕೊಟ್ಟ ಪತ್ನಿ ; ಒಂದೂವರೆ ತಿಂಗಳ ನವವಿವಾಹಿತೆ 4 ತಿಂಗಳ ಗರ್ಭಿಣಿ!

Bride
Published on

ಉತ್ತರಪ್ರದೇಶ: ಮದುವೆ ಬಳಿಕ ಪತಿ ಹಾಗೂ ಮನೆಯವರು ನವವಿವಾಹಿತೆ ಕಡೆಯಿಂದ ಗುಡ್​ನ್ಯೂಸ್​ನ ನಿರೀಕ್ಷೆಯಲ್ಲಿರುವುದು ಸಹಜ. ಆದರೆ ಇಲ್ಲೊಬ್ಬಾಕೆ ಪತಿಗೆ ಬ್ಯಾಡ್​ನ್ಯೂಸ್​ ಕೊಟ್ಟಿದ್ದಾಳೆ. ಒಂದೂವರೆ ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಈಕೆ ಈ ನಾಲ್ಕು ತಿಂಗಳ ಗರ್ಭಿಣಿ!

ಹೌದು.. ತಿಂಗಳ ಹಿಂದಷ್ಟೇ ಮದುವೆಯಾಗಿದ್ದರೂ ಪತ್ನಿ ಅಷ್ಟರಲ್ಲೇ ನಾಲ್ಕು ತಿಂಗಳ ಗರ್ಭಿಣಿ ಆಗಿರುವುದು ಪತಿಗೆ ಮತ್ತು ಆತನ ತಾಯಿಗೆ ದಿಗ್ಭ್ರಮೆ ಮೂಡಿಸಿದೆ. ಅಷ್ಟಕ್ಕೆ ಸುಮ್ಮನಾಗದ ಪತಿ ಇದೀಗ ಪತ್ನಿಯ ವಿರುದ್ಧ ಠಾಣೆಯ ಮೆಟ್ಟಿಲೇರಿದ್ದು, ಪೊಲೀಸರಿಗೆ ದೂರು ನೀಡಿದ್ದಾನೆ.

ಉತ್ತರಪ್ರದೇಶದ ಮಹರಾಜ್​ಗಂಜ್​ ಎಂಬಲ್ಲಿನ ಇಂಥದ್ದೊಂದು ಘಟನೆ ನಡೆದಿದೆ. ಪತ್ನಿ ಹೊಟ್ಟೆನೋವಿನಿಂದ ಬಳಲುತ್ತಿದ್ದ ಕಾರಣಕ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ತಪಾಸಣೆ ನಡೆಸಿದ ಪತಿಗೆ, ಪತ್ನಿ ಅದಾಗಲೇ ಗರ್ಭಿಣಿ ಎಂಬ ಆಘಾತದ ಸುದ್ದಿ ಗೊತ್ತಾಗಿದೆ. ಪುತ್ರಿಯ ಪರಿಸ್ಥಿತಿ ಗೊತ್ತಿದ್ದರೂ ಆಕೆಯ ಮನೆಯವರು ತನಗೆ ಮದುವೆ ಮಾಡಿಸಿ ಮೋಸ ಮಾಡಿದ್ದಾರೆ ಎಂದು ಆರೋಪ ಮಾಡಿರುವ ಪತಿ, ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net