ಕಪಿಲ್​ ಶರ್ಮಾ V/s ಸುನೀಲ್​ ಗ್ರೋವರ್​; ಹೊಸ ಕಾಮಿಡಿ ಶೋ ಮೂಲಕ ಗುತ್ತಿ ಆಗಮನ!

sunil
Published on

ಕಪಿಲ್​ ಶರ್ಮಾ ಕಾಮಿಡಿ ಶೋದಲ್ಲಿ ಕಾಣಿಸಿಕೊಂಡು ಹಾಸ್ಯದ ಮೂಲಕ ಕಚಗುಳಿ ಇಡುತ್ತಿದ್ದ, ಸುನೀಲ್​ ಗ್ರೋವರ್ ಆ ಶೋದಿಂದ ಕಳೆದ ವರ್ಷ ಹೊರಬಂದಿದ್ದರು. ಕಪಿಲ್​ ಮತ್ತು ಸುನೀಲ್​ ನಡುವೆ ವೈಮನಸ್ಸು ಏರ್ಪಟ್ಟ ಹಿನ್ನೆಲೆಯಲ್ಲಿ ಇಬ್ಬರು ಬೇರೆ ಬೇರೆಯಾಗಿದ್ದಾರೆಂಬ ಸುದ್ದಿ ಹರಿದಾಡಿತ್ತು. ಇದೀಗ ಅದಕ್ಕೆ ಪ್ರತ್ಯುತ್ತರ ಎಂಬಂತೆ ಹೊಸ ಕಾಮಿಡಿ ಶೋ ಆರಂಭಿಸಲು ಸುನೀಲ್​ ಸಿದ್ಧತೆ ಮಾಡಿಕೊಂಡಿದ್ದಾರೆ.

ಯಾವಾಗ ಕಪಿಲ್ ಶರ್ಮಾ ಟೀಮ್​ ಬಿಟ್ಟು ಸುನೀಲ್​ ಆಚೆ ಬಂದರೋ, ಆವತ್ತೇ ಸುನೀಲ್​ ಹೊಸ ಶೋ ಶುರುಮಾಡುತ್ತಾರೆಂಬ ಸುದ್ದಿ ಹರಿದಾಡಿತ್ತು. ಈಗ ಆ ಕಾಲ ಕೂಡಿಬಂದಿದೆ. ಗ್ಯಾಂಗ್ಸ್ ಆಫ್​ ಫಿಲ್ಮಿಸ್ತಾನ್​ ಹೆಸರಿನ ಶೋ ಶುರು ಮಾಡುತ್ತಿರುವ ಸುನೀಲ್​, ಈ ಶೋದಲ್ಲಿ ಡಾನ್​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಸ್ಟಾರ್ ಭಾರತ್​ ವಾಹಿನಿಯಲ್ಲಿ ಈ ಶೋ ಪ್ರಸಾರ ಕಾಣಲಿದೆ.

ಶಿಲ್ಪಾ ಶಿಂಧೆ, ಸಿದ್ಧಾರ್ಥ ಸಾಗರ್​, ಸಂಕೇತ್​ ಭೋಸಲೆ, ಸುಗಂಧಾ ಮಿಶ್ರಾ, ಪರಿತೀಶ್ ತ್ರಿಪಾಠಿ, ಜತಿನ್​ ಸೂರಿ ಇನ್ನುಳಿದ ಪಾತ್ರಧಾರಿಗಳಾಗಿ ಶೋದಲ್ಲಿರಲಿದ್ದಾರೆ. ಈ ಮೊದಲು ಕಪಿಲ್​ ಶರ್ಮಾ ಶೋದಲ್ಲಿ ಗುತ್ತಿ ಮತ್ತು ಮಶೂರ್​ ಗುಲಾಟಿ ಪಾತ್ರದಲ್ಲಿ ಸುನೀಲ್​ ಕಾಣಿಸಿಕೊಂಡು ಖ್ಯಾತಿ ಗಿಟ್ಟಿಸಿಕೊಂಡಿದ್ದರು.

ಅಂದಹಾಗೆ, ಕಳೆದ ವರ್ಷ ಸಲ್ಮಾನ್​ ಖಾನ್​ ಜತೆ ಭಾರತ್ ಸಿನಿಮಾ ಶೂಟಿಂಗ್​ ಸಲುವಾಗಿ ಆಸ್ಟ್ರೇಲಿಯಾಕ್ಕೆ ಇಡೀ ತಂಡ ತೆರಳಿತ್ತು. ಸುನೀಲ್ ಸಹ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರಿಂದ ಅವರೂ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಿದ್ದರು. ಇತ್ತ ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಕಪಿಲ್​ ಶರ್ಮಾ ಜತೆ ವೈಮನಸ್ಸು ಉಂಟಾಗಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net