ಸುಳ್ಳುಸುದ್ದಿ ಹಬ್ಬಿಸಬೇಡಿ ಎಂದು ವಿನಂತಿ ಮಾಡಿಕೊಂಡ ಸುನೀಲ್​ ಶೆಟ್ಟಿ … ಯಾಕೆ ಗೊತ್ತಾ?

K L Rahul and Athiya Shetty 1
Published on

ಮುಂಬೈ: ಖ್ಯಾತ ಕ್ರಿಕೆಟಿಗ ಮತ್ತು ನಟಿ ಅಥಿಯಾ ಶೆಟ್ಟಿ ಮದುವೆಗೆ ಆಗಮಿಸಿದ್ದ ಅತಿಥಿಗಳು, ದಂಪತಿಗೆ ಕಾಸ್ಟ್ಲಿ ಉಡುಗೊರೆಗಳನ್ನು ಕೊಟ್ಟಿದ್ದು ಸುದ್ದಿಯಾಗಿತ್ತು. ಆದರೆ, ಅವೆಲ್ಲ ಸುಳ್ಳು ಎಂದು ಅಥಿಯಾ ತಂದೆ ಮತ್ತು ಬಾಲಿವುಡ್​ ನಟ ಸುನೀಲ್​ ಶೆಟ್ಟಿ ಹೇಳಿಕೊಂಡಿದ್ದಾರೆ.

ರಾಹುಲ್​ ಮತ್ತು ಅಥಿಯಾ ಮದುವೆ ಇತ್ತೀಚೆಗಷ್ಟೇ ಕಂಡಾಲದಲ್ಲಿ ಆಗಿತ್ತು. ಈ ಮದುವೆಯಲ್ಲಿ ಬಾಲಿವುಡ್​ನ ಸಾಕಷ್ಟು ಸೆಲೆಬ್ರಿಟಿಗಳ ಜತೆಗೆ, ಭಾರತೀಯ ಕ್ರಿಕೆಟ್​ ತಂಡದ ಹಲವು ಆಟಗಾರರು ಹಾಜರಿದ್ದು, ರಾಹುಲ್​ ಮತ್ತು ಅಥಿಯಾಗೆ ಶುಭ ಕೋರಿದ್ದರು. ಅಷ್ಟೇ ಅಲ್ಲ, ದುಬಾರಿ ಗಿಫ್ಟ್​ಗಳನ್ನು ನೀಡಿದ್ದರು ಎಂದು ಸುದ್ದಿಯಾಗಿತ್ತು.

ಮೂಲಗಳ ಪ್ರಕಾರ, ತಂದೆ ಸುನೀಲ್​ ಶೆಟ್ಟಿ 50 ಕೋಟಿ ಮೌಲ್ಯದ ದುಬಾರಿ ಫ್ಲಾಟ್​ ನೀಡಿ, ಹೊಸ ಜೋಡಿಗೆ ಆಶೀರ್ವಾದ ಮಾಡಿದ್ದಾರಂತೆ. ಇದಲ್ಲದೆ ಸಲ್ಮಾನ್ ಖಾನ್1.6 ಕೋಟಿ ರೂ. ಮೌಲ್ಯದ AUDI ಕಾರ್, ಜಾಕಿ ಶ್ರಾಫ್ 30 ಲಕ್ಷದ ಚಾಪರ್ಡ್​ ವಾಚ್​, ಅರ್ಜುನ್ ಕಪೂರ್ 1.5 ಕೋಟಿ ರೂ. ಬೆಲೆಯ ಬ್ರೇಸ್ಲೆಟ್ ಉಡುಗೊರೆಯಾಗಿ ನೀಡಿದ್ದು ಸುದ್ದಿಯಾಗಿತ್ತು. ಇದಲ್ಲದೆ ರಾಹುಲ್​ಗೆ ಧೋನಿ ಕಡೆಯಿಂದ 80 ಲಕ್ಷ ರೂ. ಮೌಲ್ಯದ ಕವಾಸಕಿ ನಿಂಜಾ ಬೈಕ್ ಗಿಫ್ಟ್ಟ್ ಸಿಕ್ಕರೆ, ವಿರಾಟ್​ ಕೋಹ್ಲಿ ದಂಪತಿಯು 2.70 ಕೋಟಿ ರೂ. ಮೊತ್ತದ ಬಿ.ಎಂ.ಡಬ್ಲ್ಯು ಕಾರ್ ಗಿಫ್ಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ, ಇವೆಲ್ಲವೂ ಸುಳ್ಳು ಎಂದು ಸುನೀಲ್​ ಶೆಟ್ಟಿ ಹೇಳಿದ್ದಾರೆ. ಈ ಕುರಿತು ಮಾತನಾಡಿರುವ ಅವರು, 'ಆಥಿಯಾ ಮದುವೆಯಲ್ಲಿ ಸಿಕ್ಕಿರುವ ಉಡುಗೊರೆಗಳ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಸುದ್ದಿ ಪ್ರಸಾರ ಮಾಡುವುದಕ್ಕೆ ಮುನ್ನ ಒಮ್ಮೆ ನಮ್ಮನ್ನು ಕೇಳಿ. ಸುಳ್ಳುಸುದ್ದಿ ಹಬ್ಬಿಸಬೇಡಿ' ಎಂದು ವಿನಂತಿ ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net