ರವಿಚಂದ್ರನ್, ರಮ್ಯಾ ಈಗ ಕೆಸಿಸಿ ಬ್ರ್ಯಾಂಡ್ ಅಂಬಾಸಿಡರ್

Ravichandran - Ramya
Published on

ಬೆಂಗಳೂರು: ಫೆಬ್ರವರಿ 11 ಮತ್ತು 12ರಂದು ನಡೆಯಲಿರುವ ಕರ್ನಾಟಕ ಚಲನಚಿತ್ರ ಕಪ್​ನ ಮೂರನೇ ಸೀಸನ್​ನ ಅಂಬಾಸಿಡರ್ ಆಗಿ ರವಿಚಂದ್ರನ್ ಹಾಗೂ ರಮ್ಯಾ ಕಾರ್ಯನಿರ್ವಹಿಸಲಿದ್ದಾರೆ.

ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಟೂರ್ನಿಯಲ್ಲಿ ಆಡುವ ಆಟಗಾರರ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಈ ಪ್ರಕ್ರಿಯೆಯಲ್ಲಿ ಶಿವರಾಜಕುಮಾರ್, ಸುದೀಪ್, ಉಪೇಂದ್ರ, ಗಣೇಶ್, ಧ್ರುವ ಸರ್ಜಾ, ಶರಣ್​, ಧನಂಜಯ ಸೇರಿದಂತೆ ಹಲವರರು ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ಟೂರ್ನಿಯ ಕುರಿತು ಹಲವು ಮಹತ್ವದ ವಿಷಯಗಳನ್ನು ಹಂಚಿಕೊಳ್ಳಲಾಗುತ್ತಿದೆ.

ಈ ಸಂದರ್ಭದಲ್ಲಿ ರವಿಚಂದ್ರನ್​ ಮತ್ತು ರಮ್ಯಾ ಅವರು ಟೂರ್ನಿಯ ರಾಯಭಾರಿಗಳೆಂದು ಘೋಷಿಸಲಾಯಿತು. ಈ ಕುರಿತು ಮಾತನಾಡಿರುವ ರಮ್ಯಾ, 'ನಾನು ಸ್ವಲ್ಪ ಕುಳ್ಳಿಯಾದರೂ, ಬ್ಯಾಸ್ಕೆಟ್​ ಬಾಲ್​ ಚೆನ್ನಾಗಿ ಆಡುತ್ತಿದ್ದೆ. ಅದನ್ನು ಹೊರತುಪಡಿಸಿದರೆ, ನಾನು ಕ್ರೀಡೆಗಳಲ್ಲಿ ಹೆಚ್ಚು ತೊಡಗಿಸಿಕೊಂಡಿರಲಿಲ್ಲ. ಕೆಲವು ವರ್ಷಗಳ ಹಿಂದೆ, ಆರ್​ಸಿಬಿ ಅಂಬಾಸಿಡರ್ ಆಗಿದ್ದೆ. ನಿಮ್ಮ ಫೆವರೇಟ್ ಸ್ಟಾರ್ ಯಾರು ಅಂದ್ರೆ ಶೇನ್ ವಾರ್ನ್ ಅಂತ ಹೇಳಿದ್ದೆ' ಎಂದು ನೆನಪಿಸಿಕೊಂಡರು.

ಈ ಬಾರಿ ಟೂರ್ನಿ ಬರೀ ಬೆಂಗಳುರಿಗೆ ಮಾತ್ರ ಸೀಮಿತವಾಗುವುದಿಲ್ಲವಂತೆ. ಮೈಸೂರಿನಲ್ಲೂ ಟೂರ್ನಿ ನಡೆಯಲಿದೆ. ಈ ಟೂರ್ನಿಗೆ ಅಂತಾರಾಷ್ಟ್ರೀಯ ಆಟಗಾರರನ್ನು ಕರೆಸುವ ಉದ್ದೇಶವಿದ್ದರೂ ಅದು ಕಷ್ಟ ಎನ್ನುವ ಅವರು, 'ಅಂತಾರಾಷ್ಟ್ರೀಯ ಆಟಗಾರರನ್ನು ಕರೆತರೋದು ಬಹಳ ಕಷ್ಟ. ಅವರನ್ನು ಭೇಟಿ ಮಾಡುವುದೇ ಕಷ್ಟ. ದುಡ್ಡಿದ್ದರೆ ಎಲ್ಲವೂ ಆಗುವುದಿಲ್ಲ. ಅದರ ಹಿಂದೆ ಸಾಕಷ್ಟು ಶ್ರಮ ಬೇಕು' ಎನ್ನುತ್ತಾರೆ ಸುದೀಪ್​.

ಈ ಬಾರಿಯ ಟೂರ್ನಿಯಲ್ಲಿ ಸುದೀಪ್, ಶಿವರಾಜಕುಮಾರ್​, ಉಪೇಂದ್ರ, ಗಣೇಶ್, 'ಡಾಲಿ' ಧನಂಜಯ್ ಮುಂತಾದವರು ಭಾಗವಹಿಸುತ್ತಿದ್ದಾರೆ. 'ಕೆಸಿಸಿ ಸೀಸನ್ 3' ಪಂದ್ಯಗಳನ್ನು ಫೆಬ್ರವರಿ 11 ಹಾಗೂ 12ರಂದು ಆಯೋಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net