ಮತ್ತೆ ಬಂದ ಸುನೀಲ್; 12 ವರ್ಷಗಳ ನಂತರ ‘ತುರ್ತು ನಿರ್ಗಮನ’ದಲ್ಲಿ ನಟನೆ

Sunil
Published on
ಬೆಂಗಳೂರು: ‘ಎಕ್ಸ್​ಕ್ಯೂಸ್ ಮಿ’ ಖ್ಯಾತಿಯ ಸುನೀಲ್ ರಾವ್ ಬರೋಬ್ಬರಿ 12 ವರ್ಷಗಳ ನಂತರ ದೊಡ್ಡಪರದೆಗೆ ವಾಪಸ್ಸಾಗಿದ್ದಾರೆ. ಅದು ‘ತುರ್ತ ನಿರ್ಗಮನ’ ಚಿತ್ರದ ಮೂಲಕ. ಅದಕ್ಕೆ ಕಾರಣ ನಿರ್ದೇಶಕ ಹೇಮಂತ್ ಕುಮಾರ್ ಎನ್ನುತ್ತಾರೆ ಸುನೀಲ್ ರಾವ್. ‘ಅವರು ಹೇಳಿದ ಕಥೆ ಇಷ್ಟವಾಯಿತು. ಯಾರೇ ನಟರು ಕಥೆ ಕೇಳಿದ್ದರೂ ಬೇಡ ಅನ್ನದಂತಹ ಕಥೆ ಇದು. ಅದಕ್ಕೆ ಒಪ್ಪಿಕೊಂಡೆ. ನಾನು 12 ವರ್ಷಗಳಿಂದ ಚಿತ್ರ ಮಾಡಿಲ್ಲ. ಆದರೆ, ಅಷ್ಟು ವರ್ಷಗಳ ನಂತರ ಇಂತಹ ಒಳ್ಳೆಯ ಚಿತ್ರ ಮಾಡಿದ ಖುಷಿಯಿದೆ’ ಎಂದು ಚಿತ್ರ ಹಾಗೂ ತಾವು ಮತ್ತೆ ಬೆಳ್ಳಿತೆರೆಗೆ ಮರಳಿದ ಬಗ್ಗೆ ಹೇಳಿಕೊಳ್ಳುತ್ತಾರೆ ಸುನೀಲ್ ರಾವ್.

ಈ ಚಿತ್ರದಲ್ಲಿ ಹಿತಾ ಚಂದ್ರಶೇಖರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ‘ನಾವು ಬೇರೆ ಭಾಷೆಗಳಲ್ಲಿ ವಿಭಿನ್ನ ಕಥೆಯ ಚಿತ್ರಗಳು ಬಂದರೆ ಹೋಗಿ ನೋಡುತ್ತೇವೆ. ‘ತುರ್ತ ನಿರ್ಗಮನ’ ಕೂಡ ಒಂದು ಪ್ರಯೋಗಾತ್ಮಕ ಚಿತ್ರ’ ಎಂದು ಸಿನಿಮಾದ ಬಗ್ಗೆ ಮತ್ತಷ್ಟು ಮಾಹಿತಿ ಹಂಚಿಕೊಳ್ಳುತ್ತಾರೆ. ಇನ್ನು, ಚಿತ್ರದಲ್ಲಿ ಕ್ರಿಕೆಟ್ ಕೋಚ್ ಪಾತ್ರದಲ್ಲಿ ನಟಿಸಿರುವ ಸಂಯುಕ್ತಾ ಹೆಗ್ಡೆ, ‘ಈ ಸಿನಿಮಾ ಒಂದು ವಿಷುಯಲ್ ಟ್ರೀಟ್. ಗ್ರಾಫಿಕ್ ಅಂತೂ ಅದ್ಭುತ. ಹಾಗಾಗಿ ಇದನ್ನು ಮನೆಯಲ್ಲಿ ನೋಡುವುದಕ್ಕಿಂತ ಚಿತ್ರಮಂದಿರದಲ್ಲಿ ನೋಡಬೇಕು’ ಎನ್ನುತ್ತಾರೆ.

ರಾಜ್ ಬಿ. ಶೆಟ್ಟಿ, ಸುಧಾರಾಣಿ, ಅಮೃತಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಚಿತ್ರವು ಇದೇ ಜೂನ್ 24ರಂದು ತೆರೆಗೆ ಬರಲಿದೆ.

https://www.vijayavani.net/upendras-new-film-ui-launched/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net