

ಎರಡು ವರ್ಷಗಳ ಹಿಂದೆ ‘ಬಬ್ರೂ’ ಎಂಬ ಚಿತ್ರವನ್ನು ನಿರ್ವಿುಸಿದ್ದ ಸುಮನ್ ನಗರ್ಕರ್, ಆ ನಂತರ ಯಾವೊಂದು ಚಿತ್ರವನ್ನೂ ಒಪ್ಪಿಕೊಂಡ ಸುದ್ದಿಯಾಗಿರಲಿಲ್ಲ. ಈಗ ಸುಮನ್ ನಗರ್ಕರ್, ಸದ್ದಿಲ್ಲದೆ ‘ಸ್ಟಾಕರ್’ ಎಂಬ ಚಿತ್ರದಲ್ಲಿ ನಟಿಸಿದ್ದು, ಇದೇ ಮೊದಲ ಬಾರಿಗೆ ಉಗ್ರ ನಿಗ್ರಹ ಪಡೆಯ ಅಧಿಕಾರಿಯಾಗಿ ಕಾಣಿಸಿಕೊಂಡಿರುವುದು ವಿಶೇಷ. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದ್ದು, ಮುಂದಿನ ವರ್ಷ ಬಿಡುಗಡೆಯಾಗುವ ಸಾಧ್ಯತೆ ಇದೆ.
ರಾಮ್ಗೋಪಾಲ್ ವರ್ಮಾ ಕ್ಯಾಂಪ್ನಲ್ಲಿ ಐದಾರು ವರ್ಷಗಳ ಕಾಲ ಕೆಲಸ ಕಲಿತಿರುವ ಕಿಶೋರ್ ಭಾರ್ಗವ್ ಈ ಚಿತ್ರದ ನಿರ್ದೇಶಕರು. ಇದಕ್ಕೂ ಮುನ್ನ ‘ಸೈಕೋ’ ಎಂಬ ತೆಲುಗು ಚಿತ್ರವನ್ನು ನಿರ್ದೇಶಿಸಿದ್ದ ಕಿಶೋರ್ ಭಾರ್ಗವ್, ಈಗ ‘ಸ್ಟಾಕರ್’ ಚಿತ್ರವನ್ನು ಕನ್ನಡ ಮತ್ತು ಹಿಂದಿಯಲ್ಲಿ ತೆರೆಗೆ ತರುತ್ತಿದ್ದಾರೆ.
ಥ್ರಿಲ್ಲರ್ ಜತೆಗೆ ಸಸ್ಪೆನ್ಸ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಎಸ್.ಎಂ.ಎಲ್ ಪ್ರೊಡಕ್ಷನ್ಸ್ ಮತ್ತು ಸ್ಕ್ರಿಪ್ಟ್ ಟೀಸ್ ಫಿಲಂಸ್ ಜತೆಯಾಗಿ ನಿರ್ವಿುಸಿದೆ. ಸುಮನ್ ನಗರ್ಕರ್ ಜತೆಗೆ ರಾಮ್ ಐಶ್ವರ್ಯಾ ನಂಬಿಯಾರ್, ಉದಯ್ ಆಚಾರ್, ನಮ್ರತಾ ಪಾಟೀಲ್ ಭವಾನಿ ಶಂಕರ್ ದೇಸಾಯಿ ಮುಂತಾದವರು ನಟಿಸಿದ್ದಾರೆ.