ಉದ್ದ ಕೂದಲು ಕತ್ತರಿಸಿ ಬೋಳಾದ ಸುಕೃತಾ ... ಕ್ಯಾನ್ಸರ್ ರೋಗಿಗೆ ಕೂದಲು ದಾನ

sukrutha wagle for web
Published on

‘ಜಟ್ಟ’, ‘ಮೇಘ ಅಲಿಯಾಸ್ ಮ್ಯಾಗಿ’ ಖ್ಯಾತಿಯ ಸುಕೃತಾ ವಾಗ್ಲೆ ತಮ್ಮ ಕೂದಲು ಕತ್ತರಿಸಿದ್ದಾರೆ. ಅದರಲ್ಲೇನು ವಿಶೇಷ ಎಂದನಿಸಬಹುದು. ನಟಿಯರು ಸಾಮಾನ್ಯವಾಗಿ ತಮ್ಮ ಹೇರ್ ಸ್ಟೈಲ್ ಬದಲಾಯಿಸುತ್ತಿರುವುದಷ್ಟೇ ಅಲ್ಲ, ಕೂದಲನ್ನು ಟ್ರಿಮ್ ಮಾಡುತ್ತಲೇ ಇರುತ್ತಾರೆ. ಆದರೆ, ಸುಕೃತಾ ಬರೀ ಕೂದಲು ಟ್ರಿಮ್ ಮಾಡಿಸಿಲ್ಲ, ಪೂರ್ತಿ ಬೋಳಿಸಿದ್ದಾರೆ.

ಇದಕ್ಕೆ ಕಾರಣವೇನಿರಬಹುದು ಎಂದು ಆಶ್ಚರ್ಯವಾಗದೇ ಇರುವುದಿಲ್ಲ. ತಾವು ಕೂದಲು ಕತ್ತರಿಸುತ್ತಿರುವ ವೀಡಿಯೋವೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಸುಕೃತಾ, ಕ್ಯಾನ್ಸರ್ ರೋಗಿಯೊಬ್ಬರಿಗೆ ತಮ್ಮ ಕೂದಲನ್ನು ದಾನ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ ಈ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡಿರುವ ಸುಕೃತಾ, ‘ನನ್ನ ಉದ್ದ ಕೂದಲಿನ ಬಗ್ಗೆ ತುಂಬಾ ಪ್ರೀತಿ ಇದೆ. ತಲೆ ಬೋಳಿಸಿ ಆ ಕೂದಲನ್ನು ಕ್ಯಾನ್ಸರ್ ರೋಗಿಯೊಬ್ಬರಿಗೆ ದಾನ ಮಾಡುತ್ತಿದ್ದೇನೆ’ ಎಂದು ಸುಕೃತಾ ಟ್ವೀಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net