More

    ಮನೆ ಬಿಟ್ಟು ಎರಡು ವರ್ಷದೊಳಗೆ ಡ್ರಗ್ ಅಡಿಕ್ಟ್ ಆಗಿದ್ದೆ … ಹಳೆಯ ದಿನಗಳನ್ನು ಮೆಲುಕು ಹಾಕಿದ ಕಂಗನಾ ರಣಾವತ್

    ‘ನಾನು ಮನೆ ಬಿಟ್ಟು ಓಡಿ ಹೋದಾಗ ನನ್ನ ವಯಸ್ಸು ಹದಿನೈದೋ, ಹದಿನಾರೋ ಆಗಿತ್ತು. ಮನೆ ಬಿಟ್ಟು ಒಂದೂವರೆ, ಎರಡು ವರ್ಷಗಳ ಅಂತರದಲ್ಲಿ ದೊಡ್ಡ ಸ್ಟಾರ್ ಆಗಿದ್ದೆ. ಹಾಗೆಯೇ ಡ್ರಗ್ ಅಡಿಕ್ಟ್ ಸಹ ಆಗಿಬಿಟ್ಟಿದೆ …’

    ಹಾಗಂತ ಹೇಳಿಕೊಂಡಿರುವುದು ನಟಿ ಕಂಗನಾ ರಣಾವತ್. ಕರೊನಾ ವೈರಸ್‌ನಿಂದ ಚಿತ್ರರಂಗ ಲಾಕೌಟ್ ಆಗಿರುವ ಹಿನ್ನೆಲೆಯಲ್ಲಿ, ಅವರು ಹಿಮಾಚಲ ಪ್ರದೇಶದ ತಮ್ಮ ಹುಟ್ಟೂರಿಗೆ ಹೋಗಿದ್ದಾರೆ. ಅಲ್ಲಿ ತಮ್ಮ ಕುಟುಂಬದವರ ಜತೆಗೆ ಕಾಲ ಕಳೆಯುತ್ತಿರುವ ಕಂಗನಾ, ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಹಳೆಯ ದಿನಗಳ ಅನುಭವವನ್ನು ಹಂಚಿಕೊಂಡಿದ್ದಾರೆ.

    ‘ಇದು ಅತ್ಯಂತ ಕೆಟ್ಟ ದಿನಗಳು ಅಂತ ಹೇಳುವುದನ್ನು ಕೇಳಿದ್ದೇನೆ. ಒಳ್ಳೇದು, ಕೆಟ್ಟದ್ದು ಅನ್ನೋದರ ಬಗ್ಗೆ ಯೋಚಿಸೋಕೆ ಹೋಗಬೇಡಿ. ನಿಜ ಹೇಳಬೇಕೆಂದರೆ, ಕೆಟ್ಟ ಸಮಯವೇ ಅತ್ಯಂತ ಒಳ್ಳೆಯ ಸಮಯ. ನಾನು ಮನೆ ಬಿಟ್ಟು ಹೋದಾಗ ನನಗೆ 16 ವರ್ಷ ಇರಬಹುದು. ಮನೆ ಬಿಟ್ಟು ಒಂದೂವರೆ ಎರಡು ವರ್ಷಗಳ ಅಂತರದಲ್ಲಿ ದೊಡ್ಡ ಸ್ಟಾರ್ ಆಗಿದ್ದೆ. ಜತೆಗೆ ಡ್ರಗ್ ಅಡಿಕ್ಟ್ ಸಹ ಆಗಿದ್ದೆ. ನನ್ನ ಜೀವನ ಅಕ್ಷರಶಃ ನರಕವಾಗಿತ್ತು. ಕೆಲವು ಕೆಟ್ಟ ಜನರ ಸಹವಾಸದಲ್ಲಿ ಸಿಕ್ಕಿದ್ದೆ. ಸಾವು ಮಾತ್ರ ನನ್ನನ್ನು ಅವರಿಂದ ಪಾರು ಮಾಡಬೇಕಿತ್ತು. ಇದೆಲ್ಲ ಬಹಳ ಚಿಕ್ಕ ವಯಸ್ಸಿನಲ್ಲಿ ನಡೆದು ಹೋಯಿತು.ಆ ಸಂದರ್ಭದಲ್ಲಿ ಒಬ್ಬ ಒಳ್ಳೆಯ ಸ್ನೇಹಿತರ ಪರಿಚಯವಾಯಿತು. ಅವರು ನನಗೆ ಆಧ್ಯಾತ್ಮದ ಬಗ್ಗೆ ಪರಿಚಯಿಸಿಕೊಟ್ಟರು. ರಾಜಯೋಗ ಪುಸ್ತಕ ಕೊಟ್ಟರು. ಆ ನಂತರ ಸ್ವಾಮಿ ವಿವೇಕಾನಂದರನ್ನು ನನ್ನ ಗುರುವನ್ನಾಗಿ ಸ್ವೀಕರಿಸಿ, ಬದಲಾದೆ’ ಎಂದು ಕಂಗನಾ ಹೇಳಿಕೊಂಡಿದ್ದಾರೆ.

    ‘ನನ್ನ ಜೀವನದಲ್ಲಿ ಆ ಸವಾಲಿನ ದಿನಗಳು ಬರದೇ ಇದ್ದರೆ, ಕಳೆದೇ ಹೋಗಿರುತ್ತಿದೆ …’ ಎನ್ನುವ ಕಂಗನಾ, ‘ಆಧ್ಯಾತ್ಮಿಕ ಮಾರ್ಗದರ್ಶನವಿಲ್ಲದಿದ್ದರೆ, ಇಚ್ಛಾಶಕ್ತಿ ಗಳಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಹಾಗೆಯೇ ನನ್ನ ಪ್ರತಿಭೆಯನ್ನು ರೂಪಿಸಿಕೊಳ್ಳುವುದಕ್ಕೆ ಆಗುತ್ತಿರಲಿಲ್ಲ. ಆಧ್ಯಾತ್ಮಿಕ ಮಾರ್ಗದರ್ಶನದಿಂದಲೇ ಇವೆಲ್ಲಾ ಸಾಧ್ಯವಾಗಿದ್ದು. ನನ್ನ ಉದ್ದೇಶ ಇಷ್ಟೇ. ಈ ಸಮಯವನ್ನು ಚೆನ್ನಾಗಿ ಬಳಸಿಕೊಳ್ಳಿ. ಕೆಟ್ಟ ಸಮಯ ಅಂತ ಕೊರಗುವುದನ್ನು ಬಿಟ್ಟು, ಅದನ್ನೇ ಒಳ್ಳೆಯ ಸಮಯವನ್ನಾಗಿ ಪರಿವರ್ತಿಸಿಕೊಳ್ಳಿ’ ಎಂದು ಸಲಹೆ ನೀಡಿದ್ದಾರೆ ಕಂಗನಾ.

    ಹುಲಿಯ ಹುಟ್ಟುಹಬ್ಬ ಇಂದು … ಟೈಗರ್ ಪ್ರಭಾಕರ್ ನೆನಪಲ್ಲಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts