More

    ಸನಾತನ ಧರ್ಮದಿಂದ ದೇಶದ ಘನತೆ ಹೆಚ್ಚಳ

    ಸೊರಬ: ಸಾಧು ಸಂತರ ವಿಚಾರಗಳು ಹಾಗೂ ಆಧ್ಯಾತ್ಮಿಕ ಚಿಂತನೆಗಳಿAದ ದೇಶದ ಘನತೆ ಹೆಚ್ಚಿಸಿದೆ ಎಂದು ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಶ್ರೀ ಅಲ್ಲಮ ಪ್ರಭು ಸ್ವಾಮೀಜಿ ಹೇಳಿದರು.
    ತಾಲೂಕಿನ ಜಡೆ ಸಂಸ್ಥಾನ ಮಠದಲ್ಲಿ ಮಂಗಳವಾರ ಸಂಜೆ ಶ್ರೀ ಸಿದ್ಧವೃಷಭೇಂದ್ರ ಶಿವಯೋಗಿಗಗಳ ಜೀವನ ದರ್ಶನದ ಪುರಾಣ ಪ್ರವಚನ ಮಹಾಮಂಗಲೋತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ. ಹಿಂದೆ ಸಂಸ್ಕಾರ ಇತ್ತು, ಶಿಕ್ಷಣ ಇರಲಿಲ್ಲ. ಇಂದು ಶಿಕ್ಷಣವಂತರಿದ್ದಾರೆ, ಆದರೆ ಸಂಸ್ಕಾರವAತರಿಲ್ಲ. ಸಂಸ್ಕಾರ, ಸಂಸ್ಕÈತಿ ಈ ದೇಶದ ಬೇರಾಗಿದ್ದು ಪೋಷಿಸಬೇಕಿದೆ. ಯುವಜನತೆಗೆ ಉತ್ತಮ ಸಂಸ್ಕಾರ ನೀಡದಿದ್ದರೆ ಮುಂದಿನ ಪೀಳಿಗೆಗೆ ಶಾಪವಾಗಿ ಪರಿಣಮಿಸುತ್ತದೆ. ಸ್ವಾಮೀಜಿ ಮತ್ತು ಸಮಾಜ ಕಣ್ಣುಗಳಿದ್ದಂತೆ. ಸಂಸ್ಕಾರ ಉಳಿಸಿ ಬೆಳೆಸುವ ಕೆಲಸ ಆಗಬೇಕು ಎಂದರು.
    ಶೆಗುಣಸಿ ಮಠ ಡಾ.ಪ್ರಭು ಮಹಾಂತ ಸ್ವಾಮೀಜಿ ಮಾತನಾಡಿ, ತತ್ವ ಸಿದ್ಧಾಂತ, ಭಾಷೆಗಳಿಗೆ ಧರ್ಮದ ಹಂಗಿಲ್ಲ. ಅಲ್ಲಮ ಪ್ರಭುವಿನ ಷಟ್ ಸ್ತಲ ಗ್ರಂಥಗಳನ್ನು ತಲೆಮೇಲೆ ಹೊತ್ತು ಮೆರವಣಿಗೆ ಮಾಡುವಾಗ ಮುಸ್ಲಿಂ ಧರ್ಮದ ವ್ಯಕ್ತಿಯೂ ಪಾಲ್ಗೊಂಡಿದ್ದು ಜಡೆ ಮಠದ ಚಿಂತನೆ, ಸಮಾಜಮುಖಿ ಕಾರ್ಯಗಳ ಘನತೆ ಹೆಚ್ಚಿಸಿದೆ. ಧರ್ಮದ ಆಚರಣೆಗೆ ಒತ್ತು ನೀಡಿದಾಗ ಮಾತ್ರ ಧರ್ಮ ಉಳಿಯುತ್ತದೆ. ಸಮರ್ಥ ಗುರುಗಳಿದ್ದರೆ ಯೋಗ್ಯ ಭಕ್ತರು ಇರುತ್ತಾರೆ. ಅಂತಹ ಗುರುಗಳಲ್ಲಿ ಜಡೆ ಮಹಾಂತ ಸ್ವಾಮೀಜಿಯೂ ಒಬ್ಬರು ಎಂದರು.
    ಜಡೆ ಸಂಸ್ಥಾನ ಮಠದ ಡಾ.ಮಹಾಂತ ಸ್ವಾಮೀಜಿ, ಶಿರಸಿ ಚಿಕ್ಕತೊಟ್ಟಿಲಕೆರೆ ಹಾಗೂ ಬಣ್ಣದ ಮಠದ ಶ್ರೀ ಶಿವಲಿಂಗ ಮಹಾಸ್ವಾಮೀಜಿ, ಅರೆಕೇರಿ ಶ್ರೀ ಶಿವಲಿಂಗ ಮಹಾಸ್ವಾಮೀಜಿ, ಉತ್ತರಾಽಕಾರಿ ಶ್ರೀ ರುದ್ರದೇವರು, ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಹಾರನಳ್ಳಿ ಮಠದ ಶ್ರೀ ನೀಲಕಂಠ ಸ್ವಾಮೀಜಿ, ಚನ್ನಬಸವೇಶ್ವರ, ಗದಿಗೇಶ್ವರ ಸ್ವಾಮೀಜಿ, ಲಿಂಗನಾಯಕನಹಳ್ಳಿಯ ಶ್ರೀನಿರಂಜನ ದೇವರು ಸೇರಿ ವಿವಿಧ ಶ್ರೀಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts