ನಟಿ ಸುಧಾರಾಣಿ ತಂದೆ ಗೋಪಾಲಕೃಷ್ಣ ವಿಧಿವಶ

Ashwathnarayan - Final
Published on

ಬೆಂಗಳೂರು: ಹಿರಿಯ ನಟಿ ಸುಧಾರಾಣಿ ಅವರ ತಂದೆ ಹೆಚ್.ಎಸ್ ಗೋಪಾಲಕೃಷ್ಣ ಅವರು ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ.

93 ವರ್ಷದ ಗೋಪಾಲಕೃಷ್ಣ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮಲ್ಲೇಶ್ವರಂನ ನಿವಾಸದಲ್ಲಿ ಅವರು ವಿಧಿವಶರಾಗಿದ್ದಾರೆ.

ಗೋಪಾಲಕೃಷ್ಣ ಅವರ ಅಂತಿಮಸಂಸ್ಕಾರ ಶನಿವಾರ ಬೆಳಿಗ್ಗೆ ಮಲ್ಲೇಶ್ವರಂನ ಹರಿಶ್ಚಂದ್ರ ಘಾಟ್​ನಲ್ಲಿ ನಡೆದಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net