ಸುದೀಪ್ ಜತೆ ಸಾಹೋ ನಿರ್ದೇಶಕನ ಸಿನಿಮಾ?

Sudeep
Published on

ಬೆಂಗಳೂರು: ಕನ್ನಡದ ಜತೆಗೆ ಪರಭಾಷೆಯ ಸಿನಿಮಾ ಮೇಕರ್​ಗಳಿಗೂ ಸುದೀಪ್ ಅಚ್ಚುಮೆಚ್ಚು. ಇಲ್ಲಿನ ಸಿನಿಮಾಗಳ ಜತೆಗೆ ಬೇರೆ ಬೇರೆ ಭಾಷೆಯ ಚಿತ್ರಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರವರು. ಆಗೊಮ್ಮೆ ಈಗೊಮ್ಮೆ ಬೇರೆ ಇಂಡಸ್ಟ್ರಿಗಳ ನಿರ್ದೇಶಕರ ಜತೆಗೆ ಸುದೀಪ್ ಹೆಸರು ತಳುಕು ಹಾಕಿಕೊಳ್ಳುವುದೂ ಅಷ್ಟೇ ಸಾಮಾನ್ಯವಾಗಿದೆ. ಈಗ ಹೊಸದಾಗಿ ಪ್ರಭಾಸ್​ಗೆ ‘ಸಾಹೋ’ ಚಿತ್ರ ನಿರ್ದೇಶಿಸಿದ್ದ ಸೂಜಿತ್, ಸುದೀಪ್ ಜತೆಗೆ ಸಿನಿಮಾ ಮಾಡಲಿದ್ದಾರೆಂಬ ಮಾತು ಕೇಳಿಬಂದಿದೆ.

ಇತ್ತೀಚೆಗಷ್ಟೇ ಸುದೀಪ್ ಅವರನ್ನು ಭೇಟಿ ಮಾಡಿರುವ ಸೂಜಿತ್, ಸಿನಿಮಾ ಮಾಡುವ ಬಗ್ಗೆ ಚರ್ಚೆ ಮಾಡಿದ್ದಾರಂತೆ. ಕಥೆಯ ಒಂದೆಳೆಯನ್ನೂ ಹೇಳಿದ್ದಾರಂತೆ. ಸದ್ಯ ಈ ಚರ್ಚೆ ಆರಂಭಿಕ ಹಂತದಲ್ಲಿದ್ದು, ಕೈಯಲಿರುವ ಪ್ರಾಜೆಕ್ಟ್ ಗಳನ್ನು ಮುಗಿಸಿಕೊಂಡು ಸುದೀಪ್ ಮುಂದಿನ ನಡೆ ಏನೆಂಬುದನ್ನು ಸುದೀಪ್ ತಿಳಿಸಲಿದ್ದಾರಂತೆ. ಸದ್ಯ ‘ವಿಕ್ರಾಂತ್ ರೋಣ’ ಚಿತ್ರದ ಶೂಟಿಂಗ್ ಜತೆಗೆ ಬಿಗ್​ಬಾಸ್ ಸೀಸನ್ 8ರ ನಿರೂಪಣೆಯಲ್ಲಿಯೂ ಅವರು ಬಿಜಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net