ಕಬ್ಜ ಚಿತ್ರತಂಡಕ್ಕೆ ಸುದೀಪ್​ ಎಂಟ್ರಿ; ಮತ್ತೆ ಒಂದಾದ ಮುಕುಂದ ಮುರಾರಿ

Ullasa Kabza
Published on

ಬೆಂಗಳೂರು: ಈ ಸಂಕ್ರಾಂತಿಗೆ ‘ಕಬ್ಜ’ ಚಿತ್ರತಂಡದಿಂದ ಒಂದು ಸರ್​ಪ್ರೖೆಸ್!

ಹಾಗಂತ ಆ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ಆರ್. ಚಂದ್ರು ಎರಡು ದಿನಗಳ ಹಿಂದಷ್ಟೇ ಘೋಷಿಸಿದ್ದರು. ಗುರುವಾರ ಬೆಳಗ್ಗೆ 10 ಗಂಟೆಗೆ ಆ ಸರ್​ಪ್ರೖೆಸ್ ಏನು ಎಂದು ತಿಳಿಸುವುದಾಗಿ ಹೇಳಿದ್ದರು. ಆದರೆ, ಎರಡು ದಿನಗಳ ಮುಂಚೆಯೇ ಆ ಸರ್​ಪ್ರೖೆಸ್ ಬಯಲಾಗಿದ್ದು, ಚಿತ್ರದಲ್ಲಿ ಸುದೀಪ್ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ ಆಗಿದೆ.

ಉಪೇಂದ್ರ ಮತ್ತು ಸುದೀಪ್, ನಾಲ್ಕು ವರ್ಷಗಳ ಹಿಂದೆ ಬಿಡುಗಡೆಯಾದ ‘ಮುಕುಂದ ಮುರಾರಿ’ ಚಿತ್ರದಲ್ಲಿ ನಟಿಸಿದ್ದರು. ಇದೀಗ ‘ಕಬ್ಜ’ ಚಿತ್ರದಲ್ಲಿ ಮತ್ತೆ ಜತೆಯಾಗಲಿದ್ದಾರೆ. ಈ ಚಿತ್ರದಲ್ಲಿ ಸುದೀಪ್ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಗುರುವಾರ ಅವರ ಫಸ್ಟ್ ಲುಕ್ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಸುದೀಪ್ ಅವರ ಪಾತ್ರವೇನು ಎಂಬ ವಿಷಯವನ್ನು ರಹಸ್ಯವಾಗಿಟ್ಟಿದ್ದು, ಅದನ್ನು ಚಿತ್ರದಲ್ಲೇ ನೋಡಿ ಎನ್ನುತ್ತಾರೆ ಚಂದ್ರು.

ಅಂಡರ್​ವರ್ಲ್ಡ್ ಹಿನ್ನೆಲೆಯ ‘ಕಬ್ಜ’ ಚಿತ್ರದ ಚಿತ್ರೀಕರಣ ಕಳೆದ ವರ್ಷವೇ ಶುರುವಾಗಿತ್ತು. ಆದರೆ, ಲಾಕ್​ಡೌನ್​ನಿಂದಾಗಿ ಚಿತ್ರೀಕರಣ ನಿಂತಿತ್ತು. ಇದೀಗ ಜನವರಿ ಕೊನೆಯ ವಾರದಿಂದ ಪುನಃ ಪ್ರಾರಂಭವಾಗಲಿದ್ದು, ಬೆಂಗಳೂರಿನ ಮಿನರ್ವ ಮಿಲ್​ನಲ್ಲಿ ಚಿತ್ರಕ್ಕಾಗಿಯೇ ವಿಶೇಷ ಸೆಟ್ ನಿರ್ವಿುಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net