

ಬೆಂಗಳೂರು: ಕನ್ನಡದ ಬಿಗ್ಬಾಸ್ ಸೀಸನ್ 8 ಅದ್ಭುತವಾಗಿ ಮೂಡಿಬರುತ್ತಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಕಿಚ್ಚ ಸುದೀಪ್ ಮನೆ ಮಂದಿಯೊಂದಿಗೆ ಮಾತನಾಡಿ, ತಪ್ಪನ್ನು ತಿದ್ದಿ, ಸರಿಯನ್ನು ಪ್ರಶಂಶಿಸಿ, ಮನೆಯಿಂದ ಒಬ್ಬರನ್ನು ಆಚೆ ಕರೆಸುತ್ತಿದ್ದರು. ಆದರೆ ಕಳೆದ ಎರಡು ವಾರಗಳಿಂದ ಅನಾರೋಗ್ಯ ಹಿನ್ನೆಲೆಯಲ್ಲಿ ಸುದೀಪ್ ಬಿಗ್ಬಾಸ್ನಿಂದ ದೂರ ಉಳಿದಿದ್ದರು. ಅದೇ ರೀತಿ ಈ ವಾರನೂ ಬಿಗ್ಬಾಸ್ ಇಂದ ತಪ್ಪಿಸಿಕೊಳ್ತಾರಾ ಅಥವಾ ಅವರೇ ಬಂದು ಎಲಿಮಿನೇಷನ್ ಮಾಡ್ತಾರಾ?
ಇಂತದ್ದೊಂದು ಪ್ರಶ್ನೆ ಎಲ್ಲರ ತಲೆಯಲ್ಲು ಕಾಡಿದೆ. ಆ ಪ್ರಶ್ನೆಗೆ ಇದೀಗ ಸ್ವತಃ ಸುದೀಪ್ ಅವರೇ ಉತ್ತರ ನೀಡಿದ್ದಾರೆ. ಟ್ವಿಟ್ಟರ್ನಲ್ಲಿ ಟ್ವೀಟ್ ಮಾಡಿರುವ ಅವರು, "ನನಗಾಗಿ ಪ್ರಾರ್ಥಿಸಿದ್ದಕ್ಕಾಗಿ ಧನ್ಯವಾದಗಳು. ನನ್ನ ಆರೋಗ್ಯ ಸುಧಾರಿಸಿದೆ. ಈ ವಾರ ಬಿಗ್ಬಾಸ್ಗೆ ತೆರಳುವುದಕ್ಕೆ ಕಾಯುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ.
ಅದರೊಂದಿಗೆ ಅವರಿಗೆ ಚಿಕಿತ್ಸೆ ನೀಡುತ್ತಿರುವ ಡಾ. ವೆಂಕಟೇಶ್ ಮತ್ತು ಡಾ. ವಿನಯ್ಗೆ ಧನ್ಯವಾದ ತಿಳಿಸಿದ್ದಾರೆ. ದೇಗುಲಗಳಲ್ಲಿ ನನಗಾಗಿ ಪ್ರಾರ್ಥನೆ ಮಾಡಿದ ಅನೇಕ ವಿಡಿಯೋಗಳನ್ನು ನೋಡಿದ್ದೇನೆ. ನಿಮಗೆಲ್ಲರಿಗೂ ಲವ್ ಯು ಎನ್ನಬಹುದು, ಅಷ್ಟೇ ನನ್ನ ಕೈಲಿ ಸಾಧ್ಯವಾಗುವುದು ಎಂದು ಹೇಳಿದ್ದಾರೆ.
ಎರಡು ವಾರ ಬಿಗ್ಬಾಸ್ಗೆ ಬಾರದ ಸುದೀಪ್ ಈ ವಾರ ಬರುವುದು ದೃಢವಾಗಿದೆ. (ಏಜೆನ್ಸೀಸ್)