ಮತ್ತೆ ನಾಲ್ಕು ಸರ್ಕಾರಿ ಶಾಲೆ ದತ್ತು ಪಡೆದ ಕಿಚ್ಚ ಸುದೀಪ್​

Ullasa- sudeep
Published on

ಬೆಂಗಳೂರು: ಕರೊನಾ ಸಂಕಷ್ಟ ಕಾಲದಲ್ಲಿ ಮಾನವೀಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕಿಚ್ಚ ಸುದೀಪ್, ಇತ್ತೀಚೆಗಷ್ಟೇ ನಾಲ್ಕು ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡು ಸುದ್ದಿಯಾಗಿದ್ದರು. ಇದೀಗ ಇನ್ನೂ ನಾಲ್ಕು ಶಾಲೆಗಳನ್ನು ದತ್ತು ಪಡೆಯುವ ಮೂಲಕ ಸಮಾಜಮುಖಿ ಕೆಲಸಕ್ಕೆ ಮುಂದಾಗಿದ್ದಾರೆ.

ಕಳೆದ ತಿಂಗಳು ಚಿತ್ರದುರ್ಗ ಜಿಲ್ಲೆಯಲ್ಲಿನ ನಾಲ್ಕು ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡಿದ್ದ ಕಿಚ್ಚ ಸುದೀಪ್, ಇದೀಗ ತಮ್ಮೂರು ಶಿವಮೊಗ್ಗ ಜಿಲ್ಲೆಯ ಶಾಲೆಗಳತ್ತ ಗಮನಹರಿಸಿದ್ದಾರೆ. ಸಾಗರ ತಾಲೂಕಿನಲ್ಲಿರುವ ಆವಿಗೆ ಹಳ್ಳಿ, ಹಾಳಸಸಿ ಮತ್ತು ಸಾಗರದ ಎಸ್.ಎನ್ ಬಡಾವಣೆ, ಎಲ್.ಎಲ್. ಹಳ್ಳಿಯಲ್ಲಿನ ಸರ್ಕಾರಿ ಶಾಲೆಗಳನ್ನು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ದತ್ತು ಪಡೆದುಕೊಂಡು, ಅಭಿವೃದ್ಧಿ ಕೆಲಸಕ್ಕೆ ಪಣತೊಟ್ಟಿದೆ.

ಅಂದಹಾಗೆ, ಮುಂದಿನ ಐದು ವರ್ಷಗಳ ಕಾಲ ಈ ಶಾಲೆಯ ಅಭಿವೃದ್ಧಿಯ ಹೊಣೆ ಸುದೀಪ್ ಹೊರಲಿದ್ದು, ಆಯಾ ಶಾಲೆಗಳಲ್ಲಿನ ಬೇಕು ಬೇಡಿಕೆಗಳನ್ನು ಸಂಪೂರ್ಣವಾಗಿ ಪಟ್ಟಿ ಮಾಡಲಾಗಿದೆ. ಶಾಲಾ ಶಿಕ್ಷಕರ ಸಂಬಳ ಮತ್ತು ಮಕ್ಕಳ ಶಿಷ್ಯವೇತನ ಬಿಟ್ಟು ಶಾಲೆಯ ಕಟ್ಟಡ ನಿರ್ವಣ, ಪೇಂಟಿಂಗ್, ಶೌಚಗೃಹ ನಿರ್ಮಾಣ ಸೇರಿ ಶಾಲೆಗೆ ಬೇಕಾದ ಮೂಲ ಸೌಕರ್ಯವನ್ನು ಟ್ರಸ್ಟ್ ಮೂಲಕ ಒದಗಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net