ಒಂದು ಅದ್ಭುತ ಅನುಭವ; 'RRR' ಚಿತ್ರ ನೋಡಿ ಹೊಗಳಿದ ಸ್ಟೀವನ್​ ಸ್ಪೀಲ್​ಬರ್ಗ್​

S S Rajamouli - Steven Speilberg
Published on

ಲಾಸ್​ ಆಂಜಲೀಸ್​: ಕೆಲವು ದಿನಗಳ ಹಿಂದೆ ಅಮೆರಿಕದ ಸಮಾರಂಭವೊಂದರಲ್ಲಿ ನಿರ್ದೇಶಕ ರಾಜಮೌಳಿ ಮತ್ತು ಸ್ಟೀವನ್​ ಸ್ಪೀಲ್​ಬರ್ಗ್​ ಭೇಟಿಯಾಗಿದ್ದು, ಅವರು ನಮ್ಮ ದೇವರು ಎಂದು ಸ್ಪೀಲ್​ಬರ್ಗ್​ ಕುರಿತು ರಾಜಮೌಳಿ ಹೇಳಿದ್ದರು. ಈಗ 'RRR' ಚಿತ್ರ ನೋಡಿರುವ ಸ್ಪೀಲ್​ಬರ್ಗ್​, ಅದೊಂದು ಅದ್ಭುತ ಅನುಭವ ಎಂದು ಬಣ್ಣಿಸಿದ್ದಾರೆ. ಅಷ್ಟೇ ಅಲ್ಲ, ಅಂಥದ್ದೊಂದು ಚಿತ್ರ ಮಾಡಿರುವ ರಾಜಮೌಳಿ ಬೆನ್ನುತಟ್ಟಿದ್ದಾರೆ.

ಇತ್ತೀಚೆಗೆ ಚಿತ್ರ ನೋಡಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿರುವ ಸ್ಪೀಲ್​ಬರ್ಗ್​, 'ಅದೊಂದು ಔಟ್​ಸ್ಟಾಂಡಿಂಗ್​ ಚಿತ್ರ. ನಾವು ಭೇಟಿಯಾದಾಗ, 'RRR' ನೋಡುವುದಕ್ಕೆ ಸಾಧ್ಯವಾಗಿರಲಿಲ್ಲ. ಕಳೆದ ವಾರ ನೋಡುವ ಅವಕಾಶ ಸಿಕ್ಕಿತು. ನಿಜ ಹೇಳಬೇಕೆಂದರೆ, ನನ್ನ ಕಣ್ಣನ್ನೇ ನಾನು ನಂಬದಾದೆ. ಅದೊಂದು ಅಸಾಧಾರಣ ಚಿತ್ರ, ಒಂದು ಅದ್ಭುತ ಅನುಭವ' ಎಂದು ಹೇಳಿಕೊಂಡಿದ್ದಾರೆ.

ಇದನ್ನು ಕೇಳಿ ಖುಷಿಯಾಗಿರುವ ರಾಜಮೌಳಿ, 'ನಿಮ್ಮ ಮಾತು ಕೇಳಿ ನನಗೆ ಕುಣಿಯಬೇಕು ಅಂತನಿಸುತ್ತಿದೆ' ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ 'RRR' ಚಿತ್ರವನ್ನು ನೋಡಿದ್ದ 'ಟೈಟಾನಿಕ್​', 'ಅವತಾರ್​' ಮುಂತಾದ ಚಿತ್ರಗಳ ಖ್ಯಾತಿಯ ಜೇಮ್ಸ್​ ಕ್ಯಾಮರಾನ್​, 'ನಿಮಗೇನಾದರೂ ಹಾಲಿವುಡ್​ನಲ್ಲಿ ಚಿತ್ರ ಮಾಡುವ ಯೋಚನೆ ಇದ್ದರೆ ಬನ್ನಿ, ಮಾತಾಡೋಣ' ಎಂದು ರಾಜಮೌಳಿಗೆ ಆಫರ್​ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net