ತಾಯ್ತನದ ಅನುಭವವೇ ಸುಂದರ. ಅದರಲ್ಲೂ ಮಗು ಹುಟ್ಟಿ ಒಂದೆರೆಡು ವರ್ಷಗಳ ಸಮಯ, ಬಹಳ ಅವಿಸ್ಮರಣೀಯ ಎಂದರೆ ತಪ್ಪಿಲ್ಲ. ಈ ಸುಂದರ ಅನುಭವವನ್ನು ಕೆಲ ನಟಿಮಣಿಯರು ಹೇಗೆ ಸವಿದರು, ಮಗುವಾದ ನಂತರ ಅವರ ಜೀವನಶೈಲಿ ಹೇಗೆಲ್ಲಾ ಬದಲಾಯಿತು, ಲಾಕ್ಡೌನ್ ಸಮಯದಲ್ಲಿ ಅವರೆಲ್ಲಾ ಮಕ್ಕಳ ಜತೆ ಹೇಗೆ ಸಮಯ ಕಳೆದರು ಎಂಬುದರ ಬಗ್ಗೆ ವಿಜಯವಾಣಿ ಜತೆ ಅನುಭವ ಹಂಚಿಕೊಂಡಿದ್ದಾರೆ.
ಕೆ.ಬಿ. ಶುಭ ಬೆಂಗಳೂರು ಮಗ ಸಿನಿಮಾ ನೋಡಲು ಬಿಡುತ್ತಿಲ್ಲ!
‘ಮಗುವಿನೆ ಏನೇ ತರಕಾರಿ ಅಥವಾ ಹಣ್ಣು ಕೊಡಬೇಕು ಎಂದರೂ ಮೊದಲು ಬಿಸಿನೀರಿಗೆ ಉಪು್ಪ ಹಾಕಿ ಸೋಕ್ ಮಾಡಿ ಕೊಡುತ್ತೇನೆ. ಮಗ ಜಿಯಾನ್ ಐಯ್ಯಪ್ಪ ಬಂದ ಮೇಲೆ ನನ್ನ ಜೀವನ ಬಹಳ ಬದಲಾಗಿದೆ’ ಎನ್ನುತ್ತಾರೆ ‘ಮಜಾ ಟಾಕೀಸ್’ನ ಶ್ವೇತಾ ಚೆಂಗಪ್ಪ. ‘ಮಗನ ಆಟ-ಪಾಠ ನೋಡುವುದರಲ್ಲೇ ಸಮಯ ಕಳೆದು ಹೋಗುತ್ತಿದೆ. ಮಗನನ್ನು ಮಲಗಿಸಿ, ಮನೆ ಕೆಲಸ ಎಲ್ಲ ಮುಗಿಸಿ ಒಂದು ಸಿನಿಮಾ ನೋಡೋಣ ಎನ್ನುವಾಗ ಎದ್ದೇ ಬಿಡುತ್ತಾನೆ. ಕಳೆದ ಆರು ತಿಂಗಳಿಂದ ನನಗೆ ಸಿನಿಮಾ ನೋಡಲು ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ ಶ್ವೇತಾ. ‘ಕರೊನಾ ಇರೋದ್ರಿಂದ ಮನೆ ಕೆಲಸದವರನ್ನು ಕರೆಸಿಕೊಳ್ಳುತ್ತಿಲ್ಲ. ಹಾಗಾಗಿ ಮನೆ ಕೆಲಸ ಮಾಡಿ ಕೊಳ್ಳುವುದರಲ್ಲೆ ಸಾಕಷ್ಟು ವರ್ಕ್ಔಟ್ ಆಗುತ್ತದೆ. ಜಿಯಾನ್ನನ್ನ ನೋಡಿಕೊಳ್ಳಲು ಅಮ್ಮ ಇರಲಿಲ್ಲ ಅಂದಿದ್ದರೆ ಇಷ್ಟೊತ್ತಿಗೆ ನಾನು ಹುಚ್ಚಿಯಾಗಿರುತ್ತಿದ್ದೆ. ಜಿಯಾನ್ ಕೂಡ ಅಮ್ಮನನ್ನು ತುಂಬ ಹಚ್ಚಿಕೊಂಡಿದ್ದಾನೆ. ಮಗು ಆದ ಮೇಲೆ ಲೈಫ್ ತುಂಬಾ ಬದಲಾಗುತ್ತೆ ಅಂತ ಕಸಿನ್ ಹೇಳುವಾಗ, ‘ಹೇ... ಕಮಾನ್ ನಾವೆಲ್ಲ ಬೆಳೆದಿಲ್ವಾ?’ ಅಂತ ಹೇಳುತ್ತಿದ್ದೆ. ಆದರೆ, ಈಗ ಹಾಗಿಲ್ಲ. ದಿನದ 24 ಗಂಟೆ ಅವನ ಕಡೆ ಗಮನ ಕೊಡಲೇಬೇಕು. ಮಕ್ಕಳ ಆಟ, ತರ್ಲೆ, ಕೀಟಲೆ, ಹಠ ಎಲ್ಲವನ್ನು ನಾವು ಕಿರಿಕಿರಿ ಎಂದುಕೊಳ್ಳದೆ ಎಂಜಾಯ್ ಮಾಡಬೇಕು. ತಾಯಿಯಂದಿರ ಸಹನೆ, ಕಾಳಜಿ ಎಲ್ಲ ನಾನು ತಾಯಿಯಾದ ಮೇಲೆ ಗೊತ್ತಾಗ್ತಾ ಇದೆ’ ಎಂದು ವಿಶ್ವದ ಎಲ್ಲ ತಾಯಂದಿರಿಗು ಶ್ವೇತಾ ನಮನ ಸಲ್ಲಿಸುತ್ತಾರೆ.
ನನಗೆ ನಿದ್ದೆ ಗಿಫ್ಟ್ ಮಾಡಿ
‘ನನ್ನ ಕಾಲ ಮೇಲೆ ಇದ್ದಾಗ ಜಿಯಾನ್ ಚೆನ್ನಾಗಿ ನಿದ್ದೆ ಮಾಡ್ತಾನೆ. ಬೆಡ್ ಮೇಲೆ ಮಲಗಿಸಿ ನಾನು ಮಲಗುವಷ್ಟರಲ್ಲಿ ಎದ್ದು ಬಿಡ್ತಾನೆ. ಬೆಳಗ್ಗೆ 4 ಗಂಟೆಗೆ ಎಬ್ಬಿಸುತ್ತಾನೆ. ಗರ್ಭಿಣಿ ಇದ್ದಾಗಿನಿಂದ ನಿದ್ದೆ ಸರಿಯಾಗಿಲ್ಲ. ಗಿಫ್ಟ್ ಏನು ಬೇಕು ಅಂತ ಯಾರಾದರು ಕೇಳಿದರೆ. ನನಗೆ ಯಾವುದೇ ಅಡಚಣೆ ಇಲ್ಲದೇ ನಿದ್ದೆ ಮಾಡೋ ತರ ಗಿಫ್ಟ್ ಕೊಡಿ ಅಂತ ಕೇಳ್ತೀನಿ’ ಎಂದು ನಿದ್ದೆ ಮಿಸ್ ಮಾಡಿ ಕೊಂಡ ಬಗ್ಗೆ ಕನವ ರಿಸುತ್ತಾರೆ ಶ್ವೇತಾ.
‘ಕರೊನಾ ಲಾಕ್ಡೌನ್ ಎಂದ ಕೂಡಲೆ ಮಗನ ಸುರಕ್ಷತೆ ದೃಷ್ಟಿಯಿಂದ ರಿಷಭ್ ಊರಾದ ಕುಂದಾಪುರದ ಕೆರಾಡಿಗೆ ಹೋದೆವು. ಏಕೆಂದರೆ, ಅಲ್ಲಿ ಹೆಚ್ಚಾಗಿ ಹೊರಗಿನವರು ಬರುವುದಿಲ್ಲ. ಈಗ 2-3 ದಿನಗಳ ಹಿಂದಷ್ಟೇ ಬೆಂಗಳೂರಿಗೆ ಬಂದೆವು. ಈಗ ಏನೇ ಮಾಡಲು ಹೊರಟರೂ, ಮಗ ಮೊದಲು ಕಣ್ಣ ಮುಂದೆ ಬರುತ್ತಾನೆ’ ಎನ್ನುತ್ತಾರೆ ರನ್ವಿತ್ನ ಮುದ್ದಿನ ಅಮ್ಮ ಪ್ರಗತಿ ರಿಷಬ್ ಶೆಟ್ಟಿ.
ಇದನ್ನೂ ಓದಿ ಬೆಳ್ಳಿಯಲ್ಲಿ ತಯಾರಾಯ್ತು ಅತಿ ಸಣ್ಣ ವಿಜಯ ರಥ!
‘ರನ್ವಿತ್ ಶೆಟ್ಟಿನ ನೋಡೋದಕ್ಕೆ ಯಾರಾದರು ಬಂದರೆ ಅವರು ಮೊದಲು ಕೈ-ಕಾಲು ತೊಳೆದು ಸ್ಯಾನಿಟೈಸರ್ ಹಾಕೊಂಡು ಬರಬೇಕು. ರಿಷಭ್ ಕೂಡ ಹೊರಗೆ ಹೋಗಿ ಬಂದರೆ ಹಿಂದಿನ ಬಾಗಿಲಿನಿಂದ ಹೋಗಿ ಸ್ನಾನ ಮಾಡಿ, ಸ್ಯಾನಿಟೈಸ್ ಮಾಡಿಕೊಂಡ ಮೇಲಷ್ಟೇ ಮಗನ ಮುಟ್ಟುವುದನ್ನು ರೂಢಿಸಿಕೊಂಡಿದ್ದಾರೆ. ಮೊದಲೆಲ್ಲ ಸಿನಿಮಾ ಕೆಲಸ, ಫ್ಯಾಷನ್ ಡಿಸೈನಿಂಗ್, ಪಾರ್ಟಿ ಅಂತೆಲ್ಲ ಲೇಟ್ ನೈಟ್ ಮನೆಗೆ ಬರುತ್ತಿದ್ದೆವು. ನಿದ್ದೆ, ಊಟ ಎಲ್ಲ ಸರಿಯಾಗಿ ಮಾಡುತ್ತಿರಲಿಲ್ಲ. ಆದರೆ, ಈಗ ಹಾಗಿಲ್ಲ. ಆದಷ್ಟು ಮನೆಯಲ್ಲೇ ಆಹಾರ ತಯಾರಿಸುತ್ತೇವೆ. ಬೇಗ ಮನೆಗೆ ಬರುತ್ತೇವೆ. ಅವಶ್ಯಕತೆ ಇದ್ದರೆ ಮಾತ್ರ ಹೊರಗೆ ಹೋಗುತ್ತೇವೆ. ಮಗನಿಂದ ಜೀವನ ಆರೋಗ್ಯಕರವಾಗುತ್ತಿದೆ’ ಎನ್ನುತ್ತಾರೆ.
ಮಗನಿಂದ ಜೀವನ ಆರೋಗ್ಯಕರವಾಗಿದೆ

ನನ್ನ ಧ್ವನಿ ಗುರುತಿಸುವುದಿಲ್ಲ!
ಮಗನ ನೋಡಿಕೊಳ್ಳುವುದರಲ್ಲಿ ಅಮ್ಮ ಸಹಾಯ ಮಾಡುತ್ತಾರೆ. ರಿಷಬ್ ಶೂಟಿಂಗ್ ಹೋದಾಗ ಫೋನ್ ಮಾಡಿದರೆ ರನ್ವಿತ್ ಅವರ ಧ್ವನಿ ಗುರುತಿಸುತ್ತಾನೆ. ಆದರೆ, ಫೋನ್ನಲ್ಲಿ ನನ್ನ ಧ್ವನಿ ಗುರುತಿಸುವುದಿಲ್ಲ. ಬೆಳಿಗ್ಗೆ ಮಗನ ಜತೆ ಆಟ ಆಡಿದ ನಂತರವೇ ರಿಷಬ್ ಶೂಟಿಂಗ್ಗೆ ಹೋಗುವುದು. ಈಗ ಮಗನಿಗೆ ಒಂದು ವರ್ಷ 2 ತಿಂಗಳು ಆಯಿತು. ಇನ್ನು ಕಾಸ್ಟ್ಯೂಮ್ ಡಿಸೈನ್ ಬಗ್ಗೆ ಗಮನ ಹರಿಸಬೇಕು’ ಎನ್ನುತ್ತಾರೆ ಪ್ರಗತಿ.
ಕರೊನಾ ಬೂಚಿ ಬಂದಿದೆ
‘ನನ್ನ ಮಗಳು ಸಿಕ್ಕಾಪಟ್ಟೆ ಎನೆರ್ಜಿಟಿಕ್ ಹುಡುಗಿ. ಹಾಗಂತ ಹಠ ಮಾಡುವುದಾಗಲಿ, ಅಮ್ಮನೇ ಬೇಕು ಎಂದು ಅಳುವುದು, ಕಿರಿಕಿರಿ ಎಲ್ಲ ಮಾಡುವುದಿಲ್ಲ. ಅವಳ ಜತೆ ಆಟ ಆಡುವುದೇ ಮಜ’ ಎನ್ನುತ್ತಾರೆ ಅನು ಪ್ರಭಾಕರ್.
ಅವರ ಮಗಳು ನಂದನಾ ಪ್ರಭಾಕರ್ ಮುಖರ್ಜಿಗೆ 21 ತಿಂಗಳಂತೆ. ಹೊರಗೆ ಹೋಗುವುದೆಂದರೆ ಎಲ್ಲಿಲ್ಲದ ಆಸಕ್ತಿಯಂತೆ. ಹಾಗಾಗಿ ಈಗಲೂ ಹೊರಗೆ ಕರೆದುಕೊಂಡು ಹೋಗಿ ಎನ್ನುತ್ತಿರುತ್ತಾಳಂತೆ. ‘ಹೊರಗೆ ಕರೊನಾ ಬೂಚಿ ಬಂದಿದೆ. ಮೋದಿ ತಾತ ಮಾಲ್, ಅಂಗಡಿ, ಪಾರ್ಕ್ ಎಲ್ಲ ಕ್ಲೋಸ್ ಮಾಡಿದಾರೆ ಎಂದರೆ ಸುಮ್ಮನಾಗುತ್ತಾಳೆ. ಪೇಪರ್ನಲ್ಲಿ ಮೋದಿ ತಾತನ ಗುರುತಿಸುತ್ತಾಳೆ. ಕರೊನಾ ಚಿತ್ರ ನೋಡಿ, ಕರೊನಾ ಬೂಚಿ ಎನ್ನುತ್ತಾಳೆ. ನಾನು ಚಿತ್ರೀಕರಣಕ್ಕೆ ಹೋಗುವಾಗ ಅಮ್ಮ ಶೂಟಿಂಗ್ ಅಂದರೆ, ಪತಿ ರಘು ಹೋಗುವಾಗ ಬಾಬ (ಅಪ್ಪ) ಶೂಟಿಂಗ್ ಎನ್ನುತ್ತಾಳೆ. ಎಲ್ಲವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾಳೆ’ ಎಂದು ಹೆಮ್ಮೆ ಪಡುತ್ತಾರೆ ಅನು.
ಮಾಸ್ಕ್ ಕೇಳಿ ಹಾಕಿಸಿಕೊಳ್ಳುತ್ತಾಳೆ
‘ಈಗ ಕರೊನಾ ಆತಂಕ ಇರುವುದರಿಂದ ಏನೇ ಹೊರಗಡೆಯಿಂದ ತಂದರೂ ಅದನ್ನು ಸ್ಟೋರ್ ರೂಂ ನಲ್ಲಿ ಇಟ್ಟು, 2-3 ದಿನಗಳ ನಂತರ ಮುಟ್ಟುತ್ತೇವೆ. ಹಣ್ಣು ತರಕಾರಿಗಳನ್ನೆಲ್ಲ ಸೋಡ ಮತ್ತು ಉಪು್ಪ ನೀರಿನಲ್ಲಿ ತೊಳೆದು ಬಳಸುತ್ತೇವೆ. ಬಾಗಿಲ ಬಳಿಯೇ ಮಾಸ್ಕ್ ಇಟ್ಟು ಬರುತ್ತೇವೆ. ಹೊರಗೆ ಹೋಗುವುದು ಎಂದ ಕೂಡಲೆ ನಂದನಾ ಅವಳಾಗೇ ಕೇಳಿ ಮಾಸ್ಕ್ ಹಾಕಿಸಿಕೊಳ್ಳುತ್ತಾಳೆ’ ಎನ್ನುತ್ತಾರೆ ಅನು ಪ್ರಭಾಕರ್.