ಮಿನುಗುತಾರೆಯೊಂದಕ್ಕೆ ಅಪ್ಪು ಹೆಸರು; ನಕ್ಷತ್ರವಾದ ಪುನೀತ್​

Puneeth Star - Vikram
Published on

ಬೆಂಗಳೂರು: ನಮಗೆ ಇಷ್ಟವಾದವರ ಹೆಸರನ್ನು ನಕ್ಷತ್ರಗಳಿಗೆ ನಾಮಕರಣ ಮಾಡಬಹುದು ಎಂಬ ವಿಷಯ ಗೊತ್ತಾ? ಬಾಲಿವುಡ್​ ನಟಿಯರಾದ ಕಂಗನಾ ರಣಾವತ್​, ಸನ್ನಿ ಲಿಯೋನ್​, ಕ್ರಿಕೆಟಿಗ ರೋಹಿತ್​ ಶರ್ಮಾ ಸೇರಿದಂತೆ ಹಲವು ಸೆಲೆಬ್ರಿಟಿಗಳ ಹೆಸರಿನಲ್ಲಿ ನಕ್ಷತ್ರಗಳು ನೋಂದಣಿಯಾಗಿವೆ. ಈಗ ಪುನೀತ್​ ಹೆಸರನ್ನು ಒಂದು ನಕ್ಷತ್ರಕ್ಕೆ ಇಡಲಾಗಿದೆ.

ಹೌದು, ಬಿಗ್​ ಲಿಟಲ್ ಸಂಸ್ಥೆಯು ನಕ್ಷತ್ರವೊಂದಕ್ಕೆ ಪುನೀತ್​ ಅವರ ಹೆಸರನ್ನು ಇಟ್ಟಿದ್ದಾರೆ. ಕಳೆದ ಅಕ್ಟೋಬರ್​ನಲ್ಲೇ ಪುನೀತ್​ ಅವರ ಹೆಸರನ್ನು ನಕ್ಷತ್ರವೊಂದಕ್ಕೆ ಇಡಲಾಗಿದೆ.

ಈ ಕುರಿತು ಮಾತನಾಡುವ ದಿ ಬಿಗ್​ ಲಿಟಲ್​ನ ಭರತ್​ ಸುಧಾಮ, 'ನಮಗೆ ಅವರೇ ರೋಲ್​ ಮಾಡೆಲ್​. ನಮ್ಮಿಂದ ಲೌಕಿಕವಾಗಿ ದೂರವಾದವರು ನತ್ರವಾಗುತ್ತಾರೆ ಅಂತಾರೆ. ಹಾಗೇ ನತ್ರಕ್ಕೇ ಅಪ್ಪು ಸರ್​ ಹೆಸರಿಟ್ಟರೆ ಹೇಗೆ ಎಂಬ ಆಲೋಚನೆ ಬಂತು. ಕಳೆದ ಅಕ್ಟೋಬರ್​ನಲ್ಲೇ ನಕ್ಷತ್ರಕ್ಕೆ ಪುನೀತ್​ ಅವರ ಹೆಸರನ್ನು ಇಡಲಾಗಿದೆ' ಎನ್ನುತ್ತಾರೆ ಅವರು.

ಇನ್ನು, ನಟ-ನಿರ್ದೇಶಕ ರವಿಚಂದ್ರನ್​ ಅವರ ಮಗ ವಿಕ್ರಮ್​ ರವಿಚಂದ್ರನ್​, ಒಂದು ವಿಡಿಯೋ ಮೂಲಕ ಪುನೀತ್​ಗೆ ಗೌರವ ಸಲ್ಲಿಸಿದ್ದಾರೆ. 'ನಾನು ಚಿಕ್ಕಂದಿನಿಂದಲೂ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದವನು. ಸಿನಿಮಾದ ಆಚೆಗಿನ ಅವರ ಜೀವನ ಜಗತ್ತಿಗೇ ಸ್ಪೂರ್ತಿ. ಅವರಿಗಾಗಿ ಮಾಡುತ್ತಿರುವ ಒಂದೊಳ್ಳೆಯ ಕೆಲಸದಲ್ಲಿ ಭಾಗಿಯಾಗಿರುವುದು ನನಗೆ ಖುಷಿ ಕೊಟ್ಟಿದೆ' ಎಂದು ಸಂತಸ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net