ಸಂದೀಪ್​ ರೆಡ್ಡಿ ನಿರ್ದೇಶನ ಸಿನಿಮಾದಲ್ಲಿ ನಾನು ನಟಿಸಲ್ಲ! ಸ್ಟಾರ್​ ನಟಿಯ ಅಚ್ಚರಿ ಹೇಳಿಕೆ | Sandeep Reddy Vanga

Sandeep Reddy Vanga
Published on

Sandeep Reddy Vanga : ಖ್ಯಾತ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಅವರು ಬೋಲ್ಡ್ ಕಂಟೆಂಟ್ ಇರುವ ಸಿನಿಮಾಗಳನ್ನು ಮಾಡಿ ಭಾರತೀಯ ಚಿತ್ರರಂದಲ್ಲಿ ತಮ್ಮದೇಯಾದ ಪ್ರತ್ಯೇಕ ಐಡೆಂಟಿಟಿ ಸೃಷ್ಟಿಸಿಕೊಂಡಿದ್ದಾರೆ.

ಅರ್ಜುನ್ ರೆಡ್ಡಿಯಿಂದ ಹಿಡಿದು ಅನಿಮಲ್​ವರೆಗೆ ಅವರ ಎಲ್ಲ ಸಿನಿಮಾಗಳು ಬೋಲ್ಡ್ ಕಂಟೆಂಟ್ ಹೊಂದಿರುವುದು ಗಮನಾರ್ಹ. ಒಳ್ಳೆಯ ಕತೆಯೆ ಜತೆಗೆ ಅಶ್ಲೀಲತೆಯೂ ಕೂಡ ಮಿಶ್ರಣವಾಗಿರುತ್ತದೆ. ನಟಿಯರನ್ನೂ ತುಂಬಾ ಬೋಲ್ಡ್​ ಆಗಿ ತೋರಿಸುತ್ತಾರೆ. ಹೀಗಾಗಿ ಯುವಕರು ಸಂದೀಪ್​ ರೆಡ್ಡಿ ನಿರ್ದೇಶನದ ಸಿನಿಮಾಗಳನ್ನು ಒಮ್ಮೆ ನೋಡಿದರೇ ಸಾಕು ಅದಕ್ಕೆ ಅಡಿಕ್ಟ್ ಆಗಿಬಿಡುತ್ತಾರೆ ಎಂದರೆ ಅತಿಶಯೋಕ್ತಿಯಲ್ಲ. ಇವತ್ತಿನ ಯುವಜನತೆ ಸಂದೀಪ್​ ಸಿನಿಮಾಗಳ ಹಿಂದೆ ಬಿದ್ದಿದ್ದಾರೆ ಅಂದರೆ ಪ್ರೇಕ್ಷಕರಿಗೆ ಇಷ್ಟವಾಗುವ ಯಾವ ರೀತಿಯ ಸಿನಿಮಾಗಳನ್ನು ಮಾಡುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.

ಸದ್ಯ ಸಂದೀಪ್​ ರೆಡ್ಡಿ ವಂಗ ಅವರು ಪ್ರಭಾಸ್ ಜೊತೆ ಸ್ಪಿರಿಟ್ ಎಂಬ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಈ ಚಿತ್ರಕ್ಕೆ ನಾಯಕಿಯಾಗಿ ಯಾರು ಆಯ್ಕೆಯಾಗುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಇದರ ನಡುವೆ ಸಂದೀಪ್ ಅವರು ತೆಲುಗು ಚಿತ್ರರಂಗದಲ್ಲಿ ಈಗಾಗಲೇ ಉತ್ತಮ ಹೆಸರು ಗಳಿಸಿರುವ ಮೃನಾಲ್ ಠಾಕೂರ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲು ಯೋಚನೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಆದರೆ, ಸದ್ಯದ ಮಾಹಿತಿ ಪ್ರಕಾರ, ಸಂದೀಪ್ ರೆಡ್ಡಿ ಅವರ ನಿರ್ದೇಶನದಲ್ಲಿ ನಟಿಸಲು ಸಿದ್ಧವಿಲ್ಲ ಎಂದು ಮೃನಾಲ್ ಠಾಕೂರ್ ಖಡಾಖಂಡಿತವಾಗಿ ಹೇಳಿದ್ದಾರಂತೆ. ಇಂತದ್ದೊಂದು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ದಿನಗಳಿಂದ ವೈರಲ್ ಆಗುತ್ತಿದೆ. ಆದರೆ, ಇದರು ಸತ್ಯವೋ ತಿಳಿದುಬಂದಿಲ್ಲ. ಈ ಬಗ್ಗೆ ಸಂದೀಪ್ ಆಗಲಿ ಮೃನಾಲ್​ ಆಗಲಿ ಮಾತನಾಡಿಲ್ಲ. ಸಂದೀಪ್ ರೆಡ್ಡಿ ವಂಗ ನಿರ್ದೇಶನದಲ್ಲಿ ನಟಿಸಲು ಮೃನಾಲ್ ಸಿದ್ಧವಾಗಿದ್ದರೂ, ಕೆಲವರು ಉದ್ದೇಶಪೂರ್ವಕವಾಗಿಯೇ ಇಂತಹ ಸುದ್ದಿಗಳನ್ನು ಸೃಷ್ಟಿಸಿ ಬರೆಯುತ್ತಿದ್ದಾರೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಅದೇನೇ ಇರಲಿ, ಸಂದೀಪ್ ರೆಡ್ಡಿ ವಂಗ ನಿರ್ದೇಶನದ ಸಿನಿಮಾದಲ್ಲಿ ನಟಿಸಬೇಕೆಂದರೆ ನಾಯಕಿಯರಿಗೆ ನಿಜವಾಗಿಯೂ ಗಟ್ಸ್ ಇರಲೇಬೇಕು. ಏಕೆಂದರೆ ಅವರ ಚಿತ್ರದಲ್ಲಿ ಸಾಕಷ್ಟು ಬೋಲ್ಡ್ ದೃಶ್ಯಗಳಿರುತ್ತವೆ. ಅಂತಹ ದೃಶ್ಯಗಳಲ್ಲಿ ನಟಿಸಲು ಒಪ್ಪಿದರೆ ಮಾತ್ರ ನಾಯಕಿಯರನ್ನು ಆಯ್ಕೆ ಮಾಡುತ್ತಾರೆ. ಸಂದೀಪ್​ ಅವರು ಸಿನಿಮಾ ಮಾಡುವ ರೀತಿಯೇ ವಿಭಿನ್ನವಾಗಿದ್ದು, ಸ್ಪಿರಿಟ್ ಚಿತ್ರದ ಮೂಲಕ ಇಂಡಸ್ಟ್ರಿ ಹಿಟ್ ಗಳಿಸುವ ವಿಶ್ವಾಸವನ್ನು ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net