ಬಾಹುಬಲಿ ಮತ್ತು ಆರ್‌ಆರ್‌ಆರ್ ನಂತರ ರಾಜಮೌಳಿ ಅವರ ಮುಂದಿನ ಮ್ಯಾಜಿಕ್ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಮಹೇಶ್ ಬಾಬು, ಪೃಥ್ವಿರಾಜ್ ಸುಕುಮಾರನ್ ಮತ್ತು ಪ್ರಿಯಾಂಕಾ ಚೋಪ್ರಾ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರಕ್ಕೆ 'ವಾರಣಾಸಿ' ಎಂದು ಹೆಸರಿಡಲಾಗಿದ್ದು, ಇದು ಏಪ್ರಿಲ್ 2027 ರಲ್ಲಿ ತೆರೆಕಾಣಲಿದೆ. ಭೂಮಿಗೆ ಅಪ್ಪಳಿಸಲಿರುವ ವಿನಾಶಕಾರಿ ಕ್ಷುದ್ರಗ್ರಹವನ್ನು ತಡೆಯಲು ವಿವಿಧ ಶತಮಾನಗಳು ಮತ್ತು ಖಂಡಗಳ ನಡುವೆ ಪ್ರಯಾಣಿಸುವ 'ಟೈಮ್ ಟ್ರಾವೆಲಿಂಗ್ ಹೀರೋ' ಕಥೆಯನ್ನು ಈ ಸಿನಿಮಾ ಹೊಂದಿದ್ದು, ಅತ್ಯಂತ ಬೃಹತ್ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ,(ಏಜೆನ್ಸೀಸ್).