'ಪುಷ್ಪ'ದ ಎರಡು ಹಾಡುಗಳಿಗೆ 100 ಮಿಲಿಯನ್ ವೀಕ್ಷಣೆಗಳು! ಅಲ್ಲುಗೆ ಈಗ 16M ಅನುಯಾಯಿಗಳು...

Published on
ನಟ ಅಲ್ಲು ಅರ್ಜುನ್ ಅವರ 'ಪುಷ್ಪ: ದಿ ರೈಸ್' ಸಿನಿಮಾ ಅದರ ಪ್ರದರ್ಶನ ಮತ್ತು ಹಾಡುಗಳ ಸಂಗೀತದ ದೃಷ್ಟಿಯಿಂದ ಬಿಡುಗಡೆಯಾದಾಗಿನಿಂದ ದೇಶದ್ಯಾಂತ ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ 350 ಕೋಟಿ ರೂ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಸಿನಿಮಾದಲ್ಲಿ ಬಹುತೇಕ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿವೆ. ಇದೀಗ, 'ಪುಷ್ಪ' ಚಿತ್ರದ ಹಿಂದಿ ಅವತರಣಿಕೆಯ 'ಶ್ರೀವಲ್ಲಿ' ಹಾಡು ಯೂಟ್ಯೂಬ್​ನಲ್ಲಿ ದಾಖಲೆ ಬರೆದಿದೆ.
ಹೌದು, ಬರೋಬ್ಬರಿ 115 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ. ಇನ್ನು, ಇದೇ ಹಾಡು ತೆಲುಗಿನಲ್ಲಿ 135 ಮಿಲಿಯನ್ ವೀಕ್ಷಣೆಗಳು ಪಡೆದು ದಾಖಲೆ ಬರೆದಿತ್ತು. 'ಶ್ರೀವಲ್ಲಿ' ಹಾಡಿಗೆ ಸಿನಿತಾರೆಯರು, ನೆಟ್ಟಿಗರಿಂದ ಹಿಡಿದು ಕ್ರಿಕೆಟಿಗರು ಕೂಡ ಫಿದಾ ಆಗಿದ್ದಾರೆ. ಬಹುತೇಕ ಎಲ್ಲರು ಈ ಹಾಡಿಗೆ ರೀಲ್ಸ್ ವಿಡಿಯೋಗಳು ಮಾಡಿ ಸಿಕ್ಕಾಪಟ್ಟೆ ಮಜಾ ಮಾಡಿದ್ದಾರೆ. ಮತ್ತೊಂದೆಡೆ ಇದೇ ಸಿನಿಮಾದ 'ಸಾಮಿ ಸಾಮಿ' ಹಾಡು ಕೂಡ ತೆಲುಗಿನಲ್ಲಿ 100 ಮಿಲಿಯನ್ ವೀಕ್ಷೆಣೆಗಳನ್ನು ಪಡೆಯುವಲ್ಲಿ ಯಶಸ್ಸು ಕಾಣಲಿದೆ.
ಹೌದು, ಸದ್ಯ ಈ ಹಾಡಿಗೆ 96 ಮಿಲಿಯನ್ ವೀಕ್ಷಣೆಗಳಿದ್ದು, ಶೀಘ್ರದಲ್ಲೇ ಈ ಹಾಡು ತೆಲುಗಿನಲ್ಲಿ 100 ಮಿಲಿಯನ್ ವೀಕ್ಷಣೆಗಳು ಗಿಟ್ಟಿಸಿಕೊಳ್ಳಲಿದೆ. ಥಿಯೇಟರ್‌ಗಳಲ್ಲಿ #ಪುಷ್ಪರಾಜ್ ರೂಪದಲ್ಲಿ ಮಿಂಚಿ ಬಹಳಷ್ಟು ಯಶಸ್ಸು ಕಂಡಿರುವ ನಟ ಇನ್​ಸ್ಟಾಗ್ರಾಂನಲ್ಲಿ ಕೇವಲ 10 ದಿನಗಳಲ್ಲಿ 1 ಮಿಲಿಯನ್ ಅನುಯಾಯಿಗಳನ್ನು ಪಡೆಯುವ ಮೂಲಕ ಅಲ್ಲು ಅರ್ಜುನ್‌ಗೆ ಸಾಕಷ್ಟು ಖ್ಯಾತಿ ಧಕ್ಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net