ಹೊಸಬರ `ಶ್ರೀರಾಮ ಅಲ್ಲ ಶ್ರೀಕೃಷ್ಣ' ಚಿತ್ರ ಶುರು. ನಾಯಕನಿಗಾಗಿ ಮೂವರು ನಾಯಕಿಯರ ಜಗಳ!

ಗಂಡ ಹೆಂಡತಿ ಸಂಬoಧ ಹೇಗಿರಬೇಕು ಎಂಬುದನ್ನು ಒಂದೊಳ್ಳೆ ಕಂಟೆoಟ್ ಜತೆಗೆ ಸಂದೇಶ ಇಟ್ಟುಕೊಂಡು ಕಾಮಿಡಿಯಾಗಿ ಹೇಳಲು ಪ್ರಯತ್ನಿಸಿರುವ ನಿರ್ದೇಶಕರು ಕಥೆಗೆ ತಕ್ಕಂತೆ ಐದು ಹಾಡುಗಳನ್ನು ಚಿತ್ರದಲ್ಲಿ ಇಟ್ಟಿದ್ದಾರೆ.
WhatsApp Image 2022-08-29 at 9.50.36 AM
Published on

`ಶ್ರೀರಾಮ ಅಲ್ಲ ಶ್ರೀಕೃಷ್ಣ'. ಇತ್ತೀಚೆಗಷ್ಟೇ ಈ ಚಿತ್ರದ ಸ್ಕಿçಪ್ಟ್ ಪೂಜೆ ರಾಜಾಜಿನಗರದ ಶ್ರೀ ಗಣಪತಿ ದೇವಸ್ಥಾನದಲ್ಲಿ ನಡೆಯಿತು. ಗಂಡ ಹೆಂಡತಿ ನಡುವೆ ಪರಸ್ಪರ ನಂಬಿಕೆ, ಹೊಂದಾಣಿಕೆ ಇರಬೇಕು. ಆಗಲೇ ಜೀವನ ಸುಖಮಯ ಎಂಬ ಅಂಶದ ಮೇಲೆ ಹಾಸ್ಯ ಮಿಶ್ರಿತ ಕಥೆ ಹೆಣೆದಿದ್ದಾರೆ ನಿರ್ದೇಶಕ ಸಿಎಚ್ ಸುಮನ್ ಬಾಬು. ಶ್ರೀ ಸುಮನ್ ವೆಂಕಟಾದ್ರಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ದೇಶನದ ಜತೆಗೆ ತಾವೇ ನಿರ್ಮಿಸುತ್ತಿದ್ದಾರೆ ಕೂಡ. ಅವರೇ ನಾಯಕನಾಗಿಯೂ ನಟಿಸುತ್ತಿರುವುದು ಮತ್ತೊಂದು ವಿಶೇಷ. ಚಿತ್ರದಲ್ಲಿ ಮೂವರು ನಾಯಕಿಯರಿದ್ದು ಪ್ರಮುಖ ನಾಯಕಿಯ ಪಾತ್ರವನ್ನು ಸದ್ಯ ಚಿತ್ರತಂಡ ಗುಟ್ಟಾಗಿಯೇ ಇಟ್ಟಿದೆ. ಇತ್ತೀಚೆಗಷ್ಟೇ ಸ್ಕಿಪ್ಟ್ ಪೂಜೆ ಮುಗಿಸಿಕೊಂಡಿರುವ ಚಿತ್ರತಂಡ ಮುಂದಿನ ತಿಂಗಳು ಚಿತ್ರೀಕರಣ ಪ್ರಾರಂಭಿಸಲಿದೆ. ಚಿತ್ರದ ಬಹುತೇಕ ಚಿತ್ರೀಕರಣ ಬೆಂಗಳೂರಿನ ಸುತ್ತಮುತ್ತ ನಡೆಯಲಿದೆ.

ಗಂಡ ಹೆಂಡತಿ ಸಂಬoಧ ಹೇಗಿರಬೇಕು ಎಂಬುದನ್ನು ಒಂದೊಳ್ಳೆ ಕಂಟೆoಟ್ ಜತೆಗೆ ಸಂದೇಶ ಇಟ್ಟುಕೊಂಡು ಕಾಮಿಡಿಯಾಗಿ ಹೇಳಲು ಪ್ರಯತ್ನಿಸಿರುವ ನಿರ್ದೇಶಕರು ಕಥೆಗೆ ತಕ್ಕಂತೆ ಐದು ಹಾಡುಗಳನ್ನು ಚಿತ್ರದಲ್ಲಿ ಇಟ್ಟಿದ್ದಾರೆ. ಚಿತ್ರಕ್ಕೆ ಮಹೇಶ್ ರಾಜು ಸಂಗೀತ ಸಂಯೋಜನೆ ಮಾಡಿದ್ದು, ಜೆವಿ ರಮೇಶ್ ಛಾಯಾಗ್ರಹಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. `ಶ್ರೀರಾಮ ಅಲ್ಲ ಶ್ರೀಕೃಷ್ಣ' ಚಿತ್ರದಲ್ಲಿ ಮೂರು ಸಾಹಸ ದೃಶ್ಯಗಳಿದ್ದು ಚಂದ್ರು ಬಂಡೆ ಸಾಹಸ ನಿರ್ದೇಶನದಲ್ಲಿ ಮೂಡಿಬರಲಿದೆ. ಅಕುಲ್ ಎನ್ ನೃತ್ಯನಿರ್ದೇಶನ ಮಾಡುತ್ತಿದ್ದು, ಮುರಳಿ ಜೆ ಅವರು ಕಾರ್ಯಕಾರಿ ನಿರ್ಮಾಪಕನಾಗಿ ಮಾತ್ರವಲ್ಲದೇ ಚಿತ್ರದಲ್ಲಿ ಚಿಕ್ಕ ಪಾತ್ರವನ್ನೂ ನಿರ್ವಹಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net