ಬಾಲಿವುಡ್​ನ ನಂಬರ್ 1 ನಟ ಯಶ್; ಕರಣ್ ಜೋಹರ್ ಪ್ರಶ್ನೆಗೆ ಶಾಹಿದ್ ಉತ್ತರ

Yash
Published on

‘ಕೆಜಿಎಫ್’ ಸರಣಿಯ ಅದ್ಭುತ ಯಶಸ್ಸಿನ ಬಳಿಕ ಇಡೀ ಬಾಲಿವುಡ್ ಕನ್ನಡದ ‘ರಾಕಿಂಗ್ ಸ್ಟಾರ್’ ಯಶ್ ಜಪ ಮಾಡುತ್ತಿದೆ. ‘ಕೆಜಿಎಫ್ ಚಾಪ್ಟರ್ 2’ ಬಿಡುಗಡೆ ಆಗಿ ನಾಲ್ಕೂವರೆ ತಿಂಗಳಾದರೂ ರಾಕಿ ಭಾಯ್ ಗುಂಗಿನಲ್ಲೇ ಇದ್ದಂತಿದೆ. ಅದಕ್ಕೆ ಉದಾಹರಣೆ ಎಂಬಂತೆ ಇತ್ತೀಚೆಗಷ್ಟೇ ಬಾಲಿವುಡ್ ನಟ, ನಿರ್ವಪಕ, ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿತ್ ಕರಣ್’ ಸಂದರ್ಶನದಲ್ಲಿ ನಟ ಶಾಹಿದ್ ಕಪೂರ್ ಯಶ್ ಬಗ್ಗೆ ಮಾತನಾಡಿದ್ದಾರೆ.

‘ಬಾಲಿವುಡ್​ನ ನಂಬರ್ 1 ನಟ, ನಟಿ ಯಾರು?’ ಎಂದು ಕರಣ್ ಜೋಹರ್ ಕೇಳಿದ ಪ್ರಶ್ನೆಗೆ ಶಾಹಿದ್ ಕಪೂರ್, ತಮ್ಮ ಪಕ್ಕದಲ್ಲೇ ಕುಳಿತಿದ್ದ ಕಿಯಾರಾ ಅಡ್ವಾನಿ ಕಡೆ ಕೈ ತೋರಿಸಿ, ‘ನಂಬರ್ 1 ನಟಿ ಇವರೇ’ ಎಂದಿದ್ದಾರೆ. ಹಾಗೆಯೇ ಮುಂದುವರಿದು, ‘ನಂಬರ್ 1 ನಟ ಯಾರು ಎಂಬುದರ ಬಗ್ಗೆ ಚರ್ಚೆ ಮಾಡೋಣ. ಆದರೆ, ಈಗಿನ ಮಟ್ಟಿಗಂತೂ ರಾಕಿಭಾಯ್’ ಎಂದಿದ್ದಾರೆ. ಅವರಿಗೆ ಖುದ್ದು ಕರಣ್ ಜೋಹರ್ ಮತ್ತು ಕಿಯಾರಾ ಅಡ್ವಾನಿ ಸಹ ಹೌದು ಎಂದಿದ್ದಾರೆ. ಸದ್ಯ ಈ ಪ್ರಶ್ನೋತ್ತರದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯಶ್ ಮತ್ತು ‘ಕೆಜಿಎಫ್’ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.- ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net