ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡ ನಟಿ, " ಮೆಗಾ ಸ್ಟಾರ್ ನಟ ಚಿರಂಜೀವಿ ಟಾಲಿವುಡ್ ಚಿತ್ರರಂಗದಲ್ಲಿ ದೊಡ್ಡ ಸ್ಟಾರ್. ನಾನು ಅವರ ತಾಯಿ ಅಂಜನಾ ದೇವಿ ಮೇಲೆ ಹಗುರವಾದ ಶಬ್ದಗಳನ್ನು ಬಳಸಬಾರದಿತ್ತು. ನಾನು ಅಂದು ಆಡಿದ ಮಾತಿಗೆ ಇಂದು ಅಂಜನಾ ದೇವಿಯವರಿಗೆ ಬಹಿರಂಗವಾಗಿ ಕ್ಷಮೆ ಕೇಳುತ್ತೇನೆ." ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಜತೆಗೆ, ಶ್ರೀರೆಡ್ಡಿ ತಮ್ಮ ವಿಡಿಯೋದಲ್ಲಿ ನಟ ಪವನ್ ಕಲ್ಯಾಣ್‌ರನ್ನು ಅವಮಾನ ಮಾಡಿದ್ದಕ್ಕೆ ಪರೋಕ್ಷವಾಗಿ ಕ್ಷಮೆ ಕೇಳಿದ್ದಾರೆ. ಆದರೆ, ಪವನ್ ಕಲ್ಯಾಣ್ ಹೆಸರನ್ನು ಬಳಸದೆ, ಕ್ಷಮೆ ಕೇಳಿರುವುದು ಗಮನ ಸೆಳೆದಿದೆ. ಇದು, ಪವರ್‌ಸ್ಟಾರ್ ಅಭಿಮಾನಿಗಳಲ್ಲಿ ಸಂತಸ ತಂದಿದೆ. ಈ ವಿಡಿಯೋ ಮೇಲೆ 22,000 ಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು ಸಾವಿರಕ್ಕೂ ಹೆಚ್ಚು ಲೈಕ್ಸ್ ಕೂಡ ಇವೆ.