

ಸಿನಿರಂಗದಲ್ಲಿ ನಟ-ನಟಿಯರ ನಡುವೆ ಪ್ರಾರಂಭವಾಗುವ ಭಿನ್ನಾಭಿಪ್ರಾಯಗಳು ಹೊಸದೇನಲ್ಲ. ಅದರಲ್ಲೂ ಅಭಿಮಾನಿಗಳು ತಮ್ಮ ನೆಚ್ಚಿನ ನಟ-ನಟಿಯರನ್ನು ಎತ್ತಿ ಹಿರಿಯೋ ಅಬ್ಬರದಲ್ಲಿ ಮತ್ತೊಬ್ಬ ನಟ ಅಥವಾ ನಟಿಯರನ್ನ ಹೀಯಾಳಿಸುವುದೇ ಹೆಚ್ಚು. ಫ್ಯಾನ್ ವಾರ್ ಎಂಬ ಹೆಸರಿನಲ್ಲಿ ಮನೋ ರೋಗಿಯಂತೆ ವರ್ತನೆ ಮಾಡುತ್ತಾರೆ. ಇದಕ್ಕೆ ಹತ್ತಾರು ಉದಾಹರಣೆಗಳು ಕನ್ನಡ ಚಿತ್ರರಂಗದಲ್ಲಿವೆ.
ಅಲ್ಲದೇ ಸಾಕಷ್ಟು ಟ್ರೋಲ್ ಪೇಜ್ನಲ್ಲಿಯೂ ತಮಗಿಷ್ಟವಿಲ್ಲದ ನಟ-ನಟಿಯರ ಕುರಿತಂತೆ ಕೆಟ್ ಪೋಸ್ಟ್ಗಳನ್ನ ಹಾಕೋದನ್ನ ನೋಡಿರ್ತೇವೆ. ಅನೇಕ ಸ್ಟಾರ್ಗಳು ಇಂತಹ ವಿಚಾರಕ್ಕೆ ತಲೆಕೆಡಿಸಿಕೊಳ್ಳದೆ ಸುಮ್ಮನಾಗುವುದೂ ಇದೇ. ಇದೀಗ ನಟ ಶ್ರೀ ಮುರುಳಿ ಸಹಿತ ಅದೇ ಕೆಲಸವನ್ನ ಮಾಡಿದ್ದಾರೆ.
ಶ್ರೀಮುರಳಿ ಅಭಿನಯದ ಬಘೀರ ಇದೇ ಅಕ್ಟೋಬರ್ 31ರಂದು ಚಿತ್ರಮಂದಿರಕ್ಕೆ ಅಪ್ಪಳಿಸಲು ರೆಡಿಯಾಗಿದೆ. ಚಿತ್ರದ ಬಿಡುಗಡೆಗೆ ಇನ್ನೇನು ಕೆಲವೇ ದಿನ ಇರುವ ಹಿನ್ನೆಲೆ ಶ್ರೀಮುರಳಿ ಕೂಡ ಚಿತ್ರದ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಸದ್ಯ ಶ್ರೀ ಮುರುಳಿ ಚಿತ್ರದ ಪ್ರಚಾರಕ್ಕೆ ಹೋದಲ್ಲೆಲ್ಲಾ ಬೇಕು ಬೇಕಂತಲೇ ಜೈಲಿನಲ್ಲಿರುವ ದರ್ಶನ್ ಹೆಸರನ್ನು ಕೂಗುತ್ತಿದ್ದಾರೆ.
ಹೀಗೆ ಮಾಡುತ್ತಿರುವವರಿಗೆ ಶ್ರೀಮುರಳಿ ಈಗ ಉತ್ತರವನ್ನು ನೀಡಿದ್ದಾರೆ. ನನ್ನ ಮತ್ತು ದರ್ಶನ್ ಸಂಬಂಧ ಎಂದಿಗೂ ಬದಲಾಗಲ್ಲ ಎಂದು ಹೇಳಿದ್ದಾರೆ. ಬಘೀರ ಚಿತ್ರದ ಪ್ರಚಾರದ ಸಮಯದಲ್ಲಿ ಡಿ ಬಾಸ್.. ಡಿ ಬಾಸ್.. ಎಂದು ಕೂಗಿದವರನ್ನು ಉದ್ದೇಶಿಸಿ ಮಾತನಾಡಿರುವ ಶ್ರೀಮುರಳಿ ತಲೆನೇ ಕೆಡಿಸಿಕೊಳ್ಳಲ್ಲ ನನ್ನ ಸಂಬಂಧ, ನನ್ನ ಸ್ನೇಹ ಯಾವತ್ತು ಚೇಂಜ್ ಆಗಲ್ಲ, ಯಾವುದೇ ಕಾರಣಕ್ಕೂ ಬದಲಾಗಲ್ಲ ಎಂದಿದ್ದಾರೆ.
ಶ್ರೀಮುರಳಿ ಪರಿಸ್ಥಿತಿಯನ್ನು ನಾಜೂಕಾಗಿ ನಿಭಾಯಿಸಿದ್ದಾರೆ. ತಾಳ್ಮೆಯನ್ನು ಕಳೆದುಕೊಳ್ಳದೇ ಪ್ರೀತಿಯಿಂದ ಮಾತನಾಡುವ ಮೂಲಕ ನಾವೆಲ್ಲ ಚೆನ್ನಾಗಿಯೇ ಇದ್ದೇವೆ ಎನ್ನುವ ಸಂದೇಶವನ್ನು ಇನ್ನೊಮ್ಮೆ ರವಾನೆ ಮಾಡಿದ್ದಾರೆ.