'ಗಂಧದಗುಡಿ'ಯಿಂದ ಸಿಹಿಸುದ್ದಿ: ಪುನೀತ್ ಮಹತ್ವಾಕಾಂಕ್ಷೆಯ ಸಿನಿಮಾ ಟಿಕೆಟ್​ ದರದಲ್ಲಿ ಭಾರಿ ಇಳಿಕೆ!

gandhadagudi
Published on

ಬೆಂಗಳೂರು: ಪವರ್​ಸ್ಟಾರ್​ ಪುನೀತ್ ರಾಜಕುಮಾರ್ ಅವರ ಮಹತ್ವಾಕಾಂಕ್ಷೆಯ ಸಿನಿಮಾ 'ಗಂಧದಗುಡಿ' ಬಿಡುಗಡೆಗೊಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದರ ನಡುವೆಯೇ ಅಶ್ವಿನಿ ಪುನೀತ್​ ರಾಜಕುಮಾರ್ ಅವರು ಕನ್ನಡ ಸಿನಿಪ್ರಿಯರಿಗೆ ಭರ್ಜರಿ ಕೊಡುಗೆಯೊಂದನ್ನು ನೀಡಿದ್ದಾರೆ.

'ಗಂಧದಗುಡಿ' ಅಪ್ಪು ಅವರ ಒಂದು ಕನಸು, ಕರ್ನಾಟಕದ ವನ್ಯ ಸಂಪತ್ತು ಹಾಗೂ ಪ್ರಕೃತಿ ಸೌಂದರ್ಯವನ್ನು ಕನ್ನಡಿಗರಿಗೆ ಪರಿಚಯಿಸುವ ಅವರ ಹಂಬಲ ಈ ಸಿನಿಮಾ ರೂಪಗೊಳ್ಳಲು ಕಾರಣ, ಈ ಸಿನಿಮಾ ಎಲ್ಲ ಕನ್ನಡಿಗರು ನೋಡಬೇಕು, ಅದರಲ್ಲೂ ಮಕ್ಕಳು ನೋಡಬೇಕೆಂಬುದು ಅಪ್ಪು ಅವರ ಉದ್ದೇಶ. ಈ ಸಲುವಾಗಿ ನಾನು ಹಾಗೂ ಚಿತ್ರ ತಂಡ ಎಲ್ಲರೊಡನೆ ಚರ್ಚಿಸಿ ವಿತರಕರ ಹಾಗೂ ಪ್ರದರ್ಶಕರ ಸಹಕಾರದೊಂದಿಗೆ ನಮ್ಮ ಚಿತ್ರ 'ಗಂಧದಗುಡಿ'ಯ ವೀಕ್ಷಣೆಗೆ ವಿಶೇಷ ಕೊಡುಗೆ ನೀಡುತ್ತಿರುವುದಾಗಿ ಅವರು ಘೋಷಿಸಿದ್ದಾರೆ.

ನ.7ರಿಂದ ನ.10ರ ವರೆಗೂ ಸಿಂಗಲ್​ ಸ್ಕ್ರೀನ್​ ಥೀಯೇಟರ್​​ಗಳಲ್ಲಿ 56 ರೂ. ಹಾಗೂ ಮಲ್ಟಿಪ್ಲೆಕ್ಸ್​​ಗಳಲ್ಲಿ 112 ರೂ. ಟಿಕೆಟ್ ದರದಲ್ಲಿ ಕರ್ನಾಟಕ ರಾಜ್ಯಾದ್ಯಂತ ದಿನದ ಎಲ್ಲ ಆಟಗಳನ್ನು ಪ್ರದರ್ಶನ ಮಾಡಬೇಕೆಂದು ನಿರ್ಧಾರ ಮಾಡಿದ್ದೇವೆ ಎಂದಿರುವ ಅಶ್ವಿನಿ, ನಮ್ಮ ಮಕ್ಕಳ ನಾಳೆಗಳಿಗಾಗಿ ಕಾಡನ್ನು ಸಂರಕ್ಷಿಸೋಣ, ಗಂಧದಗುಡಿಯನ್ನು ತೋರಿಸೋಣ ಎಂದು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net