‘ಡಾಲರ್ಸ್ ಪೇಟೆ’ಯಲ್ಲಿ 'ಲೂಸಿಯ' ಪವನ್ ಪತ್ನಿ …

A Day in Dollarspete - - Sowmya Jaganmohan
Published on

ಬೆಂಗಳೂರು: ಆ ಕಡೆ 'ಲೂಸಿಯಾ' ಪವನ್​, 'ಧೂಮಂ' ಚಿತ್ರದ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದರೆ, ಈ ಕಡೆ ಅವರ ಪತ್ನಿ ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಕೆಲವು ಚಿತ್ರಗಳಲ್ಲಿ ನಟಿಸಿರುವ ಪವನ್​ ಪತ್ನಿ ಸೌಮ್ಯ ಜಗನ್​ಮೂರ್ತಿ, ಇದೀಗ 'ಡಾಲರ್ಸ್​ ಪೇಟೆ' ಎಂಬ ಹೊಸ ಚಿತ್ರದಲ್ಲಿ ನಟಿಸಿದ್ದಾರೆ.

ಮೋಹನ್ ಎನ್. ಮುನಿನಾರಾಯಣಪ್ಪ ನಿರ್ದೇಶನದ ಮೊದಲ ಚಿತ್ರ 'ಎ ಡೇ ಇನ್​ ಡಾಲರ್ಸ್ ಪೇಟೆ’. ಈಗಾಗಲೇ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಇತ್ತೀಚೆಗಷ್ಟೇ ಚಿತ್ರದ ಮೊದಲ ನೋಟದ ಪೋಸ್ಟರ್​ ಬಿಡುಗಡೆಯಾಗಿತ್ತು. ಈಗ ಸೌಮ್ಯ ಅವರ ಪಾತ್ರವನ್ನು ಪರಿಚಯಿಸುವಂತಹ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ.

ಹೈಪರ್ ಲಿಂಕ್ ಥ್ರಿಲ್ಲರ್ ಕಥಾಹಂದರ ಒಳಗೊಂಡ ಈ ಚಿತ್ರದಲ್ಲಿ ಸೌಮ್ಯ ಜಗನ್ ಮೂರ್ತಿ ಕ್ಯಾಶಿಯರ್ ಪಾತ್ರವನ್ನು ನಿರ್ವಹಿಸಿದ್ದಾರೆ. ತಲೆಗೆ ಕಿರೀಟ ತೊಟ್ಟು, ಕೈಯಲ್ಲಿ ಗರಿಗರಿ ನೋಟು ಹಿಡಿದಿರುವ ಅವರ ಕ್ಯಾರೆಕ್ಟರ್ ಪೋಸ್ಟರ್ ಸೋಷಿಯಲ್​ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಚಿತ್ರತಂಡದ ವತಿಯಿಂದ ಇನ್ನಷ್ಟು ಪಾತ್ರಗಳ ಪೋಸ್ಟರ್​ ಬಿಡುಗಡೆಯಾಗುತ್ತದಂತೆ.

'ಎ ಡೇ ಇನ್​ ಡಾಲರ್ಸ್ ಪೇಟೆ’ ಚಿತ್ರದಲ್ಲಿ ಸೌಮ್ಯ ಜಗನ್ ಮೂರ್ತಿ, ಆಕರ್ಷ್ ಕಮಲ, ವೆಂಕಟ್ ರಾಜು ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದು, ಪೃಥ್ವಿ ಅಂಬರ್ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ. ಸೂರಜ್ ಜೋಯಿಸ್ ಅವರ ಸಂಗೀತ ಮತ್ತು ಆನಂದ್​ ಸುಂದರೇಶ್​ ಅವರ ಛಾಯಾಗ್ರಹಣವಿರುವ ಈ ಚಿತ್ರವನ್ನು ಪೂಜಾ.ಟಿ.ವೈ ನಿರ್ಮಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net