More

    ಬಾಲಿವುಡ್​ ಮತ್ತು ತಮ್ಮ ಚಿತ್ರಗಳ ನಡುವಿನ ವ್ಯತ್ಯಾಸವೇನು? ರಾಜಮೌಳಿ ಹೇಳ್ತಾರೆ ಕೇಳಿ …

    ಮುಂಬೈ: ಎಸ್​.ಎಸ್. ರಾಜಮೌಳಿ ನಿರ್ದೇಶನದ ಮತ್ತು ಜ್ಯೂನಿಯರ್​ ಎನ್​ಟಿಆರ್​ ಹಾಗೂ ರಾಮ್​ಚರಣ್​ ತೇಜ ಅಭಿನಯದ ‘ಆರ್​ಆರ್​ಆರ್​’ ಚಿತ್ರವು ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ. ಆಸ್ಕರ್​ ಪ್ರಶಸ್ತಿ ಕಣದಲ್ಲಿರುವುದರ ಜತೆಗೆ ಗೋಲ್ಡನ್​ ಗ್ಲೋಬ್​ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

    ಇದನ್ನೂ ಓದಿ: ಶಾರುಖ್​ ಖಾನ್​ ಚಿತ್ರವೊಂದು ಹಿಟ್​ ಆಗಿ ಎಷ್ಟು ಸಮಯ ಆಯ್ತು ಗೊತ್ತಾ?

    ತಮ್ಮ ಚಿತ್ರದ ಹಾಡುಗಳ ಬಗ್ಗೆ ಇತ್ತೀಚೆಗೆ ಮಾತನಾಡಿರುವ ರಾಜಮೌಳಿ, ‘ಬಾಲಿವುಡ್​ನವರು ಹಾಡುಗಳನ್ನು ಬಳಸುವುದಕ್ಕೂ ನಾನು ಬಳಸುವುದಕ್ಕೂ ವ್ಯತ್ಯಾಸವಿದೆ. ನಾನು ಹಾಡುಗಳನ್ನು ಕಥೆ ಮುಂದುವರೆಸುವುದಕ್ಕೆ ಬಳಸುತ್ತೇನೆ. ನನ್ನ ಚಿತ್ರದ ಹಾಡುಗಳು ಬರೀ ಡ್ಯಾನ್ಸ್​ಗೆ ಸೀಮಿತವಾಗಿರುವುದಿಲ್ಲ ಅಥವಾ ಕಥೆಯನ್ನು ತುಂಡರಿಸುವುದಿಲ್ಲ. ಕಥೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗವ ಮಹತ್ವ ಪಾತ್ರವನ್ನು ನನ್ನ ಚಿತ್ರಗಳ ಹಾಡುಗಳು ಮಾಡುತ್ತವೆ’ ಎಂದು ರಾಜಮೌಳಿ ಹೇಳಿಕೊಂಡಿದ್ದಾರೆ.

    ‘RRR’ ಚಿತ್ರವು ಮಾರ್ಚ್​​ನಲ್ಲಿ ಬಿಡುಗಡೆಯಾಗಿತ್ತು. ಚಿತ್ರವು ಸಾವಿರ ಕೋಟಿ ರೂ. ಕಲೆಕ್ಷನ್​ ಕಂಡಿತ್ತು. ಆ ನಂತರ ಟಿವಿ, ಓಟಿಟಿ ಎಲ್ಲೆಡೆ ಪ್ರಸಾರವಾಗಿತ್ತು. ಈ ಚಿತ್ರವು ಮೊದಲ ದಿನವೇ 223 ಕೋಟಿ ರೂ.ಗಳ ಕಲೆಕ್ಷನ್​ ದಾಖಲಿಸುವ ಮೂಲಕ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಮಾಡಿತ್ತು.

    ಇದನ್ನೂ ಓದಿ: ಕ್ಯಾನ್ಸರ್​ ಇರುವ ವಿಷಯ ಕೇಳಿದಾಗ ಸಂಜಯ್​ ದತ್​ ಮೊದಲ ರಿಯಾಕ್ಷನ್ ಏನಾಗಿತ್ತಂತೆ ಗೊತ್ತಾ?

    ಈ ಚಿತ್ರವನ್ನು ವಿ.ವಿ. ದಾನಯ್ಯ ನಿರ್ಮಿಸಿದ್ದು, ಆಲಿಯಾ ಭಟ್​, ಅಜಯ್​ ದೇವಗನ್​ ಮುಂತಾದವರು ನಟಿಸಿದ್ದಾರೆ. ಎಂ.ಎಂ. ಕೀರವಾಣಿ ಅವರ ಸಂಗೀತ ಈ ಚಿತ್ರಕ್ಕಿದೆ.

    ರಾಖಿ ಸಾವಂತ್ ಜತೆಗಿನ ಮದುವೆ ಫೇಕಾ..? ನಿಜವಾ..?; ಆದಿಲ್ ಹೇಳೋದೇನು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts