More

    ರಾಖಿ ಸಾವಂತ್ ಜತೆಗಿನ ಮದುವೆ ಫೇಕಾ..? ನಿಜವಾ..?; ಆದಿಲ್ ಹೇಳೋದೇನು…

    ನವ ದೆಹಲಿ: ಆದಿಲ್ ಖಾನ್ ದುರಾನಿ ರಾಖಿ ಸಾವಂತ್​​ಳನ್ನು ಮದುವೆ ಆಗಿರುವುದಾಗಿ ಸೋಶಿಯಲ್ ಮಿಡಿಯಾದಲ್ಲಿ ಬಹಿರಂಗ ಪಡಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಬಾಲಿವುಡ್ ನಟಿ ರಾಖಿ ಸಾವಂತ್ ಮದುವೆ ವಿಚಾರದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿತ್ತು.

    ಬಾಯ್‌ಫ್ರೆಂಡ್‌ ಆದಿಲ್ ಖಾನ್‌ ದುರ್ರಾನಿ ಅವರನ್ನು ಬಾಲಿವುಡ್‌ ನಟಿ ರಾಖಿ ಸಾವಂತ್‌ ಮದುವೆ ಆಗಿದ್ದಾರೆ ಎನ್ನಲಾದ ಫೋಟೋವೊಂದು ಸಾಮಾಜಿಕ ಜಾಲತಾಣಲ್ಲಿ ವೈರಲ್‌ ಆಗಿತ್ತು. ಇದು ಹಲವು ಊಹಾಪೋಹಗಳು ಹಬ್ಬಲು ಅವಕಾಶ ಮಾಡಿಕೊಟ್ಟಿತ್ತು. ಇದರ ಬೆನ್ನಲ್ಲೇ ರಾಖಿ ಸಾವಂತ್ ಆದಿಲ್ ಖಾನ್ ನನಗೆ ಮೋಸ ಮಾಡಿದ್ದೇನೆ ಎಂದು ಹೇಳಿ ಕಣ್ಣೀರಿಟ್ಟಿದ್ದಳು.

    ಆದಿಲ್ ಖಾನ್ ಹಾಗೂ ನಾನು 6 ತಿಂಗಳ ಹಿಂದೆ ವಿವಾಹವಾಗಿದ್ದೆವು. ಮದುವೆಯ ನಂತರ ಆತ ಹೇಳಿದಂತೆ ನಾನು ಫಾತಿಮಾ ಆಗಿ ಬದಲಾದೆ. ಆದಿಲ್ ಸೂಚನೆಯಂತೆ ನಮ್ಮ ಮದುವೆಯ ವಿಚಾರವನ್ನು ಎಲ್ಲೂ ಬಹಿರಂಗಪಡಿಸಿರಲಿಲ್ಲ. ಆದರೆ ಈಗ ಮಾತ್ರ ಆತ ನನ್ನನ್ನು ಮದುವೆಯಾಗಿಲ್ಲ ಎಂದು ಹೇಳಿಕೊಂಡಿದ್ದಾನೆ ಎಂದು ರಾಖಿ ಸಾವಂತ್ ಹೇಳಿಕೊಂಡಿದ್ದಳು.

    ಇದೀಗ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಿದ್ದು, ರಾಖಿ ಸಾವಂತ್​​ಳನ್ನು ತಾನು ಮದುವೆ ಆಗಿರುವುದಾಗಿ ಆದಿಲ್ ಖಾನ್ ಹೇಳಿಕೊಂಡಿದ್ದಾನೆ. ಈ ಬಗ್ಗೆ ಆದಿಲ್ ಇನ್ಸ್​​ಟಾಗ್ರಾಂನಲ್ಲಿ ಮದುವೆ ದಿನದ ಫೋಟೋ ಹಂಚಿಕೊಂಡಿದ್ದಾನೆ. ಅಲ್ಲದೇ, ನಾನು ರಾಖಿ ಸಾವಂತ್​ಳನ್ನು ಮದುವೆಯಾಗಿರುವುದಾಗಿ ಎಲ್ಲೂ ಹೇಳಿಕೊಂಡಿಲ್ಲ. ಇದಕ್ಕೆ ನನ್ನದೇ ಆದಂತಹ ಹಲವು ವೈಯಕ್ತಿಕ ಕಾರಣಗಳಿತ್ತು ಎಂದು ಆದಿಲ್ ಖಾನ್ ಬಹಿರಂಗ ಪಡಿಸಿದ್ದಾನೆ.

    ನಾನು ರಾಖಿ ಸಾವಂತ್​ಳನ್ನು ಪ್ರೀತಿಸುತ್ತಿದ್ದುದು ನನ್ನ ಮನೆಯವರಿಗೆ ಇಷ್ಟವಿರಲಿಲ್ಲ. ಹೀಗಾಗಿ ನಮ್ಮ ಮದುವೆ ಆದ ವಿಚಾರ ಮನೆಯವರಿಗೆ ತಿಳಿದಿರಲಿಲ್ಲ. ನಮ್ಮಿಬ್ಬರ ಮದುವೆ ವಿಚಾರ ಬಹಿರಂಗವಾದರೆ ನನ್ನ ತಂಗಿಗೆ ಗಂಡು ಸಿಗುವುದಿಲ್ಲ ಎಂದು ಭಯವಿತ್ತು. ಆದ್ದರಿಂದ ನಾವು ಗುಟ್ಟಾಗಿ ಮದುವೆಯಾದೆವು ಎಂದು ಆದಿಲ್ ಖಾನ್ ಹೇಳಿಕೊಂಡಿದ್ದಾನೆ ಎಂದು ವರದಿಯಾಗಿದೆ.

     
     
     
     
     
    View this post on Instagram
     
     
     
     
     
     
     
     
     
     
     

    A post shared by Adil Khan Durrani (@iamadilkhandurrani)

    ಆದಿಲ್ ಖಾನ್ ಇನ್ಸ್​ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡು ಹ್ಯಾಪಿ ಮ್ಯಾರೀಡ್ ಲೈಫ್ ಎಂದು ಬರೆದಿದ್ದಾನೆ. ಇದಕ್ಕೆ ಕಮೆಂಟ್ ಮಾಡಿದ ರಾಖಿ ಸಾವಂತ್ ಥ್ಯಾಂಕ್ಸ್ ಜಾನ್, ಲಾಟ್ಸ್ ಆಫ್ ಲವ್ ಎಂದು ಬರೆದುಕೊಂಡಿದ್ದಾಳೆ. (ಏಜೆನ್ಸೀಸ್)

    ಮುರುಡೇಶ್ವರ ದೇವಾಲಯದ ಹೆಬ್ಬಾಗಿಲಿನಲ್ಲಿ ತಮಿಳು ಅಕ್ಷರ ಬಳಕೆ; ಕನ್ನಡಕ್ಕೆ ಪ್ರಾಶಸ್ತ್ಯ ನೀಡಿ ಎಂದ ಕನ್ನಡ ಪ್ರೇಮಿಗಳು

     

    VIDEO | ದಾಂಪತ್ಯ ಬದುಕಿಗೆ ಪ್ರವೇಶಿಸಿದ ಟಾಮಿ ಮತ್ತು ಜೆಲ್ಲಿ!

    ‘ನಾ ನಾಯಕಿ’ ಸಮಾವೇಶ ‘ನಾಲಾಯಕ್’ ಕಾರ್ಯಕ್ರಮವೆಂದು ವ್ಯಂಗ್ಯವಾಡಿದ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts