ಟೊವಿನೋ ಥಾಮಸ್ ಹಾಗೂ ಮಮಿತಾ ಬೈಜು ಮುಖ್ಯಭೂಮಿಕೆಯ ಮಲಯಾಳಂ ಆಕ್ಷನ್ ಹಾಗೂ ಪೀರಿಯಾಡಿಕ್ ಡ್ರಾಮಾ ಸಿನಿಮಾ ಪಲ್ಲಿ ಚಟ್ಟಂಬಿ ಸೋನಿ ಲೈವ್ನಲ್ಲಿ ರಿಲೀಸ್ ಆಗಲಿದೆ. 1950ರ ದಶಕದ ಕೇರಳದ ಕತೆಯನ್ನು ಈಸಿನಿಮಾ ಹೊಂದಿದೆ. ಹಿಂದೂ ಮತ್ತು ಕ್ರಿಶ್ಚಿಯನ್ ಕುಟುಂಬಗಳಿಂದ ಬೆಳೆದ ಕೃಷ್ಣ ಪಿಳ್ಳೈ ಎಂಬ ವ್ಯಕ್ತಿಯ ಮಧ್ಯೆ ನಡೆಯುವ ಕತೆಯನ್ನು ಆಧರಿಸಿದ ಸಿನಿಮಾ ಇದಾಗಿದೆ. ಈ ಚಿತ್ರದಲ್ಲಿ ಕಯಾದು ಲೋಹರ್, ಸಿದ್ದಿಕ್, ವಿಜಯರಾಘವನ್, ಬಾಬುರಾಜ್ ಮತ್ತು ಶತ್ರು ಕೂಡ ಇದ್ದಾರೆ, ಪೃಥ್ವಿರಾಜ್ ಸುಕುಮಾರನ್ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.