

ಹೈದರಾಬಾದ್: ದಕ್ಷಿಣದ ಸಿನಿಮಾರಂಗದಲ್ಲಿ ಹೆಸರು ಮಾಡುತ್ತಿರುವ ನಟಿ ಅನುಪಮಾ ಪರಮೇಶ್ವರನ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಮೂಲ ಮಲಯಾಳಿಯಾದರೂ, ತೆಲುಗಿನಲ್ಲಿ ಹೆಚ್ಚು ಹೆಚ್ಚು ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಕನ್ನಡದಲ್ಲಿಯೂ ನಟಿಸಿದ್ದಾರೆ. ಇದೆಲ್ಲದರ ನಡುವೆಯೇ ಅ ಆ ಇ ಈ ಅಕ್ಷರಮಾಲೆಯನ್ನೂ ಕಲಿಯುವುದರಲ್ಲಿ ಅನುಪಮಾ ಕಾರ್ಯೋನ್ಮುಖರಾಗಿದ್ದಾರೆ.
ಹಾಗಂತ ಅವರೇನು ಕನ್ನಡದ ಅಕ್ಷರಮಾಲೆಯನ್ನು ಕಲಿಯುತ್ತಿಲ್ಲ. ಬದಲಿಗೆ ತೆಲುಗಿನ ಅಕ್ಷರಮಾಲೆಯನ್ನು ಕಲಿಯುತ್ತಿದ್ದಾರೆ. ಹೌದು, ದಕ್ಷಿಣ ಭಾರತದ ನಾಲ್ಕು ಚಿತ್ರರಂಗಗಳ ಪೈಕಿ ತೆಲುಗಿನಲ್ಲಿ ಅನುಪಮಾ ಹೆಚ್ಚಿನ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಶಾಶ್ವತವಾಗಿ ತೆಲುಗು ನೆಲದಲ್ಲಿಯೇ ನೆಲೆಯೂರುವ ಸಲುವಾಗಿ ತೆಲುಗನ್ನು ಬರೆಯುವುದಕ್ಕೆ ಮತ್ತು ಓದುವುದಕ್ಕೆ ಶುರುಮಾಡಿದ್ದಾರೆ.
ಇದನ್ನೂ ಓದಿ: ನಿರ್ಮಾಪಕರ ಸಂಘದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ
ಅದರಂತೆ ತೆಲುಗು ಅಕ್ಷರ ಮಾಲೆಗಳಿರುವ ಕಾಪಿ ಪುಸ್ತಕವನ್ನು ಹಿಡಿದುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿದ್ದಾರೆ. 'ಅ ದಿಂದಲೇ ಶುರುಮಾಡೋಣ. ಒಂದು ಹೊಸ ಗುರಿ.. ಥ್ಯಾಂಕ್ಯು ಗೋಪಿ ಈ ಕಾಫಿ ಪುಸ್ತಕ ನೀಡಿದಕ್ಕೆ’ ಎಂದು ಕ್ಯಾಪ್ಶನ್ ನೀಡಿದ್ದಾರೆ. (ಏಜೆನ್ಸೀಸ್)